ಮನೆ ರಾಜ್ಯ ವಿಸಿ ನಾಲೆಗೆ ಬಿದ್ದ ಕಾರು: ನೀರಿನಲ್ಲಿ ಕೊಚ್ಚಿ ಹೋದ ಚಾಲಕ

ವಿಸಿ ನಾಲೆಗೆ ಬಿದ್ದ ಕಾರು: ನೀರಿನಲ್ಲಿ ಕೊಚ್ಚಿ ಹೋದ ಚಾಲಕ

0

ಮಂಡ್ಯ: ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಕಾರು ಬಿದ್ದಿದ್ದು, ನೀರಿನ ರಭಸಕ್ಕೆ ಚಾಲಕ ನಾಲೆಯಲ್ಲಿ ಕೊಚ್ಚಿ ಹೋಗಿದ್ದಾನೆ.

Join Our Whatsapp Group

ಶಿವಳ್ಳಿ ಗ್ರಾಮದ ಲೋಕೇಶ್(48) ಕೊಚ್ಚಿ ಹೋದ ದುರ್ದೈವಿ.

ಕೊಚ್ಚಿ ಹೋದ ವ್ಯಕ್ತಿಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದು, ಸ್ಥಳಕ್ಕೆ ಶಿವಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.