ಮನೆ ಮನರಂಜನೆ  ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನು ಮೆಚ್ಚಿದ ಪ್ರೇಕ್ಷಕ

 ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನು ಮೆಚ್ಚಿದ ಪ್ರೇಕ್ಷಕ

0

ಡಾರ್ಲಿಂಗ್​ ಕೃಷ್ಣ ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಪೇಯ್ಡ್​ ಪ್ರೀಮಿಯರ್​ ಮಾಡಲಾಗಿದೆ. ಪ್ರೀಮಿಯರ್​ ಶೋನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಸಖತ್​ ಇಷ್ಟಪಟ್ಟಿದ್ದಾರೆ. ವಿಶೇಷವಾಗಿ ಫ್ಯಾಮಿಲಿ ಪ್ರೇಕ್ಷಕರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾವನ್ನು ಎಂಜಾಯ್​ ಮಾಡುತ್ತಿದ್ದಾರೆ.

Join Our Whatsapp Group

ಡಾರ್ಲಿಂಗ್​ ಕೃಷ್ಣ  ಅವರಿಗೆ ಜೋಡಿಯಾಗಿ ಬೃಂದಾ ಆಚಾರ್ಯ​ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಿಲನಾ ನಾಗರಾಜ್​ ಅವರಿಗೂ ಒಂದು ಪಾತ್ರ ಇದೆ. ಶಶಾಂಕ್​ ನಿರ್ದೇಶನದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಟಾಕ್​ ಕ್ರಿಯೇಟ್​ ಮಾಡಿದೆ. ಜನರಿಂದ ಬಾಯಿ ಮಾತಿನ ಪ್ರಚಾರ ಸಿಗುತ್ತಿರುವ ಕಾರಣ ಶುಕ್ರವಾರ (ಜುಲೈ 28) ಕೂಡ ಹೌಸ್​ಫುಲ್​ ಆಗುವುದು ಖಚಿತವಾಗಿದೆ.

ಇತ್ತೀಚೆಗಷ್ಟೇ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಪೇಯ್ಡ್​ ಪ್ರೀಮಿಯರ್​ ಶೋನ ಬುಕಿಂಗ್​ ಶುರುವಾಗಿತ್ತು. ಕೆಲವೇ ಗಂಟೆಗಳಲ್ಲಿ ಎಲ್ಲ ಟಿಕೆಟ್ ​ಗಳು ಸೋಲ್ಡ್​ ಔಟ್​ ಆದವು ಎಂಬುದು ವಿಶೇಷ. ಹಾಡುಗಳು ಕೂಡ ಸೂಪರ್​ ಹಿಟ್​ ಆಗಿವೆ. ಈ ಎಲ್ಲ ಕಾರಣಗಳಿಂದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಮೇಲೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಈ ಚಿತ್ರ ಯಶಸ್ವಿ ಆಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು.

‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ ಅವರ ಪಾತ್ರಕ್ಕೆ ಬೇರೆ ಬೇರೆ ಶೇಡ್ಸ್​ ಇವೆ. ‘ಎಲ್ಲ ಪುರುಷರು ತಮ್ಮ ಕುಟುಂಬದವರ ಜೊತೆಯಲ್ಲಿ ಕುಳಿತು ನೋಡಲೇಬೇಕಾದ ಸಿನಿಮಾ ಇದು’ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಮಿಲನಾ ನಾಗರಾಜ್​ ಅವರ ಪಾತ್ರದಲ್ಲಿ ಇರುವ ಸಸ್ಪೆನ್ಸ್​ ಮತ್ತು ಟ್ವಿಸ್ಟ್​ ಕೂಡ ಜನರಿಗೆ ಇಷ್ಟ ಆಗಿದೆ. ಒಟ್ಟಾರೆಯಾಗಿ ಸಿನಿಮಾ ಮೂಡಿಬಂದಿರುವ ರೀತಿಗೆ ಜನರು ಫಿದಾ ಆಗಿದ್ದಾರೆ. ನಾಗಭೂಷಣ, ಅಚ್ಯುತ್​ ಕುಮಾರ್​, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದ ಕಲಾವಿದರ ನಟನೆಗೆ ಪ್ರೇಕ್ಷಕರು ಭೇಷ್​ ಎನ್ನುತ್ತಿದ್ದಾರೆ.