ಮನೆ ರಾಜಕೀಯ ಸಮೃದ್ಧಿ ಎಕ್ಸ್ಪ್ರೆಸ್ ವೇ: ಆರು ತಿಂಗಳಲ್ಲಿ ಅಪಘಾತದಲ್ಲಿ 88 ಜನರ ಸಾವು – ಅಧಿಕಾರಿ

ಸಮೃದ್ಧಿ ಎಕ್ಸ್ಪ್ರೆಸ್ ವೇ: ಆರು ತಿಂಗಳಲ್ಲಿ ಅಪಘಾತದಲ್ಲಿ 88 ಜನರ ಸಾವು – ಅಧಿಕಾರಿ

0

 ಮುಂಬೈ: ಶನಿವಾರ ಖಾಸಗಿ ಬಸ್ ಗೆ ಬೆಂಕಿ ಹತ್ತಿಕೊಂಡು ಮೃತಪಟ್ಟ 25 ಜನರು ಸೇರಿ ಮಹಾರಾಷ್ಟ್ರದ ಸಮೃದ್ಧಿ ಎಕ್ಸ್ಪ್ರೆಸ್ ವೇ ನಲ್ಲಿ ಕಳೆದ ಆರು ತಿಂಗಳಲ್ಲಿ ರಸ್ತೆ ಅಪಘಾತಗಳಲ್ಲಿ 88 ಜನರು ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Join Our Whatsapp Group

 ಆರು ಲೇನನ್ ಎಕ್ಸ್ಪ್ರೆಸ್ ವೇ ನಲ್ಲಿ ಅಪಘಾತಗಳಿಗೆ ಹೈವೇ ಹಿಪ್ನಾಸಿಸ್ ಸಹ ಒಂದು ಕಾರಣ ಎಂದು ರಾಜ್ಯ ಹೆದ್ದಾರಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಹೈವೇ ಹಿಪ್ನಾಸಿಸ್ ಎಂದರೆ ಚಾಲಕನು ಯಾವುದೇ ಟ್ರಾಫಿಕ್ ಅಥವಾ ಇತರೆ ಗಮನಹರಿಸಬೇಕಾದ ಅಂಶಗಳು ಇಲ್ಲವಾದಾಗ ಹೆದ್ದಾರಿಯನ್ನೇ  ನೋಡುತ್ತಾ ಸಂಮೋಹನ ಸ್ಥಿತಿಗೆ ತಲುಪುವುದಾಗಿದೆ. ಆ ಅವಧಿಯಲ್ಲಿ ಏನಾಯಿತು ಎಂಬುದು ಚಾಲಕನ ನೆನಪಿನಲ್ಲಿ ಇರುವುದಿಲ್ಲ.

 ಕಳೆದ ವರ್ಷ ಡಿಸೆಂಬರ್ ನಿಂದ ನಾಗ್ಪುರ-ಮುಂಬೈ ಎಕ್ಸ್ ಪ್ರೆಸ್ ಭಾಗಶಃ ತೆರೆದ ಬಳಿಕ ಒಟ್ಟು 39 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಈ ಎಕ್ಸ್‌ಪ್ರೆಸ್ ವೇಯಲ್ಲಿ 616 ಸಣ್ಣ ಮತ್ತು ದೊಡ್ಡ ಅಪಘಾತಗಳು ಸಂಭವಿಸಿವೆ. ಇದರಲ್ಲಿ 656 ಗಂಭೀರ ಮತ್ತು ಸಣ್ಣ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 ಹೆಚ್ಚಿನ ಅಪಘಾತಗಳು ಅತಿಯಾದ ವೇಗ, ಚಾಲಕರು ಚಾಲನೆ ವೇಳೆ ನಿದ್ರಿಸುವುದು ಮತ್ತು ಟೈಯರ್ ಸ್ಪೋಟದಂತಹ ಕಾರಣಗಳಿಂದ ಉಂಟಾಗಿವೆ. ರಸ್ತೆ ಸಮೋಹನದ ಸಮಸ್ಯೆಯನ್ನು ನಿಭಾಯಿಸಲು ಹೆದ್ದಾರಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

 2022 ರಲ್ಲಿ ಮಹಾರಾಷ್ಟ್ರಾದ್ಯಂತ 15,224 ಜನರು ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

 ಶನಿವಾರ ಮುಂಜಾನೆ ಬುಲ್ಧಾನ ಜಿಲ್ಲೆಯ ಎಕ್ಸ್ ಪ್ರೆಸ್ ವೇಯಲ್ಲಿ ಡಿವೈಡರ್ ಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ಗೆ ಬಳಿಕ ಬೆಂಕಿ ಹತ್ತಿಕೊಂಡಿದ್ದರಿಂದ 25 ಪ್ರಯಾಣಿಕರು ಸುಟ್ಟು ಕರಕಲಾದರು ಎಂದು ಪೊಲೀಸರು ತಿಳಿಸಿದ್ದಾರೆ.

 701 ಕಿ.ಮೀ ಉದ್ದದ ನಾಗ್ಪುರ- ಮುಂಬೈ ಸಮೃದ್ಧಿ ಮಹಾಮಾರ್ಗ್ ಸದ್ಯ 601 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.