ಮನೆ ಆಟೋ ಮೊಬೈಲ್ ಟ್ರಯಂಫ್ ಸ್ಪೀಡ್ 400 ಬೈಕ್‌ ಹೊಸ ದಾಖಲೆ

ಟ್ರಯಂಫ್ ಸ್ಪೀಡ್ 400 ಬೈಕ್‌ ಹೊಸ ದಾಖಲೆ

0

ಭಾರತದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಟ್ರಯಂಫ್ ಸ್ಪೀಡ್ 400 (Triumph Speed 400) ಬೈಕ್‌ ಅಬ್ಬರಿಸುವುದಕ್ಕೆ ಶುರು ಮಾಡಿದೆ.

Join Our Whatsapp Group

ಬುಕ್ಕಿಂಗ್ ನಲ್ಲಿ ದೊಡ್ಡಮಟ್ಟದ ದಾಖಲೆ ನಿರ್ಮಾಣ ಮಾಡಿದ್ದ ಈ ಮೋಟಾರ್ ಸೈಕಲ್ ವಿತರಣೆಗೂ ಹೆಚ್ಚಿನ ಕಾಲಾವಕಾಶ ಬೇಕೆಂದು ವರದಿಯಾಗಿದೆ.

ಕಳೆದ ತಿಂಗಳು ಜಾಗತಿಕ ಮಾರುಕಟ್ಟೆಯಲ್ಲಿ ಬ್ರಿಟಿಷ್ ದ್ವಿಚಕ್ರ ವಾಹನ ತಯಾರಕ ‘ಟ್ರಯಂಫ್’ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್‌ ಗಳನ್ನು ಅನಾವರಣ ಮಾಡಿತ್ತು. ಇವು, ಟ್ರಯಂಫ್‌ ಹಾಗೂ ಬಜಾಜ್‌ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ಮೋಟಾರ್‌ಸೈಕಲ್‌ ಗಳಿದ್ದು, ಸ್ಪೀಡ್ 400 ಬೈಕ್‌ ನ್ನು ಜುಲೈ 5ರಂದು ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಾಯಿತು. ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್‌ನ್ನು ಅಕ್ಟೋಬರ್‌ನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ಮೊದಲಿನಿಂದಲೂ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದ ಟ್ರಯಂಫ್ ಸ್ಪೀಡ್ 400 ಬೈಕ್ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಗರಿಷ್ಠ ಸಂಖ್ಯೆ ಬುಕ್ಕಿಂಗ್ ಪಡೆದುಕೊಂಡಿತು. ಅದು ಕೂಡ 10 ದಿನದಲ್ಲಿಯೇ 10,000 ಹೆಚ್ಚಿನ ಆರ್ಡರ್ ಸ್ವೀಕರಿಸಿದ್ದು ವಿಶೇಷವಾಗಿದೆ. ಇದರಿಂದ ಕಾಯುವಿಕೆ ಅವಧಿಯು ದಿಢೀರನೇ ಹೆಚ್ಚಾಗಿದ್ದು, ಸ್ಪೀಡ್ 400 ಬೈಕ್ ವಿತರಣೆ ಪಡೆಯಲು ಏನಿಲ್ಲ ಅಂದರೂ ನಾಲ್ಕು ತಿಂಗಳು ಕಾಯಬೇಕು.

ಟ್ರಯಂಫ್‌ ಹಾಗೂ ಬಜಾಜ್‌ ಪಾಲುದಾರಿಕೆ ಹೊಂದಿರುವುದರಿಂದ ‘ಸ್ಪೀಡ್ 400’ ಬೈಕ್‌ ನ್ನು ಭಾರತದಲ್ಲಿ ಬಜಾಜ್‌ ಕಂಪನಿಯೇ ಉತ್ಪಾದಿಸಿ, ವಿತರಣೆಯನ್ನು ಮಾಡಲಿದೆ. ಬಹುತೇಕ ಡಿಲೆವರಿಗಳು ಈ ತಿಂಗಳ ಕೊನೆಯಲ್ಲಿ ಶುರುವಾಗಲಿದೆ.

ಮೂಲಗಳ ಪ್ರಕಾರ, ಡೀಲರ್‌ ಶಿಪ್‌ ಗಳು, ಗ್ರಾಹಕರಿಗೆ ಟ್ರಯಂಫ್ ಸ್ಪೀಡ್ 400 ಬೈಕ್‌ ಗಾಗಿ 12 ರಿಂದ 16 ವಾರಗಳು ಕಾಯಲು ತಿಳಿಸಿವೆಯಂತೆ. ಆದರೆ, ರಾಜ್ಯದಿಂದ ರಾಜ್ಯಕ್ಕೆ ಆ ಅವಧಿ ಬೇರೆ – ಬೇರೆಯಾಗಿರುತ್ತದೆ. ಒಂದೆರೆಡು ದಿನದ ಹಿಂದೆ, ಟ್ರಯಂಫ್‌ ಕಂಪನಿ ದೇಶದ ಪ್ರಮುಖ ನಗರಗಳಲ್ಲಿ ‘ಸ್ಪೀಡ್ 400’ ಬೈಕ್‌ ಹೊಂದಿರುವ ಆನ್-ರೋಡ್ ಬೆಲೆಯನ್ನು ಘೋಷಣೆ ಮಾಡಿತ್ತು.

ಬೆಂಗಳೂರಿನಲ್ಲಿ ರೂ.3,05,869, ದೆಹಲಿಯಲ್ಲಿ ರೂ.2,67,927, ಹೈದರಾಬಾದ್ ನಲ್ಲಿ ರೂ.2,87,074, ಗೋವಾದಲ್ಲಿ ರೂ. 2,86,669, ಮತ್ತು ಮುಂಬೈನಲ್ಲಿ ರೂ.2,87,247 ಆನ್-ರೋಡ್ ದರವನ್ನು ಹೊಂದಿದೆ.

ಟ್ರಯಂಫ್ ಸ್ಪೀಡ್ 400 ಬೈಕ್‌ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು, 398 ಸಿಸಿ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, 39.5 bhp ಗರಿಷ್ಠ ಪವರ್ ಹಾಗೂ 37.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯದ ಹೊಂದಿದೆ. 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಸಿಗುತ್ತದೆ. ಈ ಬೈಕ್ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಮುಖ್ಯವಾಗಿ ವೃತ್ತಾಕಾರದ ಹೆಡ್‌ ಲ್ಯಾಂಪ್‌, LCD ಡಿಸ್ಪ್ಲೇ, ABS ಅನ್ನು ಹೊಂದಿದೆ. ಜೊತೆಗೆ ಫ್ರಂಟ್ 320 ಎಂಎಂ, ರೇರ್ 230 ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದ್ದು, 17 ಇಂಚಿನ ಅಲಾಯ್ ವೀಲ್ಸ್ ಒಳಗೊಂಡಿರುವುದು ವಿಶೇಷವಾಗಿದೆ. ಒಟ್ಟಾರೆ, ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಬುಕ್ಕಿಂಗ್ ಪಡೆದು ಟ್ರಯಂಫ್ ಸ್ಪೀಡ್ 400 ಬೈಕ್‌ ಅಬ್ಬರಿಸುತ್ತಿದ್ದು, ಮುಂಬರುವ ದಿನಗಳಲ್ಲಿಯೂ ಗ್ರಾಹಕರಿಂದ ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆಯಿದೆ.