ಮನೆ ಅಪರಾಧ ಫೀಸ್ ಕಟ್ಟದ್ದಕ್ಕೆ ಟೈಪಿಂಗ್ ಪರೀಕ್ಷೆಗೆ ಪ್ರವೇಶ ಪತ್ರ ನೀಡಲು ನಕಾರ: ದೂರು ದಾಖಲು

ಫೀಸ್ ಕಟ್ಟದ್ದಕ್ಕೆ ಟೈಪಿಂಗ್ ಪರೀಕ್ಷೆಗೆ ಪ್ರವೇಶ ಪತ್ರ ನೀಡಲು ನಕಾರ: ದೂರು ದಾಖಲು

0

ಮಂಡ್ಯ: ಶುಲ್ಕ ಕಟ್ಟಿಲ್ಲವೆಂದು ಟೈಪಿಂಗ್ ಪರೀಕ್ಷೆಗೆ ಪ್ರವೇಶ ಪತ್ರ ಕೊಡಲು ನಿರಾಕರಿಸಿದ ಶಾರದ ಟೈಪಿಂಗ್ ಇನ್ಸ್ಟಿಟ್ಯೂಟ್ ಮುಖ್ಯಸ್ಥನ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

Join Our Whatsapp Group

ಶುಲ್ಕ ನಂತರ ಕಟ್ಟುತ್ತೇನೆ. ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ ಮಹಿಳೆ ಮೇಲೆ ಟೈಪಿಂಗ್ ಸಂಸ್ಥೆಯ ಮುಖ್ಯಸ್ಥ ದೌರ್ಜನ್ಯ ಎಸಗಿದ್ದಾನೆಂದು ಮಹಿಳೆ ಆರೋಪಿಸಿದ್ದಾರೆ.

ಮಂಡ್ಯ ನಗರದ ಶಾರದ ಟೈಪಿಂಗ್ ಇನ್ಸ್ಟಿಟ್ಯೂಟ್ ಮುಖ್ಯಸ್ಥ ರಮೇಶ್ ವಿರುದ್ಧ ದೌರ್ಜನ್ಯಕೊಳಗಾದ ಮಹಿಳೆ ಶ್ವೇತಾ ಮಂಡ್ಯ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.