ಮನೆ ರಾಷ್ಟ್ರೀಯ ಗುಜರಾತ್  ಸೇತುವೆ ದುರಂತ: ಭದ್ರತಾ ಸಿಬ್ಬಂದಿ, ಟಿಕೆಟ್ ಮಾರಾಟಗಾರರು ಸೇರಿ 9 ಮಂದಿ ಬಂಧನ

ಗುಜರಾತ್  ಸೇತುವೆ ದುರಂತ: ಭದ್ರತಾ ಸಿಬ್ಬಂದಿ, ಟಿಕೆಟ್ ಮಾರಾಟಗಾರರು ಸೇರಿ 9 ಮಂದಿ ಬಂಧನ

0

ಮೊರ್ಬಿ: ಗುಜರಾತ್‌ನ ಮೋರ್ಬಿ ಎಂಬಲ್ಲಿ ನಡೆದ​ ತೂಗು ಸೇತುವೆ ದುರಂತ ಪ್ರಕರಣದಲ್ಲಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಸೇತುವೆಯನ್ನು ನವೀಕರಿಸಿದ ಒರೆವಾ ಕಂಪನಿಯ ಅಧಿಕಾರಿಗಳು, ಸೆಕ್ಯೂರಿಟಿ ಗಾರ್ಡ್‌ಗಳು ಮತ್ತು ಟಿಕೆಟ್‌ ಕಲೆಕ್ಟರ್‌ಗಳೂ ಸೇರಿದ್ದಾರೆ.

ಭಾನುವಾರ ಸಂಜೆ ಕುಸಿದು ಬಿದ್ದ ಮೋರ್ಬಿ ನಗರದ ಸೇತುವೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರ್ಯವನ್ನು ನೀಡಿದ ಏಜೆನ್ಸಿಗಳ ವಿರುದ್ಧ ಪೊಲೀಸರು ನರಹತ್ಯೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

‘ಬಿ’ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ದೇಕಿವಾಡಿಯಾ ಅವರು ದಾಖಲಿಸಿರುವ ಎಫ್ಐಆರ್ನಲ್ಲಿ, ಸ್ಥಳೀಯ ಆಡಳಿತವು ಅದರ ನಿರ್ವಹಣೆಗಾಗಿ “ಖಾಸಗಿ ಏಜೆನ್ಸಿ” ಯನ್ನು ನಿಯೋಜಿಸಿದ್ದರಿಂದ ಮೋರ್ಬಿ ಪಟ್ಟಣದ ಮಚ್ಚು ನದಿಯ ಮೇಲಿನ ಸೇತುವೆಯು ಸುಮಾರು ಎಂಟು ತಿಂಗಳಿನಿಂದ ಬಳಕೆಯಾಗಿರಲಿಲ್ಲ ಎಂದು ಹೇಳಿದ್ದಾರೆ.

ಹಿಂದಿನ ಲೇಖನಟಿ20 ವಿಶ್ವಕಪ್ ನಲ್ಲಿ ಭಾರತಕ್ಕೆ ಮೊದಲ ಸೋಲು: 43 ರನ್ ನೀಡಿದ್ದೇ ಸೋಲಿಗೆ ಕಾರಣವೆಂದ ಸುನೀಲ್ ಗವಾಸ್ಕರ್!
ಮುಂದಿನ ಲೇಖನಎನ್.ಆರ್.ಪೊಲೀಸ್ ಠಾಣೆಯ ಇನ್ಸ್’ಪೆಕ್ಟರ್ ಅಜರುದ್ದೀನ್ ಅವರ ಜನ್ಮದಿನ ಆಚರಣೆ