ಮನೆ ಮನರಂಜನೆ ಸೂರ್ಯ ನಟನೆಯ ‘ಕಂಗುವ’ ಚಿತ್ರದ ಮಾಸ್​​​​ ಪೋಸ್ಟರ್​​ ಗೆ ಅಭಿಮಾನಿಗಳ ಮೆಚ್ಚುಗೆ

ಸೂರ್ಯ ನಟನೆಯ ‘ಕಂಗುವ’ ಚಿತ್ರದ ಮಾಸ್​​​​ ಪೋಸ್ಟರ್​​ ಗೆ ಅಭಿಮಾನಿಗಳ ಮೆಚ್ಚುಗೆ

0

ತಮಿಳುನಾಡು: ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ ‘ಕಂಗುವ’ ಚಿತ್ರದ ಬಗ್ಗೆ ಹೊಸ ಮಾಹಿತಿಯೊಂದು ದೊರಕಿದ್ದು, ಚಿತ್ರತಂಡ ರಿಲೀಸ್​ ಮಾಡಿದ ಪೋಸ್ಟರ್ ​​ನಲ್ಲಿ ಸೂರ್ಯ ಅವರ ಮಾಸ್​​ ಲುಕ್​ ನೋಡಿದ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Join Our Whatsapp Group

ಚಿತ್ರದ ಟೀಸರ್​​ ಯಾವಾಗ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಇನ್ನು ನಿರ್ಮಾಣ ಹಂತದಲ್ಲಿರುವ ಈ ಬಿಗ್​​ ಬಜೆಟ್​​ ಚಿತ್ರವನ್ನು ಸಿರುತೈ ಶಿವ ನಿರ್ದೇಶಿಸಿದ್ದಾರೆ.

ಜುಲೈ 23 ರಂದು ‘ಕಂಗುವ’ ಚಿತ್ರದ ಕಿರು ವಿಡಿಯೋ ಝಲಕ್​ ರಿಲೀಸ್​ ಮಾಡಲಿದ್ದೇವೆ ಎಂದು ಚಿತ್ರತಂಡ ಹೇಳಿದ್ದು, ಈ ಮಾಹಿತಿಯನ್ನು ಸೂರ್ಯ ಅವರ ಮಾಸ್​ ಪೋಸ್ಟರ್​​ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ಪೋಸ್ಟರ್‌ ನಲ್ಲಿ “ದಿ ಮ್ಯಾನ್, ದಿ ವೈಲ್ಡ್, ದಿ ಸ್ಟೋರಿ” ಎಂಬ ಶೀರ್ಷಿಕೆಯನ್ನು ಹಾಕಲಾಗಿದೆ. ಸದ್ಯದ ವರದಿ ಅನುಸಾರ ಚಿತ್ರದ ವಿಎಫ್‌ ಎಕ್ಸ್ ಕೆಲಸಗಳು ಪ್ರಸ್ತುತ ಮುಂಬೈನಲ್ಲಿ ನಡೆಯುತ್ತಿವೆ.

ಬಹು ಭಾಷೆಗಳಲ್ಲಿ ಮತ್ತು 3Dಯಲ್ಲಿ ಸಿನಿಮಾ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಸ್ಟುಡಿಯೋ ಗ್ರೀನ್, ಯುವಿ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಾಣವಾಗಲಿರುವ ಕಂಗುವ ಚಿತ್ರವು ಮುಂದಿನ ವರ್ಷ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿದೆ ಎಂದು ಹೇಳಲಾಗಿದೆ.

ಚಿತ್ರದಲ್ಲಿ ಬಾಲಿವುಡ್ ಬೆಡಗಿ ದಿಶಾ ಪಟಾನಿ, ಸೂರ್ಯಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.