ಮನೆ ಸಾಹಿತ್ಯ ನಿಮ್ಮ ಶತ್ರುವಿನ ಹೃದಯವನ್ನು ಗೆಲ್ಲಿ

ನಿಮ್ಮ ಶತ್ರುವಿನ ಹೃದಯವನ್ನು ಗೆಲ್ಲಿ

0

ವ್ಯಾಪಾರದಲ್ಲಿ ಸಾಕಷ್ಟು ಯಶಸನ್ನುಗಳಿಸಿದ ಒಬ್ಬ ಕಿರಣಿ ವ್ಯಾಪಾರಿಯು ಒಂದು ಸುಸಜ್ಜಿತವಾದ ಅಂಗಡಿಯನ್ನು ಹೊಂದಿದ್ದನು. ಬಹಳಷ್ಟು ಗ್ರಾಹಕರು ತಮ್ಮ ದೈನಂದಿನ ಅಗತ್ಯಗಳಿಗಾಗಿ ನಿಯಮಿತವಾಗಿ ತನ್ನ ಅಂಗಡಿಗೆ ಬಂದು ವ್ಯಾಪಾರ ಮಾಡುತ್ತಿದ್ದಾರೆಂದು ಅವನಿಗೆ ಸಂತೋಷವಿತ್ತು. ಒಂದು ದಿನ ಅವನ ಅಂಗಡಿಯ ಮುಂದೆ ಒಂದು ದೊಡ್ಡ ಡಿಪಾರ್ಟ್ ಮೆಂಟ್ ಸ್ಟೋರ್ ಬಂತು. ಆ ಹೊಸ ಅಂಗಡಿಯು ತನ್ನ ವ್ಯಾಪಾರವನ್ನು ಮುಳುಗಿಹಾಕಬಹುದೆಂಬ ಭೀತಿ ಅವನಲ್ಲಿ ಉಂಟಾಯಿತು.ಬಹಳ ಆತಂಕದಿಂದ ಅವನು ಗುರುಗಳ ಬಳಿಗೆ ಹೋದನು. ನೂರು ವರ್ಷಗಳಿಂದ ತನ್ನ ಕುಟುಂಬ ಈ ವ್ಯಾಪಾರದಲ್ಲಿದೆಯೆಂದು ಇದನ್ನೇನಾದರೂ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆಯೇ ತನಗೆ ಇನ್ಯಾವ ವ್ಯಾಪಾರವೂ ತನಗೆ ಗೊತ್ತಿಲ್ಲ ಎಂದನು.

ಇದನ್ನು ಕೇಳಿದ ಗುರುಗಳು ಹೀಗೆಂದರು : “ ನೀನು ಡಿಪಾರ್ಟ್ ಮೆಂಟಲ್ ಸ್ಟೋರಿನ ಮಾಲಿಕನನ್ನು ನೋಡಿ ಭಯಪಟ್ಟರೆ ನೀನು ಅವನನ್ನು ದ್ವೇಷಿಸುವೆ. ದ್ವೇಷವು ನಿನ್ನ ಅಧಃಪತನಕ್ಕೆ ಕಾಣವಾಗುತ್ತದೆ.”

“ಹಾಗಾದರೆ ಏನು ಮಾಡುವುದು ?” ಎಂದು ಆತಂಕಕ್ಕೊಳಗಾದ ವ್ಯಾಪಾರಿ ಕೇಳಿದನು.

“ಪ್ರತಿದಿನ ನಿನ್ನ ಅಂಗಡಿಯಾಚೆ ನಿಂತು ನಿನ್ನ ಅಂಗಡಿ ಬೆಳೆಯಲೆಂದು ಹರಸು. ಹಾಗೆಯೇ ಡಿಪಾರ್ಟ್ಮ ಮೆಂಟ್ ಸ್ಟೋರಿನ ಕಡೆ ಮುಖಮಾಡಿ ಅದೂ ಬೆಳೆಯಲೇಂದು ಹರಸು “ ಎಂದರು.

“ಏನು ? ನನ್ನ ಸ್ಪರ್ಧಿ ಹಾಗೂವಿನಾಶಕನನ್ನು ನಾನು ಆಶೀರ್ವದಿಸಬೇಕೇ ? “

“ಹೌದು , ನಿನ್ನ ಹಾರೈಕೆ ನಿನ್ನ ಸದ್ಗುಣಫಲದ ಬುಟ್ಟಿಗೆ ಸೇರ್ಪಡೆಯಾಗುತ್ತದೆ. ನಿನ್ನ ಶಾಪ ನಿನ್ನ ವಿನಾಶದ ಬುಟ್ಟಿಗೆ ಸೇರುತ್ತದೆ.”

ಒಂದು ವರ್ಷದ ನಂತರ ವ್ಯಾಪಾರಿಯು ತಾನು ಭಯ ಪಟ್ಟುಕೊಂಡಂತೆ ತನ್ನ ಅಂಗಡಿಯನ್ನು ಮುಚ್ಚಬೇಕಾಗಿ ಬಂತೆಂದು ಹೇಳಿದನು.

ಪ್ರಶ್ನೆಗಳು : 1. ವ್ಯಾಪಾರಿ ತನ್ನ ಅಂಗಡಿಯನ್ನು ಏಕೆ ಮುಚ್ಚಿದನು ? 2. ಈ ಕಥೆಯ ನೀತಿಯೇನು ?

ಉತ್ತರಗಳು : 1. ಅವನು ಡಿಪಾರ್ಟ್ ಮೆಂಟಲ್ ಸ್ಟೋರಿನ ಮಾಲಿಕನಾದ್ದರಿಂದ ತನ್ನ ಕಿರಣಿ ಅಂಗಡಿಯನ್ನು ಮುಚ್ಚಬೇಕಾಗಿ ಬಂತು.

2. ನಾವು ಪ್ರತ್ಯೇಕವಾಗಿ ಬದುಕಬಾರದು. ವಿಶ್ವದ ಪ್ರತಿಯೊಂದು ಅಂಶವೂ ಒಂದಕ್ಕೋಂದು ಸಂಬಂಧಿಸಲ್ಪಟ್ಟಿದೆ. ಇದು ವೈಜ್ಞಾನಿಕ ಸತ್ಯ.  ವ್ಯಾಪಕ ಸ್ತರಗಳಲ್ಲಿ ಪ್ರವಹಿಸುವ ಶಕ್ತಿಯು ನಮ್ಮ ವಿಚಾರಗಳಿಗಿದೆ. ನಾವು ಅನುಭವಿಸುವ ಅಥವಾ ಅನುವುಮಾಡುವ ಪ್ರತಿಯೊಂದು ಭಾವನೆಯು ಇಡಿ ವಿಶ್ವಾವನ್ನು ಆವರಿಸುತ್ತದೆ.  ಒಬ್ಬ ವ್ಯಕ್ತಿಯನ್ನು ಕುರಿತ ನಮ್ಮ ಒಳ್ಳೆಯ ವಿಚಾರಗಳು ಅವರಿಗೇ ತಿಳಿಯದಂತೆ ಅವರನ್ನು ತಲುಪುತ್ತದೆ. ಪ್ರತಿಯೊಬ್ಬ ವ್ಯಕ್ತಿಯು (ಒಂದಲ್ಲ ಒಂದು ರೀತಿಯಲ್ಲಿ) ಇನ್ನೊಬ್ಬ ವ್ಯಕ್ತಿಯ ಒಳ್ಳೆಯ ಅತವಾ ಕೆಟ್ಟ ಭಾವನೆಯನ್ನು ಅರಿಯಬಲ್ಲರು. ಇದು ನಮಗೆ ತಿಳಿದೋ ತಿಳಿಯದೆಯೋ ನಮ್ಮ ಬದುಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ  ಅನಿವಾರ್ಯ ಸಂಗತಿ. ಡಿಪಾರ್ಟ್ ಮೆಂಟ್ ಸ್ಟೋರಿನ  ಮಾಲಿಕನನ್ನು ಅ ವ್ಯಾಪಾರಿಯು ದ್ವೇಷಿಸಲಿಲ್ಲ ಬದಲಿಗೆ ಅವನ ಅಂಗಡಿಯು ಚೆನ್ನಾಗಿರಲೆಂದು ಹಾರೈಸಿದರು. ಅವರಿಬ್ಬರೂ ಒಳ್ಳೆಯ ಸ್ನೇಹಿತರಾದರು. ಮುಂದೆ ವ್ಯಾಪಾರಿಯು ಡಿಪಾರ್ಟ್ ಮೆಂಟ್ ಸ್ಟೋರಿನ ಪಾಲುದಾರನಾದನು. ವ್ಯಾಪಾರದಲ್ಲಿ ಅವನಿಗೆ ಹೆಚ್ಚು ಅನುಭವ ಇದ್ದರಿಂದ ಅಂಗಡಿಯನ್ನು ಹೆಚ್ಚು ಸಮರ್ಥವಾಗಿ ನಡೆಸಿದರು. ಕೊನೆಗೆ ಅಲ್ಲಿನ ಮಾಲಿಕನು ಈ ಕಿರಣಿ ಅಂಗಡಿಯವನಿಗೆ ತನ್ನ ಮಾಲಿಕತ್ವದ ಎಲ್ಲಾ ಹಕ್ಕುಗಳನ್ನು ಬಿಟ್ಟು ಕೊಟ್ಟು ಪಟ್ಟಣಕ್ಕೆ ಹೋದನು.