ಮಂಡ್ಯ: ರೈತನ ಮೇಲೆ ಒಂಟಿ ಸಲಗ ದಾಳಿ ಮಾಡಿದ್ದು, ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ದಳವಾಡಿಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ದಳವಾಯಿ ಕೋಡಿಹಳ್ಳಿ ಗ್ರಾಮದ ಮಾದೇಗೌಡ ಗಾಯಗೊಂಡ ರೈತ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದ್ದು, ರೈತನನ್ನು ತುಳಿದು, ದಂತದಿಂದ ತಿವಿದು ಒಂಟಿ ಸಲಗ ಗಾಯಗೊಳಿಸಿದೆ.
ರೈತನ ಚೀರಾಟ ಕೇಳಿ ಅಕ್ಕ ಪಕ್ಕದ ರೈತರು ಸಹಾಯಕ್ಕೆ ಬಂದಿದ್ದು, ಅಕ್ಕ ಪಕ್ಕದ ರೈತರ ಚೀರಾಟ ಕೇಳಿ ಆ ರೈತನನ್ನು ಬಿಟ್ಟು ಸಹಾಯಕ್ಕೆ ಬಂದ ರೈತರ ಮೇಲೆ ಆನ ದಾಳಿ ಮಾಡಿದೆ.
ಈ ವೇಳೆ ಬೈಕ್ ಅಡ್ಡ ಸಿಕ್ಕಿದ್ದರಿಂದ ಬೈಕ್ ನ್ನು ತುಳಿದು ಜಖಂ ಮಾಡಿದೆ.
ಗಾಯಗೊಂಡ ರೈತನನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Saval TV on YouTube