ಮನೆ ಸ್ಥಳೀಯ 20 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ    

20 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ    

0

ಮೈಸೂರು: ಗಂಧದ ಮರದ ತುಂಡುಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಮೈಸೂರಿನ ಕೆ.ಆರ್. ಠಾಣೆ ಪೊಲೀಸರು ಬಂಧಿಸಿದ್ದಾರೆ

Join Our Whatsapp Group

ಕೆ.ಆರ್. ನಗರ ತಾಲೂಕು ಚುಂಚನಕಟ್ಟೆ ಹೋಬಳಿ, ಶ್ರೀರಾಂಪುರ ಗ್ರಾಮದ ಲೇಟ್ ತಿಪ್ಪಯ್ಯ ಅವರ ಮಗ ದೊರೆಸ್ವಾಮಿ ಬಂದಿತ ಆರೋಪಿ ಜುಲೈ 4 ಶ್ರೀರಂಗಪಟ್ಟಣ ತಾಲ್ಲೂಕು ಕರಿಗಟ್ಟ ಗ್ರಾಮದಲ್ಲಿ ಆತನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.      

ಗಂಧದ ಮರದ ತುಂಡುಗಳನ್ನು ಕಳುವು ಮಾಡಿದ ದೊರೆ ಸ್ವಾಮಿ ವಿರುದ್ಧ ಮೈಸೂರಿನ ಕೆ.ಆರ್. ಠಾಣೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ಕಲಂ 86, 87 ಹಾಗೂ ಐಪಿಸಿ ಸೆಕ್ಷನ್ 379 ರೀತ್ಯಾ 2001 ಮಾರ್ಚ್ 27 ರಂದು ಪ್ರಕರಣ ದಾಖಲು ಮಾಡಲಾಗಿತ್ತು.      

ನಂತರ 2003 ರಿಂದ ನ್ಯಾಯಾಲಯಕ್ಕೆ ಹಾಜರಾಗದ ತಲೆಮರಿಸಿಕೊಂಡಿದ್ದ ಆರೋಪಿ ಪತ್ತೆ ಕಾರ್ಯಕ್ಕೆ  ಕೆ.ಆರ್  ಠಾಣೆ ಎ.ಎಸ್.ಐ ಚಂದ್ರ ನಾಯಕ ಹಾಗೂ ಹೆಡ್ ಕಾನ್ಸ್ಟೇಬಲ್ ಹರೀಶ್ ನೇಮಿಸಲಾಗಿತ್ತು. ಶ್ರೀರಾಂಪುರ ಗ್ರಾಮಕ್ಕೆ ತೆರಳಿ ವಿಚಾರಿಸಿದಾಗ ದೊರೆ ಸ್ವಾಮಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿದ್ದಾನೆ ಎಂಬುದು ತಿಳಿಯಿತು.              

ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ಸುಳಿವಿನ ಜಾಡು ಹಿಡಿದು ಕಡೆಗೂ ಕರಿಘಟ್ಟದಲ್ಲಿ ಜುಲೈ 4ರಂದು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾದರು. ಡಿ.ಸಿ.ಪಿ. ಎಸ್ ಜಹ್ನಾವಿ ಮಾರ್ಗದರ್ಶನದಂತೆ, ಕೆ.ಆರ್. ವಿಭಾಗದ ಎ.ಸಿ.ಪಿ ಗಂಗಾಧರ ಸ್ವಾಮಿ ನೇತೃತ್ವದಲ್ಲಿ ಕೆ.ಆರ್. ಠಾಣೆ ಇನ್ಸ್ಪೆಕ್ಟರ್ ಮಹೇಶ್, ಎ. ಎಸ್.ಐ ಚಂದ್ರನಾಯಕ, ಹೆಡ್ ಕಾನ್ಸ್ಟೇಬಲ್ ಹರೀಶ್ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ನಗರದ ಪೊಲೀಸ್ ಆಯುಕ್ತ ಬಿ. ರಮೇಶ್ ಈ ಪತ್ತೆ ಕಾರ್ಯವನ್ನು ಪ್ರಶಂಸಿದ್ದಾರೆ.