ಮನೆ ರಾಜ್ಯ ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಚಾಲನೆ: ಅರ್ಜಿ ಸಲ್ಲಿಸುವ ವಿಧಾನ ತಿಳಿಯಲು ಈ ಲೇಖನ...

ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಚಾಲನೆ: ಅರ್ಜಿ ಸಲ್ಲಿಸುವ ವಿಧಾನ ತಿಳಿಯಲು ಈ ಲೇಖನ ಓದಿ

0

ಬೆಂಗಳೂರು: ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿದ್ದು,  ಮನೆಯ ಯಜಮಾನಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಸಬಹುದಾಗಿದೆ.

Join Our Whatsapp Group

ಅರ್ಜಿ ಸಲ್ಲಿಸಲು ಯಾವ್ಯಾವ ದಾಖಲಾತಿಗಳು ಬೇಕು ? ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬೆಲ್ಲಾ ಮಾಹಿತಿ ತಿಳಿಯಲು ಈ ಲೇಖನ ಓದಿ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದರೆ ನಿಮ್ಮ ಮೊಬೈಲ್ ನಲ್ಲಿ 8147500500 ಈ ಸಂಖ್ಯೆಗೆ  SMS ಕಳುಹಿಸಿದರೆ ಮನೆಯ ಯಜಮಾನಿಯ ಮೊಬೈಲ್ ಸಂಖ್ಯೆಗೆ ಸರ್ಕಾರ ದಿಂದ ಒಂದು SMS ಬರುತ್ತದೆ. ಆ SMS ನಲ್ಲಿ ನೀವು ಯಾವ  ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಯಾವ ದಿನದಂದು ಯಾವ ಸಮಯಕ್ಕೆ ಬರಬೇಕು ಎಂದು ತಿಳಿಸುತ್ತಾರೆ.

ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆಗೆ ಸರ್ಕಾರದಿಂದ SMS ಬಂದ ದಿನ ನೀವು ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗದಿದ್ದರೆ, ನಾಳೆ ಸಂಜೆ 5 ರಿಂದ 7 ಗಂಟೆಯ ಒಳಗೆ ಹೋಗಿ ಅರ್ಜಿ ಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಒಂದು ಮಂಜೂರಾತಿ ಪತ್ರವನ್ನು ನೀಡುತ್ತಾರೆ.

ಒಂದು ವೇಳೆ ನೀವು ಯಾವುದೇ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಲು ಸಾಧ್ಯ ವಾಗದಿದ್ದರೆ ಸರ್ಕಾರದ ಪ್ರಜಾ ಪ್ರತಿನಿಧಿಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ನೀವು ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆ ಕೊಟ್ಟರೆ ಪ್ರಜಾಪ್ರತಿನಿಧಿಗಳು ಅರ್ಜಿಯನ್ನು ಸಲ್ಲಿಸುತ್ತಾರೆ.

ಪ್ರಜಾ ಪ್ರತಿನಿಧಿ ಬಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಕೊಟ್ಟರೆ ಮಂಜುರಾತಿ ಪತ್ರ ಬರುವುದು ಸ್ವಲ್ಪ ದಿನ ತಡವಾಗುತ್ತದೆ .

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಸೇವಾ ಕೇಂದ್ರಗಳಲ್ಲಿಯೂ ಹಣನ್ನು ನೀಡುವಂತಿಲ್ಲ ಮತ್ತು  ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಎಂಬುದು ಇಲ್ಲ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ  ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು :

•       ಮನೆ ಒಡತಿ ಹೆಸರು ಇರೋ  ರೇಷನ್ ಕಾರ್ಡ್ .

•       ಮನೆ ಯಜಮನಿಯ ಆಧಾರ್ ಕಾರ್ಡ ಲಿಂಕ್ ಆಗಿರುವ  ಮೊಬೈಲ್ ಸಂಖ್ಯೆ .

•       ಮನೆ ಒಡತಿಯ ಮತಿಯ ಆಧಾರ್ ಕಾರ್ಡ ಕಡ್ಡಾಯ .

•       ಬೇರೆ  ಖಾತೆಗೆ ಹಣ ಬೇಕಾದರೆ ನಿಮಗೆ ಯಾವ ಖಾತೆಗೆ ಹಣ ಬೇಕು ಆ ಖಾತೆಯ ಪಾಸ್ ಬುಕ್ ಜೆರಾಕ್ಸ್ . 

ಯಾವ ಸ್ಥಳಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು:

•       ಕರ್ನಾಟಕ ಒನ್

•       ಗ್ರಾಮ ಒನ್

•       ಬೆಂಗಳೂರು ಒನ್

•       ಬಾಪೂಜಿ ಸೇವ ಕೇಂದ್ರ