ಮನೆ ಮನರಂಜನೆ ಏ.15 ರಂದು ಆಲಿಯಾ ಭಟ್, ರಣಬೀರ್ ಕಪೂರ್ ಮದುವೆ

ಏ.15 ರಂದು ಆಲಿಯಾ ಭಟ್, ರಣಬೀರ್ ಕಪೂರ್ ಮದುವೆ

0

ಮುಂಬೈ(Mumbai): ಬಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಹೆಸರಾಗಿರುವ ಆಲಿಯಾ ಭಟ್‌(Alia Bhatt) ಮತ್ತು ರಣಬೀರ್ ಕಪೂರ್(Ranbir kapoor) ಸಪ್ತಪದಿ ತುಳಿಯಲು ನಿಶ್ಚಯಿಸಿದ್ದು, ಇದೇ ತಿಂಗಳ ಏ.15 ರಂದು ಮದುವೆಯಾಗಲಿದ್ದಾರೆ.

ಮದುವೆಗೆ ಎರಡೂ ಕುಟುಂಬದ ಹಿರಿಯರು ಒಪ್ಪಿಗೆ ಸೂಚಿಸಿದ್ದಾರೆ. ಏ.13ರಂದು ಮೆಹಂದಿ ಶಾಸ್ತ್ರ ನಡೆಯಲಿದೆ. ಏ.14ರಂದು ಹಳದಿ ಮತ್ತು ಸಂಗೀತ್ ಕಾರ್ಯಕ್ರಮ ನೆರವೇರಲಿದೆ. ಏ.15ರಂದು ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರಷ್ಟೇ ಭಾಗವಹಿಸಲಿದ್ದಾರೆ. ಏ.16ರಂದು ಸಂಜೆ ಔತಣಕೂಟ ಏರ್ಪಡಿಸಿದ್ದು, ಸಿನಿಮಾರಂಗದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಪೂರ್‌ ಕುಟುಂಬದ ರಣಬೀರ್‌ ಹಾಗೂ ಖ್ಯಾತ ಬಾಲಿವುಡ್‌ ನಿರ್ದೇಶಕ ಮಹೇಶ್‌ ಭಟ್‌ ಮಗಳು ಆಲಿಯಾ ಭಟ್‌ ಕಳೆದ ಎರಡು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದಾರೆ.

ಹಿಂದಿನ ಲೇಖನಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ: 6 ಮಂದಿ ಶಂಕಿತರು ವಶ
ಮುಂದಿನ ಲೇಖನಕೊರೊನಾ: 1150 ಹೊಸ ಪ್ರಕರಣ ಪತ್ತೆ