ಮನೆ ಉದ್ಯೋಗ ಕರ್ನಾಟಕ ವಿಶ್ವವಿದ್ಯಾಲಯದಲ್ಲಿದೆ ಜೆಆರ್’ಎಫ್ ಹುದ್ದೆ; ಆಸಕ್ತರು ಅರ್ಜಿ ಸಲ್ಲಿಸಿ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿದೆ ಜೆಆರ್’ಎಫ್ ಹುದ್ದೆ; ಆಸಕ್ತರು ಅರ್ಜಿ ಸಲ್ಲಿಸಿ

0

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಜ್ಯೂನಿಯರ್​ ರಿಸರ್ಚ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ನೇಮಕಾತಿ ಕಾರವಾರದಲ್ಲಿ ನಡೆಯಲಿದೆ. ಮೀನುಗಾರಿಕೆ ವಿಷಯದಲ್ಲಿ ಸಂಶೋಧನೆ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಇಮೇಲ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 10 ಆಗಿದೆ.
ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಸಾಗರ ಜೀವಶಾಸ್ತ್ರ, ಸಾಗರ ವಿಜ್ಞಾನ  ಅಥವಾ  ಮೀನುಗಾರಿಕೆ ವಿಜ್ಞಾನದಲ್ಲಿ ಎಂಎಸ್ಸಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು KUD ನೇಮಕಾತಿ ನಿಯಮಗಳ ಪ್ರಕಾರ ಇರಬೇಕು.

ಅರ್ಜಿ ಸಲ್ಲಿಕೆ: ಇಮೇಲ್​​ ಮತ್ತು ಆಫ್​ಲೈನ್​

ಇಮೇಲ್​ ವಿಳಾಸ:  [email protected]

ಅರ್ಜಿ ಸಲ್ಲಿಕೆ ವಿಳಾಸ: ಡಾ. ಜೆ.ಎಲ್. ರಾಥೋಡ್ ಪಿ.ಐ, ಸಾಗರ ಜೀವಶಾಸ್ತ್ರದ ಅಧ್ಯಯನ ವಿಭಾಗ, ಕೆಯುಪಿಜಿ ಕೇಂದ್ರ, ಕಾರವಾರ – 581303

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು: ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 30 ಆಗಸ್ಟ್​​ 2022
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್​2022

ಅಧಿಕೃತ ವೆಬ್‌ಸೈಟ್: kud.ac.in

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

ಅಧಿಕೃತ ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ ನೀಡಿ. ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ ಮೇಲಿನ ಇಮೇಲ್​ ವಿಳಾಸ ಅಥವಾ ಅಂಚೆ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುನ್ನ ಅರ್ಜಿ ಸಲ್ಲಿಸಿ.

ಹಿಂದಿನ ಲೇಖನಚಾಮರಾಜನಗರ: ವ್ಹೀಲಿಂಗ್ ವಿಚಾರವಾಗಿ ಎರಡು ಕೋಮುಗಳ ನಡುವೆ ಗಲಾಟೆ; ಆರು ಮಂದಿ ಪೊಲೀಸರ ವಶಕ್ಕೆ
ಮುಂದಿನ ಲೇಖನಶಿಕ್ಷಕರ ದಿನಾಚರಣೆ: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ