ಮನೆ ತಂತ್ರಜ್ಞಾನ ಫೇಸ್ ​​ಬುಕ್​ ನಲ್ಲೂ ವಿಡಿಯೋ ಎಡಿಟ್ ಮಾಡಬಹುದು!

ಫೇಸ್ ​​ಬುಕ್​ ನಲ್ಲೂ ವಿಡಿಯೋ ಎಡಿಟ್ ಮಾಡಬಹುದು!

0

ಜನಪ್ರಿಯ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್​ ಆಗಿರುವ ಮೆಟಾ ಹಲವಾರು ಹೊಸ ವೈಶಿಷ್ಟ್ಯಗಳನ್ನು ತಂದಿದೆ. ಮೆಟಾ ತನ್ನ ಫೇಸ್‌ಬುಕ್ ವಿಡಿಯೋ ವೈಶಿಷ್ಟ್ಯಕ್ಕೆ ಹಲವಾರು ಅಪ್‌ ಗ್ರೇಡ್‌ ಗಳನ್ನು ಘೋಷಿಸಿದೆ.

Join Our Whatsapp Group

ಇನ್ನು ಮುಂದೆ, ಬಳಕೆದಾರರು ಫೇಸ್‌ ಬುಕ್‌ ನಲ್ಲಿ ವಿಡಿಯೋ ಅಪ್​​ ಲೋಡ್​ ಮಾಡುವ ಮೊದಲು ಫೇಸ್​ ಬುಕ್ ​ನಲ್ಲಿ ಎಡಿಟ್​ ಮಾಡುವ ಸೆಟ್ಟಿಂಗ್​ಗಳನ್ನು ಬಳಸುವ ಅವಕಾಶವನ್ನು ಪಡೆಯುತ್ತಾರೆ. ಅಲ್ಲದೆ, ಇನ್ನು ಮುಂದೆ ಫೇಸ್‌ಬುಕ್ ಬಳಕೆದಾರರು HDR ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ ಮತ್ತು ಹಳೆಯ ವಾಚ್ ಟ್ಯಾಬ್ ಬದಲಿಗೆ ವಿಡಿಯೋ ಟ್ಯಾಬ್ ಆಯ್ಕೆಯನ್ನು ಕಾಣಬಹುದು. ಅಂದರೆ ಫೇಸ್‌ ಬುಕ್ ಬಳಕೆದಾರರಿಗೆ ವಿಡಿಯೋಗಳನ್ನು ಎಡಿಟ್ ಮಾಡಲು ಸುಲಭವಾಗುತ್ತದೆ. ಫೇಸ್‌ ಬುಕ್‌ ನ ಈ ಹೊಸ ವೈಶಿಷ್ಟ್ಯದ ಎಲ್ಲಾ ವಿವರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಫೇಸ್‌ ಬುಕ್‌ ನ ಹೊಸ ಎಡಿಟಿಂಗ್ ಟೂಲ್ ಬಳಕೆದಾರರಿಗೆ ಮ್ಯೂಸಿಕ್​, ಫಿಲ್ಟರ್‌ ಗಳು ಮತ್ತು ಇತರ ಪರಿಣಾಮಗಳನ್ನು ವಿಡಿಯೋಗಳಿಗೆ ಅಪ್ಲೈ ಮಾಡಲು ಅನುಮತಿಸುತ್ತದೆ. ಇದಲ್ಲದೆ, ಫೇಸ್‌ ಬುಕ್ ಬಳಕೆದಾರರು ಈಗ ವಿಡಿಯೋಗಳಿಗೆ ಮುಖ್ಯಾಂಶಗಳು ಮತ್ತು ಶೀರ್ಷಿಕೆಗಳನ್ನು ಆ್ಯಡ್​ ಮಾಡಲು, ಟ್ರಿಮ್ ಮಾಡಲ ಸಾಧ್ಯವಾಗುತ್ತದೆ.

ಹೊಸ ವಿಡಿಯೋ ಟ್ಯಾಬ್ ಫೀಚರ್ಸ್

ಫೇಸ್‌ ಬುಕ್‌ ನ ಹೊಸ ವಿಡಿಯೋ ಟ್ಯಾಬ್‌ ನೊಂದಿಗೆ, ಬಳಕೆದಾರರು ಫೇಸ್‌ ಬುಕ್‌ ನಲ್ಲಿ ವಿಡಿಯೋಗಳನ್ನು ಸುಲಭವಾಗಿ ಹುಡುಕಲು ಮತ್ತು ವೀಕ್ಷಿಸಲು ಸಾಧ್ಯವಾಗುತ್ತದೆ. ಕಂಪನಿಯು ಹಳೆಯ ವಾಚ್ ಟ್ಯಾಬ್ ಅನ್ನು ಹೊಸ ವಿಡಿಯೋ ಟ್ಯಾಬ್ ಆಯ್ಕೆಯೊಂದಿಗೆ ಬದಲಾಯಿಸಲಿದೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ಈ ಹೊಸ ಆಯ್ಕೆಯು ಶಾರ್ಟ್‌ ಕಟ್ ಬಾರ್‌ ನಲ್ಲಿ ಕಾಣಿಸಿಕೊಳ್ಳುತ್ತದೆ.

ರೀಲ್‌ಗಳು, ದೀರ್ಘ ವಿಡಿಯೋಗಳು ಮತ್ತು ಲೈವ್ ಸ್ಟ್ರೀಮ್‌ ಗಳಿಂದ ಎಲ್ಲವನ್ನೂ ಒದಗಿಸುವ ವಿಡಿಯೋಗಾಗಿ ಇದು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮೇಟರ್ ಹೇಳಿದರು. ಈ ವಿಡಿಯೋ ಆಯ್ಕೆಯು Android ಅಪ್ಲಿಕೇಶನ್‌ ನಲ್ಲಿ ಮೇಲ್ಭಾಗದಲ್ಲಿ ಮತ್ತು iOS ನಲ್ಲಿ ಕೆಳಭಾಗದಲ್ಲಿ ಕಾಣ ಸಿಗುತ್ತದೆ. ಇದು ಫೇಸ್‌ಬುಕ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸಲು ಮತ್ತು ಎಡಿಟ್​ ಮಾಡಲು ಹೆಚ್ಚು ಸುಲಭವಾಗುತ್ತದೆ. ಇದರಿಂದ ಅನೇಕ Facebook ಬಳಕೆದಾರರಿಗೆ ಇನ್ನಷ್ಟು ಸಹಾಯವಾಗುತ್ತದೆ ಎಂದು ಹೇಳಲಾಗಿದೆ.

ರೀಲ್ಸ್ ​ಗಳನ್ನು ಎಡಿಟ್ ಮಾಡ್ಬಹುದು

ಫೇಸ್‌ ಬುಕ್ ಫೀಡ್‌ ನಲ್ಲಿ ಬಳಕೆದಾರರು ರೀಲ್ ಎಡಿಟಿಂಗ್ ಪರಿಕರಗಳನ್ನು ಸಹ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ. ಇದರೊಂದಿಗೆ, ಬಳಕೆದಾರರು ಫೇಸ್‌ ಬುಕ್ ಅಪ್ಲಿಕೇಶನ್‌ ನಿಂದ ಅಪ್‌ ಲೋಡ್ ಮಾಡುವಾಗ ನೇರವಾಗಿ ವಿಡಿಯೋಗೆ ಆಡಿಯೋ, ಟೆಕ್ಸ್ಟ್​ ಮತ್ತು ಮ್ಯೂಸಿಕ್​ ಆ್ಯಡ್​ ಮಾಡಬಹುದು. ಮೆಟಾ ಫೇಸ್‌ ಬುಕ್‌ ಗೆ ಇತ್ತೀಚೆಗೆ ವಿವಿಧ ಎಡಿಟಿಂಗ್ ಪರಿಕರಗಳ ಆಯ್ಕೆಗಳನ್ನು ಕೂಡ ಸೇರಿಸಿದೆ. ಇದರ ಮೂಲಕ ಬಳಕೆದಾರರು ಬಯಸಿದರೆ ವಿಡಿಯೋ ವೇಗವನ್ನು ಸಹ ಹೆಚ್ಚಿಸಬಹುದು. ಅದೇ ಸಮಯದಲ್ಲಿ, ಬಳಕೆದಾರರು ಈ ವಿಡಿಯೋವನ್ನು ಚೇಂಜ್ ಸಹ ಮಾಡುವ ಅವಕಾಶಗಳಿರುತ್ತದೆ. ಬಳಕೆದಾರರು ಆಡಿಯೋವನ್ನು ಕಸ್ಟಮೈಸ್ ಮಾಡಲು ಸಹ ಈ ಫೀಚರ್ ​​ನಲ್ಲಿ ಸಾಧ್ಯವಾಗುತ್ತದೆ.

ಬಳಕೆದಾರರು ಈಗ HDR ವಿಡಿಯೋಗಳನ್ನು ಫೋನ್‌ ನಿಂದ ಫೇಸ್‌ ಬುಕ್‌ ಗೆ ಅಪ್‌ಲೋಡ್ ಮಾಡಬಹುದು. ಮೆಟಾ ದೀರ್ಘಕಾಲದವರೆಗೆ ಫೇಸ್‌ ಬುಕ್ ಮತ್ತು ಇನ್‌ ಸ್ಟಾಗ್ರಾಮ್‌ ನಲ್ಲಿ ರೀಲ್ ಅನ್ನು ಜನಪ್ರಿಯ ವಿಡಿಯೋವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಗಮನಿಸಬೇಕು. ಇನ್ನು ಮಾರ್ಚ್‌ ನಲ್ಲಿ, ಫೇಸ್‌ ಬುಕ್ ರೀಲ್ ಸಮಯವನ್ನು 60 ಸೆಕೆಂಡುಗಳಿಂದ 90 ಸೆಕೆಂಡುಗಳಿಗೆ ಹೆಚ್ಚಿಸಲಾಯಿತು. ಇದೀಗ ಫೇಸ್​ ಬುಕ್​ ಬಳಕೆದಾರರಿಗೆ ಇನ್ನಷ್ಟು ಸಹಕಾರಿಯಾಗಲಿದೆ. ಇನ್ನು ಫೇಸ್ ​ಬುಕ್ ​ನ ಈ ಹೊಸ ಅಪ್ಡೇಟ್​ ಇನ್ನೇನು ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದ್ದು, ಆ ನಂತರ ಯಾವುದೇ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೊದಲು ಅಲ್ಲೇ ಎಡಿಟ್ ಮಾಡಿಕೊಳ್ಳಬಹುದು.