ಬೀದರ್: ಕೋರ್ಟ್ ತೀರ್ಪು ಫೋರ್ಜರಿ ಮಾಡಿದ್ದ ಹುಮ್ನಾಬಾದ್ ತಾಲೂಕಿನ ಬಸವತೀರ್ಥ ಮಠದ ಸ್ವಾಮೀಜಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬೀದರ್ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಭೂವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ(ಕೆಎಟಿ ) ತೀರ್ಪನ್ನು ತಿದ್ದಿದ್ದ ಪ್ರಕರಣಕ್ಕೆ ಬಸವತೀರ್ಥ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ತಹಶೀಲ್ದಾರ್ಗೆ ಜಿಲ್ಲಾಧಿಕಾರಿ ಗೋಂವಿದರೆಡ್ಡಿ ಸೂಚನೆ ನೀಡಿದ್ದಾರೆ.
ದೂರುದಾರ ಚಂದ್ರಕಾಂತ ಜಲಾದಾರ, ಸ್ವಾಮೀಜಿ ನಡುವೆ ಭೂವಿವಾದಕ್ಕೆ ಸಂಬಂಧಿಸಿದಂತೆ 2017ರ ನವೆಂಬರ್ 17ರಂದು ಕೆಎಟಿಯ ಅಧಿಕೃತ ತೀರ್ಪನ್ನು ಬಸವತೀರ್ಥ ಮಠದ ಸ್ವಾಮೀಜಿ ಫೋರ್ಜರಿ ಮಾಡಿ ಸಿಕ್ಕಿಬಿದ್ದಿದ್ದರು. ಇದೀಗ ಕೋರ್ಟ್ ಆದೇಶದಂತೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಹುಮ್ನಾಬಾದ್ ತಹಶೀಲ್ದಾರ್ ಗೆ ಬೀದರ್ ಡಿಸಿ ಗೋಂವಿದರೆಡ್ಡಿ ಆದೇಶಿಸಿದ್ದಾರೆ.
ಸಿದ್ಧಲಿಂಗ ಸ್ವಾಮಿ ಕೋರ್ಟ್ ನ ತೀರ್ಪನ್ನು ಫೋರ್ಜರಿ 5-12-2017ರಂದು ಜಿಲ್ಲಾಧಿಕಾಗಳಿಗೆ ಅರ್ಜಿ ಸಲ್ಲಿಸಿ ತೀರ್ಪಿನಲ್ಲಿ ಇಲ್ಲದೇ ಇರುವುದನ್ನು ಸೇರಿಸಿರುವುದು ದೃಢಪಟ್ಟಿದ್ದು, ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ ಕ್ರಮ ಜರುಗಿಸುವಂತೆ ನಿರ್ದೆಶಿಸಿರುವಂತೆ ಹುಮನಾಬಾದ್ನ ಬಸವತೀರ್ಥ ಮಠದ ಗುರು ಚನ್ನಬಸಪ್ಪಯ್ಯ ಮಠಾಧಿಪತಿಗಳು ಡಾ. ಸಿದ್ದಲಿಂಗ ಸ್ವಾಮಿ ವಿರುದ್ಧ ದಂಡ ಸಂಹಿತೆ ಕಲಂ 466 ಮತ್ತ ಅನ್ವಯವಾಗುವಂತೆ ಇತರೆ ಕಾನೂನಿ ಸೆಕ್ಷನ್ಗಳ ಪ್ರಕಾರ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಕೂಡಲೇ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಕಾಂಗ್ರೆಸ್ ಯುವ ಮುಖಂಡರಾದ ರಮೇಶ್ ಗೌಡರವರ ಹುಟ್ಟುಹಬ್ಬವನ್ನು ಶಾಸಕರ ಕಚೇರಿಯಲ್ಲಿ, ಆಚರಿಸಿದರು….
ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ವಾರ್ತಾ ಇಲಾಖೆಯ ಆಯುಕ್ತರಾಗಿ ಹೇಮಂತ್ ನಿಂಬಾಳ್ಳರ್ ವರ್ಗಾವಣೆ
ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.