ಮನೆ ಕಾನೂನು ಅಪ್ರಾಪ್ತ ಬಾಲಕಿಯ ಸಮ್ಮತಿಯ ಲೈಂಗಿಕತೆ ಅತ್ಯಾಚಾರವಲ್ಲ: ಒರಿಸ್ಸಾ ಹೈಕೋರ್ಟ್

ಅಪ್ರಾಪ್ತ ಬಾಲಕಿಯ ಸಮ್ಮತಿಯ ಲೈಂಗಿಕತೆ ಅತ್ಯಾಚಾರವಲ್ಲ: ಒರಿಸ್ಸಾ ಹೈಕೋರ್ಟ್

0

ಒರಿಸ್ಸಾ: ಬಾಲಕಿಯ ಅಪ್ರಾಪ್ತೆಯಾಗಿದ್ದು, ಆಕೆಯ ಸಮ್ಮತಿ ಮೇರೆಗೆ ಲೈಂಗಿಕ ಕ್ರಿಯೆ ನಡೆದರೆ ಅದು ಅತ್ಯಾಚಾರವಲ್ಲ ಎಂದು ಒರಿಸ್ಸಾ  ಹೈಕೋರ್ಟ್ ಹೇಳಿದೆ.

Join Our Whatsapp Group

45 ವರ್ಷದ ವ್ಯಕ್ತಿಯೋರ್ವ ಅಪ್ರಾಪ್ತೆಗೆ ಅತ್ಯಾಚಾರವೆಸಗಿದ ಆರೋಪದಡಿಯಲ್ಲಿ ಸುಮಾರು 10 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆತನನ್ನು ಇತ್ತೀಚಿಗೆ ಒರಿಸ್ಸಾ ಹೈಕೋರ್ಟ್ ಖುಲಾಸೆಗೊಳಿಸಿ ಈ ಆದೇಶ ಹೊರಡಿಸಿದೆ.     

ಪ್ರಕರಣ, ದಾಖಲೆಗಳ ಪ್ರಕಾರ ವರ್ಷಗಳ ಹಿಂದೆ 17 ವರ್ಷದ ಅಪ್ರಾಪ್ತ ಹುಡುಗಿ ಆರೋಪಿ 4 ಮಕ್ಕಳ ತಂದೆಯೊಂದಿಗೆ ಕಾಡಿಗೆ ಹೋಗುತ್ತಿದ್ದು, ಮತ್ತು ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು. ಆತ ವಿವಾಹಿತ ಎಂದು ಆಕೆ ಚೆನ್ನಾಗಿ ತಿಳಿದಿತ್ತು. ಆಕೆ ಈ ಕೃತ್ಯದ ಬಗ್ಗೆ ಯಾವುದೇ ಆಕ್ಷೇಪಣೆಯನ್ನು ಎತ್ತಲಿಲ್ಲ ಅಥವಾ ಗರ್ಭಿಣಿ ಆಗುವವರೆಗೂ ಈ ಬಗ್ಗೆ ಯಾರ ಬಳಿಯೂ ಬಹಿರಂಗಪಡಿಸಲಿಲ್ಲ. ಆರೋಪಿಯು ಅವಳನ್ನು ಮದುವೆಯಾಗುವುದಾಗಿ ಯಾವ ಭರವಸೆಯು ನೀಡಿಲ್ಲ. ಆರೋಪಿಯು ಅವಳನ್ನು ಮದುವೆಯಾಗುವುದಾಗಿ ಯಾವ ಭರವಸೆಯು ನೀಡಿಲ್ಲ.                                                       

ಆರೋಪಿಯು ವಿವಾಹಿತನಾಗಿರುವುದರಿಂದ ಆತನೊಂದಿಗೆ ಮದುವೆ ಸಾಧ್ಯವಿಲ್ಲ ಎಂದು ಆಕೆಗೂ ತಿಳಿದಿತ್ತು ಎಂದು ನ್ಯಾಯಮೂರ್ತಿ ತಮ್ಮ ಜು.5 ರ ತೀರ್ಪಿನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.