ಮನೆ ತಂತ್ರಜ್ಞಾನ ಮಳೆಯಿಂದ ಸ್ಮಾರ್ಟ್​​ ಫೋನ್‌ ಹಾಳಾಗದಂತೆ ಕಾಪಾಡಲು ಇಲ್ಲಿದೆ ಸಲಹೆ

ಮಳೆಯಿಂದ ಸ್ಮಾರ್ಟ್​​ ಫೋನ್‌ ಹಾಳಾಗದಂತೆ ಕಾಪಾಡಲು ಇಲ್ಲಿದೆ ಸಲಹೆ

0

ಸ್ಮಾರ್ಟ್‌ ಫೋನ್‌ ಗಳು ಇಂದು ನಮ್ಮೆಲ್ಲರ ಜೀವನದ ಪ್ರಮುಖ ಭಾಗವಾಗಿದೆ. ಆದ್ದರಿಂದ ಸ್ಮಾರ್ಟ್‌ ಫೋನ್‌ ಎಲ್ಲೆಡೆ ನಮ್ಮ ಮುಖ್ಯ ಸಂಗಾತಿಯಾಗುತ್ತದೆ. ಆದರೆ, ಭಾರತದಲ್ಲಿ ಈಗ ಮುಂಗಾರು ಹಂಗಾಮು ಆರಂಭವಾಗಲಿದೆ. ಕಚೇರಿಯಿಂದ ಅಥವಾ ಹೊರಗೆ ಹೋಗುವಾಗ, ಯಾವಾಗ ಬೇಕಾದರೂ ಮಳೆಯಲ್ಲಿ ಮೊಬೈಲ್​ ಒದ್ದೆಯಾಗಬಹುದು. ಇದರಿಂದ ಸ್ಮಾರ್ಟ್​​ಫೋನ್​ ಹಾಳಾಗಬಹುದು.

Join Our Whatsapp Group

ಭಾರತದಲ್ಲಿ ಮುಂಗಾರು ಈಗಾಗಲೇ ಆರಂಭವಾಗಿದೆ. ವಿಪರೀತ ಸೆಖೆಯಿಂದ ಮುಕ್ತಿ ಪಡೆಯಲು ಹಲವರು ಮಳೆಯಲ್ಲಿ ಒದ್ದೆಯಾಗಲು ಇಷ್ಟಪಡುತ್ತಿದ್ದರೆ, ಈ ಸಂದರ್ಭದಲ್ಲಿ ಕೆಲವರ ನಿರ್ಲಕ್ಷ್ಯದಿಂದ ಸ್ಮಾರ್ಟ್ ಫೋನ್ ಮಳೆಯಲ್ಲಿ ಹಾಳಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ನಿಮ್ಮ ಸ್ಮಾರ್ಟ್‌ ಫೋನ್ ಅನ್ನು ಮಳೆನೀರಿನಿಂದ ರಕ್ಷಿಸಲು 5 ಸಲಹೆಗಳನ್ನು ಫಾಲೋ ಮಾಡಿ.

ಸ್ಮಾರ್ಟ್ ಫೋನ್ ಮಳೆಯಲ್ಲಿ ಒದ್ದೆಯಾಗದಂತೆ ರಕ್ಷಿಸಲು ವಾಟರ್ ಪ್ರೂಫ್ ಫೋನ್ ಕೇಸ್ ಖರೀದಿಸಬೇಕು. ಇದು ನೀರು ಮತ್ತು ತೇವಾಂಶ ಎರಡರಿಂದಲೂ ಸಾಧನವನ್ನು ರಕ್ಷಿಸುತ್ತದೆ. ಗ್ರಾಹಕರು ಈ ಜಲನಿರೋಧಕ ಫೋನ್ ಕೇಸ್‌ ಗಳನ್ನು ಆಫ್‌ಲೈನ್ ಮಾರುಕಟ್ಟೆಗಳು ಮತ್ತು ಆನ್‌ ಲೈನ್ ಇ-ಕಾಮರ್ಸ್ ಪ್ಲಾಟ್‌ ಫಾರ್ಮ್‌ ಗಳಿಂದ ಸುಲಭವಾಗಿ ಖರೀದಿಸಬಹುದು.

ಮಾನ್ಸೂನ್ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ ಫೋನ್ ಹಾಳಾಗದಂತೆ ರಕ್ಷಿಸಲು ಉತ್ತಮ ಮಾರ್ಗವೆಂದರೆ ಮಳೆಯಲ್ಲಿ ಹೊರಗೆ ಹೋಗುವಾಗ ನಿಮ್ಮ ಫೋನ್ ಬಳಸುವುದನ್ನು ಇಟ್ಟುಕೊಳ್ಳದೇ ಇರುವುದು. ಮತ್ತೊಂದೆಡೆ, ಫೋನ್ ಅಥವಾ ಮೆಸೇಜ್ ಮಾಡುವ ಸಂದರ್ಭದಲ್ಲಿ ನೀರು ಬೀಳದ ಸ್ಥಳಕ್ಕೆ ಹೋಗಿ ಬಳಸಿ.

ನಿಮ್ಮ ಸ್ಮಾರ್ಟ್‌ ಫೋನ್ ಮಳೆಯಲ್ಲಿ ಒದ್ದೆಯಾದರೆ ಹೆಚ್ಚು ಚಿಂತಿಸದೆ, ಆ ಸಮಯದಲ್ಲಿ, ಮೊದಲನೆಯದಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೀರಿನ ತೇವಾಂಶವನ್ನು ತೆಗೆದುಹಾಕಲು, ಅದನ್ನು ಮೃದುವಾದ ಬಟ್ಟೆ ಅಥವಾ ಟಿಶ್ಯೂ ಪೇಪರ್‌ನಿಂದ ಬೇಗನೆ ಒಣಗಿಸಿ. ಫೋನ್‌ ನಿಂದ ನೀರನ್ನು ಹೊರಹಾಕಲು ಉತ್ತಮ ಮಾರ್ಗವೆಂದರೆ ಅದನ್ನು ಅಕ್ಕಿ ತುಂಬಿದ ಬಟ್ಟಲಿನಲ್ಲಿ ಇಡುವುದು ಉತ್ತಮ.

ಸ್ಮಾರ್ಟ್ ಫೋನ್ ಖರೀದಿಸುವಾಗ ಐಪಿ ರೇಟಿಂಗ್ ಅನ್ನು ಸಹ ಪರಿಶೀಲಿಸಿ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP ರೇಟ್ ಫೀಚರ್ಸ್​ ಅನ್ನು ಮೊಬೈಲ್​ನಲ್ಲಿ ನೀಡಿರುತ್ತಾರೆ. ಈ ಸಂದರ್ಭದಲ್ಲಿ, ಗ್ರಾಹಕರು IP67 ಅಥವಾ IP68 ರೇಟೆಡ್ ಸ್ಮಾರ್ಟ್‌ ಫೋನ್‌ಗಳನ್ನು ಮಾತ್ರ ಖರೀದಿಸಬೇಕು. ಈ ರೇಟಿಂಗ್ ಸ್ಮಾರ್ಟ್‌ ಫೋನ್‌ ನ ನೀರಿನ ಪ್ರತಿರೋಧವನ್ನು ಸೂಚಿಸುತ್ತದೆ, ಅಂದರೆ ಸೀಮಿತ ಆಳದಲ್ಲಿ ನೀರಿನಲ್ಲಿ ಮುಳುಗಿದರೂ ಸ್ಮಾರ್ಟ್‌ ಫೋನ್ ಹಾನಿಯಾಗುವುದಿಲ್ಲ.