ಮನೆ ರಾಜ್ಯ ಎಸ್ ಬಿಐ ಬ್ಯಾಂಕ್ ಮ್ಯಾನೇಜರ್, ಪತಿ, ಇಬ್ಬರು ಮಕ್ಕಳು ಶವವಾಗಿ ಪತ್ತೆ

ಎಸ್ ಬಿಐ ಬ್ಯಾಂಕ್ ಮ್ಯಾನೇಜರ್, ಪತಿ, ಇಬ್ಬರು ಮಕ್ಕಳು ಶವವಾಗಿ ಪತ್ತೆ

0

ಕಾಸರಗೋಡು: ದಂಪತಿ ಮತ್ತು ಅವರ ಇಬ್ಬರ ಮಕ್ಕಳು ತಮ್ಮ ಬಾಡಿಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.        

Join Our Whatsapp Group

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಸರಗೋಡು ಶಾಖೆಯ ಮ್ಯಾನೇಜರ್, ಅವರ ಪತಿ ಮತ್ತು ಇಬ್ಬರು ಮಕ್ಕಳು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಶವವಾಗಿ ಪತ್ತೆಯಾದವರು ಎಸ್’ಬಿಐಯ ಕಾಸರಗೋಡು ಶಾಖೆಯ ಮ್ಯಾನೇಜರ್ ಶೀನಾ (35) ಅವರ ಪತಿ, ಮಲಪ್ಪುರಂ ನ ಖಾಸಗಿ ಹಣಕಾಸು ಸಂಸ್ಥೆಯ ಮ್ಯಾನೇಜರ್ ಮೇಲೋಕಾಟಿಲ್ ಪರಂಬಿಲ್ ಸಬಿಶ್ (37), ಮಕ್ಕಳಾದ ಹರಿ ಗೋವಿಂದ್ (6) ಮತ್ತು ಶ್ರೀ ವರ್ಧನ್ ಎಂದು ವರದಿಯಿಂದ ತಿಳಿದುಬಂದಿದೆ. 

ಸಾಬೀಶ್ ಮನೆಯ ಒಂದು ಕೊಠಡಿಯೊಳಗೆ  ಹಾಗೂ ಶೀನಾ ಇನ್ನೊಂದು ಕೊಠಡಿಯಲ್ಲಿ ಫ್ಯಾನ್ ಗೆ ನೇಣು ಬಿಗಿದು  ಸಾವಿಗೀಡಾದ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.        

ಸಬೀಶ್ ನೇಣು ಬಿಗಿದ ಕೊಠಡಿಯ ಹಾಸಿಗೆಯಲ್ಲಿ ಇಬ್ಬರು ಮಕ್ಕಳು ಮೃತ ದೇಹ ಕೆಳಗೆ ನೆಲದಲ್ಲಿ ಪತ್ತೆಯಾಗಿದೆ.