ಮನೆ ತಂತ್ರಜ್ಞಾನ ಭಾರತದಲ್ಲಿ ಒಪ್ಪೋ A58 ಸ್ಮಾರ್ಟ್ ​ಫೋನ್ ಬಿಡುಗಡೆ

ಭಾರತದಲ್ಲಿ ಒಪ್ಪೋ A58 ಸ್ಮಾರ್ಟ್ ​ಫೋನ್ ಬಿಡುಗಡೆ

0

ಚೀನಾ ಮೂಲದ ಪ್ರಸಿದ್ಧ ಒಪ್ಪೋ ಕಂಪನಿ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ ಫೋನ್ ​ಗಳನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಕಡಿಮೆ ಬೆಲೆಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ ಇರುವ ಮೊಬೈಲ್ ಲಾಂಚ್ ಮಾಡುತ್ತಿರುವ ಒಪ್ಪೋ ಇದೀಗ ಅಂತಹದೆ ಫೋನಿನೊಂದಿಗೆ ಮತ್ತೆ ಬಂದಿದೆ. ಇಂದು ದೇಶದಲ್ಲಿ ಒಪ್ಪೋ ಎ58 4ಜಿ (Oppo A58 4G) ಸ್ಮಾರ್ಟ್​ಫೋನ್ ಅನಾವರಣಗೊಂಡಿದೆ.

ಒಪ್ಪೋ A58 ಬೆಲೆ ಎಷ್ಟು?:

ಒಪ್ಪೋ A58 4ಜಿ ಸ್ಮಾರ್ಟ್​ಫೋನ್ ಸದ್ಯಕ್ಕೆ ಭಾರತದಲ್ಲಿ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 6GB RAM + 128GB ರೂಪಾಂತರಕ್ಕೆ ಕೇವಲ 14,999 ರೂ. ನಿಗದಿ ಮಾಡಲಾಗಿದೆ. ಇದು ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ ಕಾರ್ಟ್ ಮೂಲಕ ಸೇಲ್ ಕಾಣುತ್ತಿದೆ. ನೀವು ICICI, HDFC, ಮತ್ತು ಕೋಟಕ್ ಬ್ಯಾಂಕ್ ಸೇರಿದಂತೆ ಆಯ್ದ ಬ್ಯಾಂಕ್‌ ಗಳ ಕಾರ್ಡ್ ಮೂಲಕ ಪಡೆದುಕೊಂಡರೆ ಹೆಚ್ಚುವರಿ ರಿಯಾಯಿತಿಗಳು ಮತ್ತು ಇತರ ಕೊಡುಗೆಗಳನ್ನು ಪಡೆಯಬಹುದು.

ಒಪ್ಪೋ A58 4G ಫೀಚರ್ಸ್:

ಈ ಫೋನ್ 90Hz ನ ರಿಫ್ರೆಶ್ ದರದೊಂದಿಗೆ 6.72-ಇಂಚಿನ ಪೂರ್ಣ-HD+ (2400 x 1080 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ. G52 MC2 GPU ಜೊತೆಗೆ ಮೀಡಿಯಾ ಟೆಕ್ ಹಿಲಿಯೊ G85 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರ ಇಂಡೋನೇಷಿಯನ್ ಪ್ರತಿರೂಪದಂತೆಯೇ, ಇದು Android 13-ಆಧಾರಿತ ColorOS 13.1 ನೊಂದಿಗೆ ರನ್ ಆಗುತ್ತದೆ.

ಹಿಂಬದಿ ಡ್ಯುಯಲ್ ಕ್ಯಾಮೆರಾ ಘಟಕವಿದ್ದು 2-ಮೆಗಾಪಿಕ್ಸೆಲ್ ಸಂವೇದಕದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಹಿಂಭಾಗದ ಕ್ಯಾಮೆರಾ ಜೊತೆ ಎಲ್ ಇಡಿ ಫ್ಲ್ಯಾಷ್ ಜೋಡಿಸಲಾಗಿದೆ.

ಒಪ್ಪೋ A58 4G 33W ವೈರ್ಡ್ SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಭದ್ರತೆಗಾಗಿ, ಸೈಡ್-ಮೌಂಟೆಡ್ ಫಿಂಗರ್‌ ಪ್ರಿಂಟ್ ಸಂವೇದಕವನ್ನು ಹೊಂದಿದೆ. ಈ ಫೋನ್ 5ಜಿ ಆಯ್ಕೆ ಪಡೆದುಕೊಂಡಿಲ್ಲ. ಬ್ಲೂಟೂತ್ v5.3, 4G, NFC, GPS ಮತ್ತು USB ಟೈಪ್-ಸಿ ಸಂಪರ್ಕವನ್ನು ನೀಡುತ್ತದೆ.