ಮನೆ ಆರೋಗ್ಯ ಕೊರೊನಾ: 1150 ಹೊಸ ಪ್ರಕರಣ ಪತ್ತೆ

ಕೊರೊನಾ: 1150 ಹೊಸ ಪ್ರಕರಣ ಪತ್ತೆ

0

ನವದೆಹಲಿ(New Delhi): ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,150 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮುಂಜಾನೆ 8 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ, ಒಟ್ಟು ಸೋಂಕಿತರ ಸಂಖ್ಯೆ 4,30,34,217ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 11,365ರಷ್ಟಿದೆ.

ಇದೇ ಅವಧಿಯಲ್ಲಿ 83 ಜನರು ಸಾವಿಗೀಡಾಗುವುದರೊಂದಿಗೆ ಒಟ್ಟು 5,21,656 ಜನರು ಸೋಂಕಿನಿಂದ ಈವರೆಗೆ ಮೃತಪಟ್ಟಿದ್ದಾರೆ.ಒಟ್ಟು ಸೋಂಕು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.03ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ 0.25 ರಷ್ಟಿದ್ದರೆ, ಮರಣ ಪ್ರಮಾಣ ಶೇ 1.21ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

4,25,01,196 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 185.55 ಕೋಟಿಗೂ ಅಧಿಕ ಕೋವಿಡ್ ಲಸಿಕೆ ಡೋಸ್ ಅನ್ನು ನೀಡಲಾಗಿದೆ.ಮಹಾರಾಷ್ಟ್ರದಲ್ಲಿ 1,47,810, ಕೇರಳದಲ್ಲಿ 68,339, ಕರ್ನಾಟಕದಲ್ಲಿ 40,057, ತಮಿಳುನಾಡಿನಲ್ಲಿ 38,025, ದೆಹಲಿಯಲ್ಲಿ 38,025 ಮತ್ತು ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ 23,498 ಮತ್ತು 21,200 ಜನರು ಈವರೆಗೆ ಸಾವಿಗೀಡಾಗಿದ್ದಾರೆ.