ಮಾರುಕಟ್ಟೆ ಬೇಡಿಕೆ ಆಧರಿಸಿ ಓಲಾ ಎಲೆಕ್ಟ್ರಿಕ್ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ದ್ವಿಚಕ್ರ ವಾಹನಗಳ ಬಿಡುಗಡೆಯ ಸುಳಿವು ನೀಡಿದ್ದು, ಮುಂಬರುವ ಅಗಸ್ಟ್ ವೇಳೆಗೆ ಹೊಸ ದ್ವಿಚಕ್ರ ವಾಹನಗಳನ್ನು ಅಧಿಕೃತವಾಗಿ ರಸ್ತೆಗಿಳಿಸಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಎಸ್1, ಎಸ್1 ಪ್ರೊ ಮತ್ತು ಎಸ್1 ಏರ್ ಇವಿ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ವಿವಿಧ ಸೆಗ್ಮೆಂಟ್ ಗಳಲ್ಲಿ ಸುಮಾರು ಮೂರು ಹೊಸ ಇವಿ ಬೈಕ್ ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆ.
ಹೊಸ ಇವಿ ಬೈಕ್ ಕುರಿತಾಗಿ ಟೀಸರ್ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಇವಿ ಬೈಕ್ ಗಳ ಯಾವುದೇ ತಾಂತ್ರಿಕ ಮಾಹಿತಿ ಹಂಚಿಕೊಂಡಿಲ್ಲವಾದರೂ ವಿವಿಧ ಸೆಗ್ಮೆಂಟ್ ಗಳಲ್ಲಿ ಹೊಸ ಬೈಕ್ ಮಾಡುವ ನೀರಿಕ್ಷೆಯಲ್ಲಿರುವುದು ಸ್ಪಷ್ಟವಾಗಿದೆ. ಕೆಲವು ಮಾಹಿತಿಗಳ ಪ್ರಕಾರ ಹೊಸ ಇವಿ ಬೈಕ್ ಮಾದರಿಗಳು 125 ಸಿಸಿ, 150 ಸಿಸಿ ಸಾಮರ್ಥ್ಯದ ಬೈಕ್ ಮಾದರಿಗಳನ್ನು ಆಧರಿಸಿದ ವಿನ್ಯಾಸ ಹೊಂದಿರಲಿದ್ದು, ಇವು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿವೆ.
ಈ ಮೂಲಕ ಓಲಾ ಹೊಸ ಇವಿ ಬೈಕ್ ಮಾದರಿಗಳು ಪ್ರತಿ ಚಾರ್ಜ್ ಗೆ 160 ಕಿ.ಮೀ ನಿಂದ 220 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 1.40 ಲಕ್ಷದಿಂದ ರೂ. 1.60 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಸಾಮೂಹಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್ ಎಂಜಿನ್ ಪ್ರೇರಿತ ಬೈಕ್ ಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿವೆ.
🎯 ರೈಲ್ವೆ ಟೆಕ್ನಿಷಿಯನ್ ನೇಮಕಾತಿ 2024 – 14,928 ಹುದ್ದೆಗಳು 🛠️
ಅರಿಶಿನ ಕುಂಕುಮದ ನೈಜ ಮಹತ್ವ ದೇವರ ದರ್ಶನಕ್ಕೂ, ಆರೋಗ್ಯಕ್ಕೂ 🌼✨
ಪ್ರಧಾನ ಮಂತ್ರಿ ಆವಾಸ್ ಯೋಜನೆಮನೆ ಕಟ್ಟಲು ಪಡೆಯಿರಿ ಸರ್ಕಾರದಿಂದ ಸಬ್ಸಿಡಿ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ಆರೋಗ್ಯ ಸಲಹೆ…..
ಪಾರ್ವತಿ ದೇವಿ ಚಂದ್ರಘಂಟ ಹೇಗಾದರೂ ಗೊತ್ತ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ನವರಾತ್ರಿಯ ಎರಡನೇ ದಿನವಾದ ಇಂದು ತಾಯಿ ಬ್ರಹ್ಮಚಾರಿಣಿಯನ್ನ ಪೂಜಿಸಲಾಗುತ್ತೆ
ನಬಾರ್ಡ್ ಬ್ಯಾಂಕ್ ನಲ್ಲಿ ಆಫೀಸರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.