ಮನೆ ಸುದ್ದಿ ಜಾಲ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತ್ಯು

ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತ್ಯು

0

ಮದ್ದೂರು: ಮದ್ದೂರು ಕೆರೆಯ ಕೊಲ್ಲಿ ನಾಲೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ಶನಿವಾರ ಜರುಗಿದೆ.

Join Our Whatsapp Group


ಪಟ್ಟಣದ ರಾಮ್ ರಹೀಂ ನಗರ ಬಡಾವಣೆಯ ನಿವಾಸಿ ಅಹಮ್ಮದ್ ಪಾಷಾ ಅವರ ಪುತ್ರ ಅಜ್ಮಾನ್ ಪಾಷಾ (೧೬) ಹಾಗೂ ಈತನ ಸ್ನೇಹಿತ ರಾಮನಗರದ ಮಹಮ್ಮದ್ ಅಕ್ಮಲ್ ಅವರ ಪುತ್ರ ಮಹಮ್ಮದ್ ಅಲಿ (೧೪) ಮೃತಪಟ್ಟ ಬಾಲಕರಾಗಿದ್ದಾರೆ.
ಅಜ್ಮಾನ್ ಪಾಷಾ ಪಟ್ಟಣದ ಸರಕಾರಿ ಉರ್ದು ಶಾಲೆಯಲ್ಲಿ ೧೦ ತರಗತಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದ್ದು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಇಬ್ಬರು ಬಾಲಕರು ಎಲ್‌ಐಸಿ ಬಡಾವಣೆಯ ಹಿಂಭಾಗದ ಕೊಲ್ಲಿ ನಾಲೆಯಲ್ಲಿ ಈಜಲು ತೆರಳಿದ್ದ ವೇಳೆ ಈಜಲು ಬಾರದೆ ಮೃತಪಟ್ಟಿದ್ದು ಸ್ಥಳೀಯರು ಪೊಲೀಸರಿಗೆ ವಿಷಯಮುಟ್ಟಿಸಿದ ಬಳಿಕ ಶವಗಳನ್ನು ಮೇಲಕ್ಕೆ ತೆಗೆಯಲಾಗಿದೆ.
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ಬಾಲಕರ ಶವವನ್ನು ಪಟ್ಟಣದ ತಾಲೂಕು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.