ಮನೆ ಯೋಗಾಸನ ಪತಂಜಲಿ ಯೋಗದ ಸಂಕ್ಷಿಪ್ತ ವಿವರಣೆ – ಭಾಗ 2      

ಪತಂಜಲಿ ಯೋಗದ ಸಂಕ್ಷಿಪ್ತ ವಿವರಣೆ – ಭಾಗ 2      

0

4. ಪ್ರಾಣಾಯಾಮ :- ಸೃಷ್ಟಿಯ ಸಕಲ ಚಲನವಲನಗಳಿಗೂ ಪ್ರಾಣಶಕ್ತಿಯೇ ಆಧಾರ ಉಸಿರಾಟದ ಸರಿಯಾದ ಕ್ರಮವೇ ಪ್ರಾಣಾಯಾಮವಾಗಿದೆ. ಅದರಿಂದಲೇ ಮನಸ್ಸಿನ ಮೇಲೆ ಹತೋಟಿ ದೊರೆಯುತ್ತದೆ ಈ ಮೇಲಿನ ನಾಲ್ಕು ಸೋಪಾನಗಳನ್ನು ಬಹಿರಂಗ ಯೋಗ ಎನ್ನುತ್ತಾರೆ. ಇವನ್ನೇ ಕರ್ಮ ಯೋಗದ ಮುಖ್ಯ ಭಾಗಗಳೆನ್ನಬಹುದು. ಇನ್ನುಳಿದ 4 ಸೋಪಾನಗಳು ಜ್ಞಾನಯೋಗದ ಅರ್ಥಾತ್ ಅಂತರಂಗ ಯೋಗದ ಭಾಗಗಳು. ಆ ಕಾರಣಕ್ಕೆ ಬಹಿರಂಗ ಯೋಗವು ಅಂತರಂಗಯೋಗಕ್ಕೆ ಅತ್ಯವಶ್ಯಕವಾದ ಸೋಪಾನ ಅಥವಾ ಮೆಟ್ಟಿಲಾಗಿದೆ ಎನ್ನಬಹುದು. ಪ್ರಾಣಾಯಾಣವೆಂಬ ಅಗ್ನಿಯಿಂದ ಮನಸ್ಸು ಶುದ್ದಿಯಾಗುತ್ತದೆ.  

Join Our Whatsapp Group

5. ಪ್ರತ್ಯಾಹಾರ :- ಇಂದ್ರಿಯಗಳನ್ನು ವಿಷಯವಸ್ತುಗಳಿಂದ ಹಿಂದಿರುಗಿಸಿ ಅಂತರ್ಮುಖಗೊಳಿಸುವ ಪ್ರಯತ್ನವೇ ಪ್ರತ್ಯಾಹಾರ. ಇದು ಯೋಗದ ಐದನೇ ಹಂತವಾಗಿದೆ. ಇಂದ್ರಿಯಗಳ ಸೆಳೆತಕ್ಕೆ ಬುದ್ಧಿ ಸಿಕ್ಕರೆ ಮನುಷ್ಯ ಪತನವಾದಂತೆಯೇ. ಆದರೆ, ಉಸಿರನ್ನು ಕ್ರಮಗತವಾಗಿ ನಿಗ್ರಹ ಮಾಡಿದ್ದಾದರೆ ಇಂದ್ರಿಯಗಳು ಹೊರಗಣ ವಿಷಯಗಳನ್ನ ಕಡೆಗೆ ಎಳೆಸದೆ ಅಂತರ್ಮುಖವಾಗುತ್ತದೆ. ಆಗ ಯೋಗಿಯು ಇಂದ್ರಿಯಗಳ ಸೆಳೆತದಿಂದ ತಪ್ಪಿಸಿಕೊಳ್ಳಲು ಶಕ್ತನಾಗುತ್ತಾನೆ. ಇದು ಆಂತರಿಕ ಮತ್ತು ಬಹಿರಂಗ ಯೋಗಗಳ ನಡುವಿನ ಸೇತುವೆ. ಹೀಗಾಗಿ, ಯೋಗ ಸಾಧನೆಯ ಸಾಧನಾಮಾರ್ಗದಲ್ಲಿ ಇದು ಅತ್ಯಂತ ಮುಖ್ಯ ಘಟ್ಟವಾಗಿದೆ ಎಂದರೆ ತಪ್ಪಲ್ಲ. ಈ ಹಂತ ಮುಟ್ಟಿದಾಗ ಸಾಧಕನು ಆತ್ಮದ ಅನ್ವೇಷಣೆಯಲ್ಲಿ ತೊಡಗುತ್ತಾನೆ. 

6. ಧಾರಣ :- ಪ್ರಯತ್ನಪೂರ್ವಕವಾಗಿ ಮನಸ್ಸನ್ನು ಧ್ಯೇಯವಸ್ತುವಿನ ಕಡೆಗೆ ಕೇಂದ್ರೀಕರಿಸುವುದು. ಧಾರಣೆ ಎಂದರೆ, ಒಂದೇ ವಿಷಯದ ಮೇಲಿನ ಏಕಾಗ್ರತೆ. ಮನಸ್ಸು ಚಂಚಲವಾಗದೆ, ತಿಕ್ಕಾಟಕ್ಕೊಳಗಾಗದೆ, ತನ್ನ ಕ್ರಿಯೆಯತ್ತಲೆ ಏಕಾಗ್ರವಾಗಿರುವ ಸ್ಥಿತಿ. ಅಂತರ್ಯಾದ ಜ್ಞಾನವು ಬುದ್ಧಿಯೊಡನೆ ಉದ್ವೇಗರಹಿತವಾಗಿ ಸಂಗಮಿಸುವಂತೆ ಅದು ಪ್ರೇರಣೆ ನೀಡುತ್ತದೆ.

7. ಧ್ಯಾನ :- ಧಾರಣ ಹೆಚ್ಚು ಸಮಯ ಮುಂದುವರಿದರೆ ಅದೇ ಧ್ಯಾನ. ಅಥವಾ, ಇನ್ನೊಂದು ವಿಧದಲ್ಲಿ ಹೇಳುವುದಾದರೆ, “ನಿರಾಸಾಯವಾಗಿ ಮನಸ್ಸನ್ನು ಧೇಯ ವಸ್ತುವಿನ ಏಕಾಗ್ರತೆಗೊಳಿಸುವುದೇ ಧ್ಯಾನ” ಈ ಸ್ಥಿತಿಯನ್ನು ವರ್ಣಿಸುವುದು ಕಷ್ಟ. ಅದು ವರ್ಣನಾತೀತ, ಆದರ ಸ್ವಾದವನ್ನು ಅನುಭವಿಸಿಯೇ ಆನಂದಿಸಬೇಕು.  ನಮ್ಮ ಬುದ್ಧಿ, ಮನಸ್ಸು ಮತ್ತು ದೇಹಗಳನ್ನು ಆದಿ, ಮಧ್ಯ ಮತ್ತು ಅಂತ್ಯಕೋಶಗಳು (ಅಥವಾ ಮೊದಲ, ಮಧ್ಯದ ಮತ್ತು ಕೊನೆಯ ಶರೀರಗಳು) ಎಂದು ಕರೆದರು. ಅವರಈ ಶಬ್ದಗಳ ಸಂಸ್ಕೃತದ ಅರ್ಥಗಳಾದ ʼಧ್ʼ, ʼಯ್ʼ ಮತ್ತುʼಆʼ ಗಳನ್ನು ಆರಿಸಿ ಒಂದುಗೂಡಿಸಿ, ʼಧ್ಯಾʼ ಎಂದರು.  ʼಧ್ಯಾʼ ಎಂದರೆ ನಮ್ಮ ದೇಹ, ಮನಸ್ಸು ಮತ್ತು ಬುದ್ಧಿ. ಇದಕ್ಕೆ ʼನʼ ಅಂದರೆ ʼಇಲ್ಲʼ ಸೇರಿದಾಗ ʼʼಧ್ಯಾನʼʼವಾಯಿತು. ಆದ್ದರಿಂದ ಧ್ಯಾನವೆಂದರೆ- ದೇಹವಿಲ್ಲ, ಮನಸ್ಸಿನ ಮತ್ತು ಬುದ್ಧಿ ಇಲ್ಲ. ಅಂದರೆ ಇವು ಮೂರನ್ನು ಮೌನ ಗೊಳಿಸಬೇಕು ಅಂತ ಅದುವೇ ಧ್ಯಾನ.  ಈ ಮೌನವನ್ನು ಪ್ರಾರಂಭದಲ್ಲಿ ಹಲವು ಕ್ಷಣಗಳಿಂದ ಪ್ರಾರಂಭಿಸಿ ನಿಧಾನವಾಗಿ ಅವಧಿಯನ್ನು ಹೆಚ್ಚಿಸಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸಂಪೂರ್ಣ ಪ್ರಜ್ಞೆ ಅಥವಾ ಅರಿವಿನಿಂದಿದ್ದು,  (ಪ್ರಸ್ತುತದಲ್ಲಿ, ʼತಕ್ಷಣʼ ಅಥವಾ ʼಸದ್ಯʼದಲ್ಲಿ ಇರುವುದು.) ಯಾವುದಕ್ಕೂ ಪ್ರತಿಕ್ರಿಯೆ ತೋರಿಸದೆ, ಸಾಕ್ಷಿ ಭಾವದಿಂದ ನೋಡುತ್ತಾ ಇರುವುದು ಮತ್ತು ಆಲೋಚನೆಗಳಿಂದ ಪೂರ್ಣ ಮುಕ್ತರಾಗಿ ಇರುವುದು. ಯಾವುದೇ ವಿಚಾರಗಳಿಲ್ಲದ ವಿಚಾರ ಹೀನ (ನಿರ್ವಿಚಾರ) ಅಥವಾ ಯೋಚನಾರಹಿತ ಸ್ಥಿತಿ ಅಂತಲೂ ಹೇಳುತ್ತಾರೆ. ಅದು ತುಂಬಾ ಕಷ್ಟ ಸಾಧ್ಯ ಕಾರ್ಯವೇ!?

8. ಸಮಾಧಿ :- ಮನಸ್ಸು ಏಕಾಗ್ರತೆ ಸಾಧಿಸಿ, ಧ್ಯಾನಿಸುತ್ತಾ ವಸ್ತುವಿನೊಂದಿಗೆ ತನ್ಮಯತೆಯನ್ನು ಹೊಂದುವ ಸ್ಥಿತಿಯ ಸಮಾಧಿ. ಅರ್ಥತ್, ಧ್ಯಾನದ ಸ್ಥಿತಿಯನ್ನು ಅಡೆತಡೆಗಳನ್ನು ಬಾರದಂತೆ ಮುಂದುವರಿದಾಗ  ಸಾಮಾಧಿ ಸಿದ್ದಿಸುತ್ತದೆ. ಇದು ಸಾಧಕನ ಅಂತಿಮ ಗುರಿ, ಅಂತರ್ಮುಖ ಸ್ಥಿತಿ. ಅದನ್ನು ತಲುಪಿದ ಸಾಧಕನು ತನ್ನ ಅಸ್ತಿತ್ವವನ್ನೇ ಮರೆಯುತ್ತಾನೆ. ಧ್ಯಾನದಲ್ಲಿಯೇ ಏಕಾಗ್ರಚಿತ್ತನಾಗುತ್ತಾನೆ. ಅಂದರೆ ತನ್ನ ದೇಹ, ಉಸಿರು, ಮನಸ್ಸು, ಬುದ್ಧಿ, ಅಹಂಕಾರಗಳಿಂದ ದೂರವಾದ, ದೀರ್ಘ ಶಾಂತ ಸ್ಥಿತಿಯಲ್ಲಿ ಮುಳುಗುತ್ತಾನೆ. ಈ ಸ್ಥಿತಿಯನ್ನು ಅವನು ಶುಧ್ಧತೆ, ಜ್ಞಾನ ,ಪರಿಪಕ್ವತೆಯ,ವಿನಯ, ಸರಳತೆಗಳ ಪ್ರತಿಕನಾಗುತ್ತಾನೆ. ಮಾತ್ರವಲ್ಲದೆ ಉಳಿದ ಸತ್ಯಾನ್ವೇಷಿಗಳಿಗೆ ಮಾರ್ಗದರ್ಶಿ ಆಗಬಲ್ಲ ಎಂದು ಹೇಳಲಾಗುತ್ತದೆ.

ಮುಂದುವರೆಯುತ್ತದೆ………