ಉಡುಪಿ : ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರವಾಗಿದ್ದು, ಆದರೆ ಕಾರ್ಯಕರ್ತರ ಅಭಿಮಾನ ತಡಯೋಕೆ ಸಾಧ್ಯವಿಲ್ಲ. ಅವರಿಗೆ ನಾವು ಹೇಳಿ ಬ್ಯಾನರ್ ಹಾಕಿಸಲು ಸಾಧ್ಯಾನಾ? ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು. ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಈ ವೇಳೆ, ಬೆಳಗಾವಿಯಲ್ಲಿ ಅವರ ಹಾಗೂ ಪುತ್ರನ ಫೋಟೋ ಜೊತೆ ಡಿಕೆಶಿ ಮುಂದಿನ ಸಿಎಂ ಬ್ಯಾನರ್ ರಾರಾಜಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿ, ನಾನು ಹೇಳಿ ಬ್ಯಾನರ್ ಹಾಕಿಸಲು ಸಾಧ್ಯಾನಾ? ಕಾರ್ಯಕರ್ತರ ಅಭಿಮಾನ ತಡೆಯಲು ಸಾಧ್ಯವಿಲ್ಲ ಎಂದರು.
ಕಾರ್ಯಕರ್ತರು ಅಭಿಮಾನದಿಂದ ಬ್ಯಾನರ್ ಹಾಕುತ್ತಾರೆ. ಏನೇ ಇದ್ದರೂ ಕೂಡ ನಾನು ಪಕ್ಷದ ಶಿಸ್ತಿನ ಸಿಪಾಯಿ. ಸಚಿವ ಸಂಪುಟದ ಪುನರ್ ರಚನೆ ಸೇರಿದಂತೆ ಎಲ್ಲಾ ವಿಚಾರವನ್ನು ಹೈಕಮಾಂಡ್‍ಗೆ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಂಗನವಾಡಿ ಕಾರ್ಯಕರ್ತರಿಂದ ಒಂದು ಸಾವಿರ ವಸೂಲಿ ವಿಚಾರವಾಗಿ, ಯಾವುದೇ ಹಣ ಕಲೆಕ್ಟ್ ಮಾಡಿಲ್ಲ. ಒಂದು ವೇಳೆ ಆಗಿದ್ದರೆ ಖಂಡಿತ ಪ್ರಕರಣ ದಾಖಲಿಸುತ್ತೇವೆ. ಬ್ಯಾನರ್‌ಗೆ ಒಂದು ಸಾವಿರ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಬ್ಯಾನರ್‌ಗೆ ಯಾವುದೇ ಹಣ ಪಡೆದಿಲ್ಲ. ಅಡ್ಮಿನ್ ಕಾಸ್ಟ್‌ನಿಂದ ಸರಿದೂಗಿಸಿದ್ದೇವೆ. ಅಗತ್ಯ ಬಿದ್ದರೆ ಖಂಡಿತವಾಗಿ ತನಿಖೆ ಮಾಡುತ್ತೇವೆ. ಯಾರೇ ಕಲೆಕ್ಟ್ ಮಾಡಿದ್ದರು ಕ್ರಮ ಕೈಗೊಳ್ಳುತ್ತೇವೆ ಎಂದರು.

















