ಮನೆ ರಾಷ್ಟ್ರೀಯ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ರಾಮಮಂದಿರಕ್ಕೆ 400 ಕೆಜಿ ತೂಕದ ಬೀಗ

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ರಾಮಮಂದಿರಕ್ಕೆ 400 ಕೆಜಿ ತೂಕದ ಬೀಗ

0

ಅಲಿಗಡ: ಮುಂದಿನ ಜನವರಿಯಲ್ಲಿ ಭಕ್ತಾದಿಗಳಿಗೆ ಮುಕ್ತವಾಗಲಿರುವ ಅಯೋಧ್ಯೆಯ ಭವ್ಯ ರಾಮಮಂದಿರಕ್ಕಾಗಿ ಅಲಿಗಡದ ಹಿರಿಯ ಕುಶಲಕರ್ಮಿಯೊಬ್ಬರು ಬರೋಬ್ಬರಿ 400 ಕೆ.ಜಿ. ತೂಕದ ಬೀಗವನ್ನು ಕೈಯ್ನಾರೆ ತಯಾರಿಸಿದ್ದಾರೆ.

ಶ್ರೀರಾಮನ ಭಕ್ತರಾಗಿರುವ ಸತ್ಯಪ್ರಕಾಶ್‌ ಶರ್ಮಾ ಅವರು ಇದಕ್ಕಾಗಿ ತಿಂಗಳುಗಟ್ಟಲೆ ಶ್ರಮಿಸಿದ್ದು, “ಕೈಯ್ನಾರೆ ತಯಾರಾದ ವಿಶ್ವದ ಅತಿ ದೊಡ್ಡ ಬೀಗ”ವನ್ನು ಪ್ರಸಕ್ತ ವರ್ಷಾಂತ್ಯದಲ್ಲಿ ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲಿದ್ದಾರೆ. ಈ ಬೀಗವು 10 ಅಡಿ ಎತ್ತರವಿದ್ದು, 4.5 ಅಡಿ ಅಗಲ, 9.5 ಇಂಚು ದಪ್ಪವಿದೆ.

ಇದರ ಕೀಲಿಕೈಯೇ 4 ಅಡಿ ಉದ್ದವಿದೆ. ಈ ಬೀಗ ಮತ್ತು ಕೀಲಿಕೈ ತಯಾರಿಸಲು ಸುಮಾರು 2 ಲಕ್ಷ ರೂ. ವೆಚ್ಚವಾಗಿದ್ದು, ಜೀವನಪೂರ್ತಿ ಸಂಗ್ರಹಿಸಿಟ್ಟಿದ್ದ ಉಳಿತಾಯದ ಹಣವನ್ನು ಇದಕ್ಕಾಗಿ ವ್ಯಯಿಸಿದ್ದು, ಈಗ ನನ್ನ ಕನಸು ಈಡೇರುತ್ತಿದೆ ಎಂದಿದ್ದಾರೆ ಶರ್ಮಾ.