ಮನೆ ತಂತ್ರಜ್ಞಾನ ಸೋನಿ ಕಂಪನಿಯ ಹೊಸ ವೈರ್ ಲೆಸ್ ಇಯರ್ ಬಡ್ಸ್ ಬಿಡುಗಡೆ

ಸೋನಿ ಕಂಪನಿಯ ಹೊಸ ವೈರ್ ಲೆಸ್ ಇಯರ್ ಬಡ್ಸ್ ಬಿಡುಗಡೆ

0

ನವದೆಹಲಿ: ಆಡಿಯೋ ಮಾರುಕಟ್ಟೆಯಲ್ಲಿ ತನ್ನದೇ ವಿಶಿಷ್ಟ ಸ್ಥಾನ ಹೊಂದಿರುವ ಸೋನಿ (ಇಂಡಿಯಾ) ಹೊಸ ವೈರ್ ಲೆಸ್ ಇಯರ್ ಬಡ್ WF-C700N ಅನ್ನು ಇದೀಗ ಬಿಡುಗಡೆ ಮಾಡಿದೆ. ಪರಿಚಯಿಸಿದೆ.

Join Our Whatsapp Group

ಸೌಕರ್ಯ ಮತ್ತು ಸ್ಥಿರತೆ ಗಮನದಲ್ಲಿ ಇಟ್ಟುಕೊಂಡು ’ಡಬ್ಲ್ಯುಎಫ್‌–ಸಿ700ಎನ್‌’ದ ವಿನ್ಯಾಸ ರೂಪಿಸಲಾಗಿದೆ. 1982ರಲ್ಲಿ ಪ್ರಪಂಚದ ಮೊದಲ ಇನ್-ಇಯರ್ ಹೆಡ್‌ ಫೋನ್‌ಗಳನ್ನು ಪರಿಚಯಿಸಿದಾಗಿನಿಂದ ಸೋನಿ ಕಂಪನಿಯು ಕಿವಿ ಆಕಾರ ಮತ್ತು ಗಾತ್ರಕ್ಕೆ ಸಂಬಂಧಿಸಿದ ದತ್ತಾಂಶ ಬಳಸಿಕೊಂಡು ಮತ್ತು ವಿವಿಧ ರೀತಿಯ ಕಿವಿಗಳ ಸೂಕ್ಷ್ಮತೆಯ ಮೌಲ್ಯಮಾಪನ ಆಧರಿಸಿ ‘ಡಬ್ಲ್ಯುಎಫ್‌–ಸಿ700ಎನ್‌’ದ ವಿನ್ಯಾಸ ರೂಪಿಸಿರುವುದಾಗಿ ತಿಳಿಸಿದೆ.

ಕಿವಿಯ ಒಳಗೆ ಹೆಚ್ಚು ಸ್ಥಿರವಾಗಿ ಹೊಂದಿಕೊಳ್ಳುವ ರೀತಿಯಲ್ಲಿ ವಿಶೇಷ ಮೇಲ್ಮೈ ವಿನ್ಯಾಸ ಹೊಂದಿರುವ ಈ ಇಯರ್‌ಬಡ್‌ಗಳು ಕಿವಿಯ ಗಾತ್ರಕ್ಕೆ ಪರಿಪೂರ್ಣವಾಗಿ ಹೊಂದಿಕೊಳ್ಳುವ ಆಕಾರ ಹೊಂದಿವೆ. ಸಿಲಿಂಡರ್‌ ಆಕಾರದ ಚಾರ್ಜಿಂಗ್ ಕೇಸ್ ಚಿಕ್ಕದಾಗಿದ್ದು, ಕಿಸೆಯಲ್ಲಿ ಅಥವಾ ಬ್ಯಾಗ್‌ ನಲ್ಲಿ ಇಡಲು ಸುಲಭವಾಗಿದೆ. ಇದರ ಪುಟ್ಟ ಪೆಟ್ಟಿಗೆಯು ಆಕರ್ಷಕ ವಿನ್ಯಾಸ ಹೊಂದಿದೆ. ಕಪ್ಪು, ಬಿಳಿ, ನೇರಳೆ ಮತ್ತು ಹಸಿರು ವರ್ಣಗಳಲ್ಲಿ ದೊರಕುತ್ತದೆ.

15 ಗಂಟೆಗಳ ಬ್ಯಾಟರಿ ಬಾಳಿಕೆ ಇದ್ದು, ಕ್ಯಾರಿಯಿಂಗ್‌ ಕೇಸ್‌, 10+10 ಗಂಟೆಗಳ ಚಾರ್ಜಿಂಗ್ ಒಳಗೊಂಡಿರುತ್ತದೆ. ಡಿಜಿಟಲ್ ಸೌಂಡ್ ಎನ್ ಹಾನ್ಸ್ ಮೆಂಟ್ ಎಂಜಿನ್ (ಡಿಎಸ್‌ ಇಇ) ಸೌಲಭ್ಯದ ಕಾರಣಕ್ಕೆ ‘ಡಬ್ಲ್ಯುಎಫ್‌–ಸಿ700ಎನ್‌’ – ಉತ್ತಮ ಗುಣಮಟ್ಟದ ಧ್ವನಿ ನೀಡಲಿದೆ. 5ಎಂಎಂ ಡ್ರೈವರ್ ಉತ್ತಮ ಬಾಸ್ ನೀಡುತ್ತದೆ. ಸೋನಿ (Sony |) ಹೆಡ್‌ ಫೋನ್‌ ಕನೆಕ್ಟ್‌ ಆ್ಯಪ್‌ ನಲ್ಲಿನ ಈಕ್ವಲೈಜರ್ ಸೆಟ್ಟಿಂಗ್‌ ಗಳೊಂದಿಗೆ ನಿಮ್ಮ ಅಭಿರುಚಿಗೆ ಸರಿಹೊಂದುವಂತೆ ನಿಮ್ಮ ಸಂಗೀತವನ್ನು ಸಹ ನೀವು ಬದಲಾಯಿಸಬಹುದು.

’ಮಲ್ಟಿಪಾಯಿಂಟ್ ಸಂಪರ್ಕ ಸೌಲಭ್ಯ ಹೊಂದಿದ್ದು, ಒಂದೇ ಸಮಯದಲ್ಲಿ ಎರಡು ಬ್ಲೂಟೂತ್ ಸಾಧನಗಳೊಂದಿಗೆ ಜೋಡಿಸಬಹುದು.

ಸೋನಿ ರಿಟೇಲ್ ಸ್ಟೋರ್‌ ಗಳಲ್ಲಿ (ಸೋನಿ ಸೆಂಟರ್ ಮತ್ತು ಸೋನಿ ಎಕ್ಸ್‌ ಕ್ಲೂಸಿವ್), www.ShopatSC.com ನಲ್ಲಿ, ಪ್ರಮುಖ ಎಲೆಕ್ಟ್ರಾನಿಕ್ ಮಳಿಗೆಗಳು ಮತ್ತು ಇತರ ಇ-ಕಾಮರ್ಸ್ ಅಂತರ್ಜಾಲ ತಾಣಗಳಲ್ಲಿ ಜುಲೈ 20ರಿಂದ ಲಭ್ಯವಾಗಲಿದೆ. ದರ 8,990 ರೂ.