ಮನೆ ರಾಜಕೀಯ ಹಿಂಸೆಗೆ ಇಳಿದರೆ ಸಹಿಸಲಾಗದು: ಸಿಎಂ ಬೊಮ್ಮಾಯಿ

ಹಿಂಸೆಗೆ ಇಳಿದರೆ ಸಹಿಸಲಾಗದು: ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ಸಂಘಟನೆಗಳು ಕಾನೂನು ಕೈಗೆತ್ತಿಕೊಂಡು ಹಿಂಸೆಗೆ ಇಳಿದರೆ ಅದನ್ನು ಸಹಿಸಲಾಗದು’ ಎಂದು ಮುಖ್ಯಮಂತ್ರಿ(Chief minister) ಬಸವರಾಜ ಬೊಮ್ಮಾಯಿ(Basavaraj Bommai) ಸೋಮವಾರ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

‘ಶಾಂತಿ ಕದಡುವ ಶಕ್ತಿಗಳ ಬಗ್ಗೆ ಮುಖ್ಯಮಂತ್ರಿ ಮೌನವಾಗಿದ್ದು, ಇಂತಹ ಕೃತ್ಯಗಳಿಗೆ ಅವರ ಬೆಂಬಲ ಇದೆಯೇ  ಎಂದು ವಿರೋಧ ಪಕ್ಷದ ನಾಯಕರು ಕಟುವಾಗಿ ಪ್ರಶ್ನಿಸಿದ್ದರು. ಅಲ್ಲದೇ ಬಿಜೆಪಿ ಶಾಸಕ  ಬಿ.ಎಸ್. ಯಡಿಯೂರಪ್ಪ(B.S.Yediyoorappa) ಅವರು, ‘ಕೋಮುಸೌಹಾರ್ದಕ್ಕೆ ಧಕ್ಕೆಯಾಗದಂತೆ ಬಿಗಿಕ್ರಮ ಕೈಗೊಳ್ಳಬೇಕು ಎಂದೂ ಸಲಹೆ ನೀಡಿದ್ದರು.

ಈ ನಡುವೆ ಉಡುಪಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ‘ಸಂವಿಧಾನಬದ್ಧವಾಗಿ ರಚನೆಯಾಗಿರುವ ‌ಸರ್ಕಾರ ಕಾನೂನು, ಸುವ್ಯವಸ್ಥೆ ಹಾಗೂ ಸಮಾನತೆಯ ದೃಷ್ಟಿಯಿಂದ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.

‘ವಿರೋಧಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಾವು ಮಾತನಾಡಬಾರದು, ನಮ್ಮ ಕೆಲಸಗಳು ಮಾತನಾಡಬೇಕು. ಯಾವಾಗ, ಯಾವ ನಿರ್ಧಾರ ಅಥವಾ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ವಿರೋಧಪಕ್ಷಗಳಿಂದ ಕಲಿಯಬೇಕಿಲ್ಲ’ ಎಂದರು.
‘ಈ ಹಿಂದೆ ಹಲವು ಯುವಕರ ಕೊಲೆ ನಡೆದಾಗ, ನೇರವಾಗಿ ಭಾಗಿಯಾಗಿದ್ದ ಸಂಘಟನೆಗಳು ಹಾಗೂ ಮುಖಂಡರ ಮೇಲಿದ್ದ ಪ್ರಕರಣಗಳನ್ನು ಕೈಬಿಟ್ಟಾಗ ಕಾಂಗ್ರೆಸ್‌ನ ಕರ್ತವ್ಯ ಪ್ರಜ್ಞೆ ಎಲ್ಲಿಗೆ ಹೋಗಿತ್ತು’ ಎಂದು ಪ್ರಶ್ನಿಸಿದ ಬೊಮ್ಮಾಯಿ, ‘ಶಾಂತಿ, ಸುವ್ಯವಸ್ಥೆಯಿರುವ ಪ್ರಗತಿಪರ ರಾಜ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ’ ಎಂದು ತಿರುಗೇಟು ನೀಡಿದರು.