ಮನೆ ಕಾನೂನು ಅಪ್ರಾಪ್ತೆಗೆ ಲೈಂಗಿಕ‌ ಕಿರುಕುಳ: ಅಪರಾಧಿಗೆ ದಂಡ ಸಹಿತ 20 ವರ್ಷ ಜೈಲುಶಿಕ್ಷೆ

ಅಪ್ರಾಪ್ತೆಗೆ ಲೈಂಗಿಕ‌ ಕಿರುಕುಳ: ಅಪರಾಧಿಗೆ ದಂಡ ಸಹಿತ 20 ವರ್ಷ ಜೈಲುಶಿಕ್ಷೆ

0

ಶಿವಮೊಗ್ಗ: ಅಪ್ರಾಪ್ತೆಗೆ ಲೈಂಗಿಕ‌ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ದಂಡ ಸಹಿತ 20 ವರ್ಷ ಜೈಲುಶಿಕ್ಷೆ ವಿಧಿಸಿ ಶಿವಮೊಗ್ಗ ಕೋರ್ಟ್ ತೀರ್ಪು ನೀಡಿದೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ‌ ಕಿರುಕುಳ ನೀಡಿದ್ದ 27 ವರ್ಷದ ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 1.50 ಲಕ್ಷ ದಂಡ ವಿಧಿಸಿದ್ದು, ಹಾಗೂ ದಂಡದ ಹಣ ಕಟ್ಟಲು ವಿಫಲವಾದರೆ ಹೆಚ್ಚುವರಿ 9 ತಿಂಗಳು ಸಾದಾ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

2022ರಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ‌ ಕಿರುಕುಳ ನೀಡಿದ್ದ ಆರೋಪ ಯುವಕನ ಮೇಲೆ ಕೇಳಿ ಬಂದಿತ್ತು. ಈ ಸಂಬಂಧ ಬಾಲಕಿಯ ತಂದೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. 1 ಲಕ್ಷದ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ‌.

ಹಿಂದಿನ ಲೇಖನಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ: ರಾಜಭವನಕ್ಕೆ ಅಧಿಕಾರಿಗಳ ದೂರು
ಮುಂದಿನ ಲೇಖನಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ರಾಮಮಂದಿರಕ್ಕೆ 400 ಕೆಜಿ ತೂಕದ ಬೀಗ