ಮಂಡ್ಯ: ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿರುವ ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಏರ್ ಕಂಡಿಷನರ್ ಎಸಿ ಸ್ಪೋಟಗೊಂಡು ಡೆಪ್ಯೂಟಿ ಮ್ಯಾನೆಜರ್ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಮೂಲದ ಶ್ರೀಧರ್ ಮೃತ ವ್ಯಕ್ತಿ.
ವಿದ್ಯುತ್ ವಿಭಾಗದ ಕಂಟ್ರೋಲ್ ರೂಂ ನಲ್ಲಿ ಕೆಲಸ ನಿರ್ವಹಿಸುವಾಗ ಕೊಠಡಿಯ ಒಳಗೆ ಅಳವಡಿಸಿದ್ದ ಏರ್ ಕಂಡಿಷನರ್ ಸ್ಫೋಟಗೊಂಡಿದೆ.
ಸ್ಪೋಟದ ಬಳಿಕ ರಾಸಾಯನಿಕ ಸೋರಿಕೆಯಿಂದ ಶ್ರೀಧರ್ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಮಂಡ್ಯದ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ.
ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














