ಮನೆ ಸಾಹಿತ್ಯ ಆಗಸ್ಟ್ ೧೧ ರಂದು “ಕವಿಗಳ ಕಣ್ಣಲ್ಲಿ ಡಾ. ಯು.ಆರ್. ಅನಂತಮೂರ್ತಿ” ಕವಿಗೋಷ್ಠಿ

ಆಗಸ್ಟ್ ೧೧ ರಂದು “ಕವಿಗಳ ಕಣ್ಣಲ್ಲಿ ಡಾ. ಯು.ಆರ್. ಅನಂತಮೂರ್ತಿ” ಕವಿಗೋಷ್ಠಿ

0

ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ೬ನೇ ಮಾಲಿಕೆ ಕಾರ್ಯಕ್ರಮವಾಗಿ, ಡಾ. ಯು.ಆರ್. ಅನಂತಮೂರ್ತಿ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಎರಡು ದಿನಗಳ ಕಾಲ ನಡೆಯಲಿದೆ. ಈ ಸಂದರ್ಭದಲ್ಲಿ ಆಗಸ್ಟ್ ೧೧ ರಂದು ಮದ್ಯಾಹ್ನ ೨ ರಿಂದ ೫ ರವರೆಗೆ, “ಕವಿಗಳ ಕಣ್ಣಲ್ಲಿ ಡಾ. ಯು.ಆರ್. ಅನಂತಮೂರ್ತಿ” ಕವಿಗೋಷ್ಠಿ ನಡೆಯಲಿದೆ.

Join Our Whatsapp Group

ಕವಿತೆ ಅವರ ಬದುಕು, ಬರಹ, ವಿಚಾರ, ಚಲನಚಿತ್ರ, ಕಾದಂಬರಿ, ಜೀವನ, ಹೋರಾಟ, ಸಮಾಜಮುಖಿ ಚಿಂತನೆಗಳ ಸುತ್ತ ವಿಷಯನ್ನೊಳಗೊಂಡಿರಬೇಕು. ಒಂದು ಪುಟದಲ್ಲಿ ೨೦ ಸಾಲು ಮೀರದಂತಿರಲಿ. ವಾಚನದ ಅವದಿ ೫ ನಿಮಿಷಗಳು ಮಾತ್ರ. (ಹೊಗಳಿಕೆಯ ಕವನಗಳನ್ನು ತಿರಸ್ಕರಿಸಲಾಗುವುದು)

ಈಗಾಗಲೇ ಸಂಸ್ಥೆ ೧೦ ಕವಿ ಸಮ್ಮೇಳನಗಳನ್ನು, ೧೦ ಜನ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ನಡೆಸಲಾಗಿದೆ. ಇಲ್ಲಿ ವಾಚಿಸಿದ ಎಲ್ಲಾ ಕವನಗಳನ್ನು ಸೇರಿಸಿ, ಈಗಾಗಲೇ ಕವಿಗಳ ಕಣ್ಣಲ್ಲಿ ವಿಶ್ವೇಶ್ವರಯ್ಯ ಹಾಗೂ ಬಹುಜನರ ಕವಿತೆಗಳು ಕವನ ಸಂಕಲನ ಪ್ರಕಟಿಸಲಾಗಿದೆ.

ಪ್ರಸ್ತುತ ಈ ವರ್ಷದ ಕೊನೆಯಲ್ಲಿ ಮತ್ತೊಂದು ಕವನ ಸಂಕಲನ ಪ್ರಕಟವಾಗಲಿದ್ದು, ಇಲ್ಲಿ ವಾಚಿಸುವ ಕವಿತೆಗಳು ಮತ್ತು ನೇರವಾಗಿ ಬಂದ ಕವಿತೆಗಳನ್ನು ಸೇರಿಸಿ ಪ್ರಕಟಿಸಲಾಗುವುದು. ಈಗಾಗಲೇ ಈ ಕವಿಗೋಷ್ಠಿ ಕುರಿತು ಸಾಕಷ್ಟು ಜನರಿಗೆ ಮಾಹಿತಿ ರವಾನಿಸಲಾಗಿದೆ. ಕವಿಗೋಷ್ಠಿಯ ಹೊರತಾಗಿಯು ಕವನಗಳನ್ನು ಕಳುಹಿಸಲು ಅವಕಾಶವಿದೆ. ಕವಿಗೋಷ್ಠಿಗೆ ಆಯ್ಕೆಯಾದ ಕವಿಗಳಿಗೆ ಅಂದೆ ಸಂಜೆ ಡಾ. ಯು.ಆರ್. ಅನಂತಮೂರ್ತಿ ಕಾವ್ಯ ಪುರಸ್ಕಾರ ಅಥವಾ ಕರುನಾಡ ಕಣ್ಮಣಿ ಕವಿರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ಆಸಕ್ತರು ತಮ್ಮ ಇತ್ತೀಚಿನ ೨ ಭಾವಚಿತ್ರ, ಸಂಪೂರ್ಣ ಬಯೋಡಾಟಾ ಮತ್ತು ವಿಳಾಸ, ದೂರವಾಣಿ ಸಂಖ್ಯೆಯನ್ನು ಲಗತ್ತಿಸಿ. ಕವನದ ಡಿಟಿಪಿ ಪ್ರತಿಯೊಂದಿಗೆ, ಅರ್ಜಿಯನ್ನು  ದಿನಾಂಕ ೨೫-೦೭-೨೦೨೩ ರೊಳಗೆ ಕಳುಹಿಸಲು ಕೋರಲಾಗಿದೆ.

ಕಳುಹಿಸುವ ವಿಳಾಸ : ಅಧ್ಯಕ್ಷರು, ವಿಶ್ವೇಶ್ವರಯ್ಯ ಪ್ರತಿಷ್ಠಾನ, ನಂ. ೪೬೮/ಸುರ್ವೆ, ೧೩ನೇ ಮುಖ್ಯರಸ್ತೆ, ೩ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸೆ್ತ, ಮಂಜುನಾಥನಗರ, ಬೆಂಗಳೂರು-೫೬೦೦೧೦. ಮೊ : ೯೮೪೫೩೦೭೩೨೭ ಎಂದು ಪತ್ರಿಕಾ ಪಕ್ರಟಣೆಯಲ್ಲಿ ತಿಳಿಸಿದ್ದಾರೆ.