ಮನೆ ರಾಜಕೀಯ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ: ಜೆಡಿಎಸ್‌ ಶಾಸಕ ಸಿ.ಎಸ್‌.ಪುಟ್ಟರಾಜು

ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ: ಜೆಡಿಎಸ್‌ ಶಾಸಕ ಸಿ.ಎಸ್‌.ಪುಟ್ಟರಾಜು

0

ಮಂಡ್ಯ: ‘ನನ್ನ ರಾಜಕೀಯ ಜೀವನ ಜೆಡಿಎಸ್‌ನಲ್ಲೇ ಆರಂಭವಾಗಿದ್ದು, ಅಲ್ಲಿಯೇ ಕೊನೆಯಾಗಲಿದೆ. ಕಾಂಗ್ರೆಸ್‌ ಸೇರುವ ಪ್ರಶ್ನೆಯೇ ಇಲ್ಲ’ ಎಂದು ಮೇಲುಕೋಟೆ ಕ್ಷೇತ್ರದ ಜೆಡಿಎಸ್‌ ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದ್ದಾರೆ.

ಸುದ್ದಿಗಾರರೊಡನೆ ಶುಕ್ರವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ವಿಷಯವನ್ನು ಎಚ್‌.ಡಿ.ದೇವೇಗೌಡ ಅವರಿಗೆ ತಿಳಿಸಿದ್ದೆ. ನನ್ನ ಕ್ಷೇತ್ರದ ಡಿಂಕಾ ಮಲ್ಲಿಗೆರೆ ಗ್ರಾಮದಲ್ಲಿ ಕುರುಬ ಸಮುದಾಯ ಪ್ರಬಲವಾಗಿದೆ. ಅಲ್ಲಿ ಸಿದ್ದರಾಮೇಶ್ವರ ದೇವಾಲಯದ ಉದ್ಘಾಟನೆಗೆ ಆಹ್ವಾನಿಸಲು ತೆರಳಿದ್ದೆ’ ಎಂದರು.

ಅಷ್ಟಕ್ಕೇ ಕಾಂಗ್ರೆಸ್‌ ಸೇರುತ್ತಿದ್ದೇನೆ ಎಂದು ಸುದ್ದಿ ಹರಡಿದ್ದಾರೆ. 1978ರಲ್ಲಿ ಜನತಾ ಪಕ್ಷದಿಂದ ರಾಜಕಾರಣಕ್ಕೆ ಬಂದೆ. ಇಂದಿನವರೆಗೂ ಪಕ್ಷ ಬಿಡುವ ಬಗ್ಗೆ ಯೋಚಿಸಿಲ್ಲ’ ಎಂದರು.

ಹಿಂದಿನ ಲೇಖನಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ
ಮುಂದಿನ ಲೇಖನಹೈಕೋರ್ಟ್ ರಿಜಿಸ್ಟ್ರಾರ್ ವಿರುದ್ಧ ಮೊಕ್ಕದ್ದಮೆ: ಅರ್ಜಿದಾರರಿಗೆ 11 ರೂ. ದಂಡ ವಿಧಿಸಿದ ಹೈಕೋರ್ಟ್