ಮನೆ ರಾಜ್ಯ ಮಂಡ್ಯದ ಮನ್ಮುಲ್ ನ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ

ಮಂಡ್ಯದ ಮನ್ಮುಲ್ ನ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ

0

ಮಂಡ್ಯ: ಮಂಡ್ಯದ ಮನ್ಮುಲ್ ನ ಅಧ್ಯಕ್ಷ ಸ್ಥಾನಕ್ಕೆ ಇಂದು  ಚುನಾವಣೆ ನಡೆಯಲಿದ್ದು, ಜೆಡಿಎಸ್ -ಬಿಜೆಪಿ ದೋಸ್ತಿಗೆ ಒಳೇಟಿ‌ನ ಆತಂಕ ಎದುರಾಗಿದೆ.

Join Our Whatsapp Group

ಜೆಡಿಎಸ್ ನ 7 ಹಾಗೂ ಬಿಜೆಪಿಯ ಇಬ್ಬರು ಸೇರಿ ಅಧಿಕಾರ ಹಿಡಿಯಲು ನಿರ್ಧಾರಿಸಲಾಗಿದೆ.

ಆದರೆ ಜೆಡಿಎಸ್ ಪಕ್ಷದ ಜೊತೆ ಗುರ್ತಿಸಿಕೊಂಡಿರೋ ಡಾಲು ರವಿ ಕೈ ಪರ ಮತ ಹಾಕಲು ನಿರ್ಧಾರ ಮಾಡಿದ್ದಾರೆ. ಡಾಲು ರವಿ ನಿರ್ಧಾರದಿಂದ ಜೆಡಿಎಸ್- ಬಿಜೆಪಿ ದೋಸ್ತಿಗೆ ಅಧಿಕಾರ ಕೈ ತಪ್ಪುವ ಆತಂಕವಿದೆ.

ಈ ಹಿಂದೆ ಕೆ.ಆರ್.ಪೇಟೆಯ ಡಾಲು ರವಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿದ್ದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ಡಾಲು ರವಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಈ ಚುನಾವಣೆಯಲ್ಲಿ ತಾನು ಕಾಂಗ್ರೆಸ್ ಪರ ಮತ ಹಾಕುವುದಾಗಿ ಡಾಲು ರವಿ ಹೇಳಿಕೆ  ನೀಡಿದ್ದಾರೆ.

ಇದರಿಂದ ಜೆಡಿಎಸ್-ಬಿಜೆಪಿ ಮೈತ್ರಿ ನಿರ್ದೇಶಕರು ಕಂಗಾಲಾಗಿದ್ದಾರೆ.