ಮನೆ ಅಪರಾಧ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ಕಡೆಗಣನೆ: ವಾಟಾಳ್ ನಾಗರಾಜ್ ಪ್ರತಿಭಟನೆ

ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ಕಡೆಗಣನೆ: ವಾಟಾಳ್ ನಾಗರಾಜ್ ಪ್ರತಿಭಟನೆ

0

ಮೈಸೂರು:  ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಕರ್ನಾಟಕವನ್ನು ಕಡೆಗಣಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ವೃತ್ತದ ಬಳಿ ಕೇಂದ್ರ ಸರ್ಕಾರ ನಡೆ ಖಂಡಿಸಿ ವಾಟಾಳ್ ನಾಗರಾಜ್ ಧರಣಿ ನಡೆಸಿದರು.

ಈ ಸಂದರ್ಭ ಮಾತನಾಡಿದ ಅವರು, ಕೇಂದ್ರ  ಬಜೆಟ್ ನಲ್ಲಿ ಸಂಪೂರ್ಣವಾಗಿ ಕರ್ನಾಟಕ ಕಡೆಗಣಿಸಿದ್ದಾರೆ. ಕರ್ನಾಟಕ ಯೋಜನೆಗಳ, ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಬೇಡಿಕೆ ಇತ್ತು. ಆಯವ್ಯಯದಲ್ಲಿ ಕರ್ನಾಟಕವನ್ನ ತಬ್ಬಲಿ ಮಾಡಿದ್ದಾರೆ. ಹಣಕಾಸು ಸಚಿವರು ಕರ್ನಾಟಕದಿಂದ ಗೆದ್ದಿದ್ದಾರೆ. ಆದರೆ ಕರ್ನಾಟಕ ಬಗ್ಗೆ ಅವರಿಗೆ ಗೌರವ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿಗೆ ಕರ್ನಾಟಕ್ಕಿಂತ ತಮಿಳುನಾಡಿ ಹತ್ತಿರ. ಇದು ಸರಿಯಲ್ಲ. ಕಾವೇರಿ, ಪೆನ್ನಾರ್ ನದಿ ಜೋಡಣೆ ಬೇಡ. ಇದರಿಂದ ನಮಗೆ ನಷ್ಟ ಆಗಲಿದೆ. ಕೇಂದ್ರ ಯಾರ ಅನುಮತಿಯನ್ನು ಪಡೆದಿಲ್ಲ. ತಮಗೆ ಇಷ್ಟ ಬಂದಂತೆ ತೀರ್ಮಾನ ಮಾಡಿದೆ ಯಾವುದೇ ಕಾರಣಕ್ಕೂ ಈ ಯೋಜನೆಗೆ ಅವಕಾಶ ಕೊಡೋದಿಲ್ಲ. ನಮಗೆ ಮೇಕೆದಾಟು ಯೋಜನೆ ಬೇಕು. ಇದಕ್ಕಾಗಿ ಕನಿಷ್ಠ 5 ಸಾವಿರ ಕೋಟಿ ರೂ ನೀಡಬೇಕು. ತಮಿಳನಾಡಿಗೆ ಹಣ ನೀಡ್ತಾರೆ ನಮಗೆ ಯಾಕೆ ನೀಡಲ್ಲ. ನಮ್ಮ ಸಂಸದರು ಎಳವರಾಗಿದ್ದಾರೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.

ಮಂತ್ರಿಗಿರಿಗಾಗಿ ಕಿತ್ತಾಟ ಸರಿಯಲ್ಲ:

ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಮಾತನಾಡಿದ ವಾಟಾಳ್ ನಾಗರಾಜ್, ಖಾಲಿ ಇರೋದು 4 ಸಚಿವ ಸ್ಥಾನ. ಮಂತ್ರಿ ಆಗಬೇಕು ಅನ್ನೊರು 40 ಜನ. ಬಿಜೆಪಿ ಶಾಸಕರು ಬೀದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಯತ್ನಳ್ , ರೇಣುಕಾಚಾರ್ಯಗೆ ಮಾತಾಡಲು ಅಧಿಕಾರ ಕೊಟ್ಟವರು ಯಾರು. ಬೊಮ್ಮಾಯಿ ಆಡಳಿತವನ್ನ ಶಕ್ತಿಹೀನ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ ಉತ್ತಮ ಆಡಳಿತ ನಡೆಯಬೇಕು. ಮಂತ್ರಿಗಿರಿಗೆ ಕಿತ್ತಾಟ ಆಡುವುದು ಸರಿಯಲ್ಲ. ಲಂಗು ಲಗಾಮ್ ಇಲ್ಲದೆ ಮಾತನಾಡುತ್ತಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಹಿಂದಿನ ಲೇಖನಶೀಘ್ರದಲ್ಲಿ ಜೆಡಿಎಸ್ ಸೇರ್ಪಡೆ: ಸಿಎಂ ಇಬ್ರಾಹಿಂ
ಮುಂದಿನ ಲೇಖನಉರ್ದು, ಹಿಜಾಬ್ ಬೇಕು ಎಂದಾದರೆ ಪಾಕಿಸ್ತಾನಕ್ಕೆ ಹೋಗಲಿ: ಬಸವನಗೌಡ ಪಾಟೀಲ ಯತ್ನಾಳ