ಮನೆ ರಾಜ್ಯ ಟೋಲ್‌ ಗಳಲ್ಲಿ ಹಣ ಸಂಗ್ರಹ ನಿಲ್ಲಿಸಬೇಕೆಂದು ಸಚಿವ ಮಂಕಾಳ ವೈದ್ಯ ಸೂಚನೆ

ಟೋಲ್‌ ಗಳಲ್ಲಿ ಹಣ ಸಂಗ್ರಹ ನಿಲ್ಲಿಸಬೇಕೆಂದು ಸಚಿವ ಮಂಕಾಳ ವೈದ್ಯ ಸೂಚನೆ

0

ಕಾರವಾರದಿಂದ ಭಟ್ಕಳದ ದಾರಿಯಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಪೂರ್ಣ ಕಾಮಗಾರಿಯಾಗಿದ್ದರೂ, ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದ್ದರೂ ಟೋಲ್‌ ಸಂಗ್ರಹ ಮಾಡಲಾಗುತ್ತಿದೆ.

Join Our Whatsapp Group

ಹೀಗಾಗಿ ಕಾಮಗಾರಿ ಸಂಪೂರ್ಣವಾಗುವವರೆಗೂ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಹಟ್ಟಿಕೇರಿ, ಹೊಳೆಗದ್ದೆ, ಶಿರೂರು ಮೂರು ಟೋಲ್ ಇದ್ದು, ಪ್ರತಿನಿತ್ಯ ಹಣ ಸಂಗ್ರಹ ಮಾಡಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಕಾಮಗಾರಿಯನ್ನ ಮಾತ್ರ ಮುಗಿಸಿಲ್ಲ. ಕಾಮಗಾರಿ ಪೂರ್ಣಗೊಂಡು ಸುಗಮ ಸಂಚಾರ ಆಗುವವರೆಗೆ ಟೋಲ್ ಕಲೆಕ್ಷನ್ ಬಂದ್ ಮಾಡಿ, ನಂತರ ಟೋಲ್ ಪ್ರಾರಂಭಿಸುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೆರೆ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಕೃತಕ ನೆರೆ ಸೃಷ್ಟಿಯಾಗಿದೆ. ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ 66 ರ ಕಾಮಗಾರಿಯಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದ್ದರಿಂದ ಕೃತಕ ನೆರೆಗೆ ನೇರ ಕಾರಣ ಐಆರ್‌ಬಿ ಎಂದು ಅಧಿಕಾರಗಳ ವಿರುದ್ಧ ಕಿಡಿಕಾರಿದರು

ಕಾರವಾರದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ನಿರ್ಮಿಸಿರುವ ಟನಲ್‌ನಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಟನಲ್‌ಗೆ ಫಿಟ್‌ನೆಸ್ ಸರ್ಟಿಫಿಕೇಟ್ ಇಲ್ಲ. ಮಳೆ ನೀರು ಸೋರಿಕೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿದ್ದು, ಸ್ವತಹ ನಾನೇ ಖುದ್ದಾಗಿ ಹೋಗಿ ನೋಡಿಕೊಂಡು ಬಂದಿದ್ದೇನೆ. ಈ ಬಗ್ಗೆ ನಮಗೆ ಭಯವಿದ್ದು, ಜನಕ್ಕೆ ಏನು ಆಗಬಾರದು ಎನ್ನುವ ನಿಟ್ಟಿನಲ್ಲಿ ಟನಲ್ ಸಹ ಬಂದ್ ಮಾಡಲು ಸೂಚಿಸಲಾಗಿದೆ ಎಂದರು.

 ಐಆರ್‌ಬಿ ಅಧಿಕಾರಿಗಳು ಟನಲ್ ಸೋರುವುದನ್ನ ತಡೆಯಬೇಕು. ಅಲ್ಲದೇ ಫಿಟ್‌ನೆಸ್ ಸರ್ಟಿಫಿಕೇಟ್ ತೆಗೆದುಕೊಂಡ ನಂತರ ಜನರ ಓಡಾಟಕ್ಕೆ ಯೋಗ್ಯವಾದರೆ ಮಾತ್ರ ಪ್ರಾರಂಭ ಮಾಡಲಿ. ಸುಮ್ಮನೆ ಜನರ ಜೀವದ ಜೊತೆ ಆಟವಾಡುವುದಕ್ಕೆ ನಾವು ಬಿಡುವುದಿಲ್ಲ ಎಂದರು.

ಐಆರ್‌ಬಿ ಕಂಪನಿಯವರು ಪ್ರತಿಬಾರಿ ಸುಳ್ಳನ್ನ ಹೇಳುತ್ತಿದ್ದು, ಒಮ್ಮೆಯೂ ಸತ್ಯವನ್ನ ಹೇಳಿಲ್ಲ. ಐಆರ್‌ಬಿ ಕಾಮಗಾರಿ ಪ್ರಾರಂಭಿಸಿದ ನಂತರ ಅವೈಜ್ಞಾನಿಕ ಕಾಮಗಾರಿಗೆ ನೂರಾರು ಜನರು ಮೃತಪಟ್ಟಿದ್ದಾರೆ. ಭಟ್ಕಳದಿಂದ ಕಾರವಾರದ ವರೆಗೆ ಐಆರ್‌ಬಿಯಿಂದ ಸತ್ತಷ್ಟು ಜನ ಬೇರೆ ಯಾವುದರಿಂದ ಆಗಿಲ್ಲ ಎಂದು ಮಂಕಾಳ ವೈದ್ಯ ಹೇಳಿದರು. ಇದೇ ವೇಳೆ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಸಹ ಐಆರ್‌ಬಿ ಅಧಿಕಾರಿಗಳ ಮೇಲೆ ಹರಿಹಾಯ್ದರು. ಕಾರವಾರ ತಾಲೂಕಿನಲ್ಲಿ ನೆರೆಗೆ ಐ.ಆರ್,ಬಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ. ಇದನ್ನ ಸರಿಪಡಿಸುವಂತೆ ಸೂಚನೆ ನೀಡಿದರು. ಐಆರ್‌ಬಿ ಅಧಿಕಾರಿಗಳು ಹೇಳಿದ ಮಾತನ್ನ ಕೇಳುವುದಿಲ್ಲ. ಕಾಮಗಾರಿ ಮುಗಿಯುವ ವರೆಗೆ ಟೋಲನ್ನ ಬಂದ್ ಮಾಡಲೇ ಬೇಕು ಎಂದು ಸೈಲ್ ಹೇಳಿದರು.