ಮನೆ ಆರೋಗ್ಯ ಮಕ್ಕಳ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ

ಮಕ್ಕಳ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ

0

ತುಂಟ ಮಗು ಮನೆಯಲ್ಲಿ ಇದೆ ಎಂದರೆ ಎಲ್ಲರಿಗೂ ಆನಂದ ಮಗುವಿನ ಮುಗ್ಧ ನಗು ಮನೆಯನ್ನು ಬೆಳಗುತ್ತದೆ ಮಗು ಹುಟ್ಟುತ್ತಿದ್ದಂತೆ ಆ ಮನೆಯ ವಾತಾವರಣವೇ ಬದಲಾಗಿಬಿಡುತ್ತದೆ. ಇನ್ನು ತಾಯಿ ಆನಂದಕ್ಕೆ ಪರಾವೆ ಇರುವುದಿಲ್ಲ ತಾಯಿ ತನ್ನ ಒಂದು ಮಧುರವಾದ ಅನುಭವ ಆನಂದವನ್ನು ಅನುಭವಿಸಿದವರಿಗೆ ಗೊತ್ತು ಆ ಶ್ರೇಷ್ಠತೆ ಏನೆಂಬುದು!

ಮಾತೃತ್ವದ ಮಧುರ ಅನುಭವ ಸದಾ ಹಾಗೆ ಇರಬೇಕಾದರು ಮನೆಯಲ್ಲಿನ ಆನಂದ ಸದಾ ಹಸಿರಾಗಿಯೇ ಇರಬೇಕಾದರು ಮಗುವಿನ ವಿಷಯದಲ್ಲಿ ತಿಳವಳಿಕೆ ಬಹಳ ಅತ್ಯಗತ್ಯ. ಆ ತಿಳವಳಿಕೆ ಇದ್ದಾಗಲೇ ಮಗುವಿನ ಭವಿಷ್ಯ ಭವ್ಯವಾಗುತ್ತದೆ.

ಸಾಮಾನ್ಯವಾಗಿ ಹುಟ್ಟಿದ ಮಕ್ಕಳೆಲ್ಲರೂ ಆರೋಗ್ಯವಾಗಿಯೇ ಇರುತ್ತಾರೆ. ಕೇವಲ ಶೇಕಡ 10 ರಿಂದ 20 ರಷ್ಟು ಮಕ್ಕಳು ವಿಷಯದಲ್ಲಿ ವಿಶೇಷ ಶ್ರಧ್ಧೆ ವಹಿಸಬೇಕಾಗುತ್ತದೆ.

ಹುಟ್ಟಿದಾಗ ಒಂದುವರೆ ಕೆಜಿ ಮಾತ್ರ ತೂಕವಿದ್ದು 33 ವಾರಗಳಗೆ ಹೆರಿಗೆ ಆಗಿದ್ದವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಬೇಕಾಗಿರುತ್ತದೆ. ಎರಡುವರೆ ಕೆಜಿಗಿಂತಲೂ ಕಡಿಮೆ ಇದ್ದು 34 ರಿಂದ 36 ವಾರಗಳಿಗೆ ಹೆರಿಗೆ ಆಗಿದ್ದರೆ ಸ್ವಲ್ಪ ಮುತುವರ್ಜಿ ವಹಿಸಬೇಕಾಗುತ್ತದೆ.

ಉಮ್ಮುನೀರು (ಗರ್ಭ ಜಲ) ಶುದ್ಧವಾಗಿದ್ದಾಗ ಯಾವ ಸಮಸ್ಯೆ ಇರುವುದಿಲ್ಲ. ಉಮ್ಮುನೀರು ಅಶುದ್ಧವಾಗಿದೆ ಎಂದು ಕಂಡುಬಂದರೆ ಜನನೇಂದ್ರಿಯ ಮೂಲಕ ಮಗು ಹೊರಗೆ ಬರುತ್ತಿದ್ದಂತೆ ಮಗು ಮತ್ತು ಬಾಯಲ್ಲಿರುವ ನೀರನ್ನು ʼಮ್ಯೂಕಸ್ ಸಕ್ಕರ್ʼ ಎಂಬ ಉಪಕರಣ ಮೂಲಕ ಹೀರಬೇಕು.

ವೈದ್ಯಕೀಯ ವಲಯದಲ್ಲಿ ಕೇಳು ಬರುವ ಮಾತು ಹುಟ್ಟಿದ ಕ್ಷಣ ಮಗು ಅಳದಿದ್ದರೆ ಜೀವನ ಪರ್ಯಂತ ಅಳಬೇಕಾಗುತ್ತದೆ. ಎಂದು ಮಗು ತಾಯಿಯ ಗರ್ಭದಲ್ಲಿದ್ದಾಗ ಒಮ್ಮೆ ಉಸಿರು ತೆಗೆದುಕೊಂಡಿರುವುದಿಲ್ಲ. ಅದರ ಪ್ರಥಮ ಉಸಿರಾಟ ಆರಂಭವಾಗುವುದೆ ತಾಯ ಗರ್ಭದಿಂದ ಜಾರಿಭೂಮಿಗೆ ಬಂದಾಗ ಪ್ರಥಮ ಅಳುವಿನ ಕ್ಷಣದಿಂದ ಮಗು ತಾಯ ಗರ್ಭದಿಂದ ಹೊರಬರುತ್ತಿದ್ದಂತೆ ಅಳುತ್ತದೆ ಹಾಗೆ ಅಳದಿದ್ದರೆ ತಕ್ಷಣ ಮಗು ಮತ್ತು ಬಾಯನ್ನು ಮತ್ತು ಉಸಿರಾಟ ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳಬೇಕು.

ತಾಯಿಯ ಹೊಟ್ಟೆಯಲ್ಲಿ ಮಗು 36.5 ರಿಂದ 37.5 ಡಿಗ್ರಿ ಉಷ್ಣಮಾನದಲ್ಲಿ ಬೆಳೆಯುತ್ತದೆ ಮಗು ಹುಟ್ಟಿದ ತಕ್ಷಣ ಹೊರಗಿನ ವಾತಾವರಣ ತಂಪಾಗಿದ್ದರೆ ಮಗುವಿಗೆ ತೊಂದರೆಯಾಗುತ್ತದೆ ಆದ್ದರಿಂದ ಮಗು ಹುಟ್ಟುತ್ತಿದ್ದಂತೆ ಬೆಚ್ಚಗಿನ ಬಟ್ಟೆಗಳಲ್ಲಿ ಸುತ್ತಿ ಮಲಗಿಸಬೇಕು.

ಬೇಸಿಗೆಯಲ್ಲಿ ಹೊರಗಿನ ವಾತಾವರಣ ಬಹಳ ಬಿಸಿಯಾಗಿದ್ದರೆ ತಣ್ಣಗಿನ ಕೋಣೆಯಲ್ಲಿ ಇರಿಸಬೇಕು ಆಗ ತಾನೇ ಹುಟ್ಟಿದ ಮಗುವಿಗೆ ಅತಿ ಶೀತವಾಗಲಿ ಅತಿ ಬಿಸಿಯಾಗಲಿ ಒಳ್ಳೆಯದಲ್ಲ.

ತಾಯಿಯ ಗರ್ಭದಲ್ಲಿ ಉಷ್ಣದ ಮಟ್ಟವನ್ನು ಹೊರಗೂ ಕಾಯ್ದುಕೊಳ್ಳಬೇಕಾಗುತ್ತದೆ. ಶಿಶು ಮರಣಕ್ಕೆ ಅತಿ ಶೀತವು ಒಂದು ಮುಖ್ಯ ಕಾರಣ.

ಮಗು ಹುಟ್ಟಿದ ನಂತರ ಹೊಕ್ಕಳು ಬಳ್ಳಿಯನ್ನು ಎರಡುವರೆ ಅಂಗುಲಗಳಷ್ಟು ಬಿಟ್ಟು ದಾರದಿಂದ ಬಿಗಿದು ಕತ್ತರಿಸಬೇಕು. ಅದರಿಂದ ರಕ್ತಸ್ರಾವವಾಗದಂತೆ ನಂಜಾಗದಂತೆ ನೋಡಿಕೊಳ್ಳಬೇಕು.

ಮಗು ಹುಟ್ಟಿದ ತಕ್ಷಣ ಸ್ನಾನ ಮಾಡಿಸುವುದು ಮೈಗೆ ಎಣ್ಣೆ ಬಳಿಯುವುದು, ಕಿವಿ, ಮೂಗು, ಕಣ್ಣುಗಳಿಗೆ ಎಣ್ಣೆಯನ್ನು ಹಾಕುವುದು ಮಾಡಬಾರದು. ಎಳೆ ಮಗುಗೆ ಸ್ನಾನ ಮಾಡಿಸಿದರೆ ಬಹಳ ತೊಂದರೆಯಾಗುತ್ತದೆ ಹುಟ್ಟಿದ ಮಗುವನ್ನು ಮೃದುವಾದ ಬಟ್ಟೆಯಲ್ಲಿ ಸುತ್ತಿ ಮಲಗಿಸಬೇಕೆ ಹೊರತು ಮತ್ತೇನು ಮಾಡಬಾರದು.

ಮಗು ಹುಟ್ಟಿದ ಅರ್ಧ ಗಂಟೆ ಒಳಗೆ ತಾಯಿಯ ಮೊಲೆ ಉಣಿಸಬೇಕು. ಮಗು ತಾಯಿಯ ಮೊಲೆ ತೊಟ್ಟುಗಳನ್ನು ಚಪ್ಪರಿಸುವುದರಿಂದ ತಕ್ಷಣ ಹಾಲು ಬರದಿದ್ದರೂ ಈ ಕ್ರಿಯೆಯಿಂದ ಗರ್ಭಾಶಯ ತಕ್ಷಣ ಸಂಕುಚಿತವಾಗುತ್ತದೆ. ಅನಗತ್ಯವಾಗಿ ರಕ್ತಸ್ರಾವವಾಗುವುದಿಲ್ಲ ತಾಯಿ ಹಾಲು ದಕ್ಕಲು ಎರಡು ಮೂರು ದಿನಗಳಾಗುತ್ತಾರೆ. ಆರಂಭದಲ್ಲಿ ಬರುವ ದ್ರವ ದುಗ್ಧರಸ ಮಗುವಿಗೆ ಬಹು ಅಗತ್ಯ ಆರಂಭದ ಈ ಹಾಲು ಮಗುವಿಗೆ ರೋಗ ನಿರೋಧಕ ಶಕ್ತಿಯನ್ನು ಹುಟ್ಟು ಹಾಕಿ ಜೀವನಪರ್ಯಂತ ಆರೋಗ್ಯವಾಗಿರಲು ಸಹಕರಿಸುತ್ತದೆ.

 ಸಂಪೂರ್ಣ ಆರೋಗ್ಯದಿಂದ ಜನಿಸಿದ ಮಗು ನೇರಳೆ ಬಣ್ಣಕ್ಕಿರುತ್ತದೆ. ಒಂದು ವೇಳೆ ಬಾಡಿದಂತೆ ಕಂಡು ಬಂದರೆ ರಕ್ತಹೀನತೆ. ಎಂದು ತಿಳಿಯಬಹುದು ಹಳದಿಯಾಗಿದ್ದರೆ ಕಾಮಾಲೆ ಆಗಿರುವ ಸಂಭವಿಸುತ್ತದೆ. ಮಗುವಿನ ಚರ್ಮದ ಬಣ್ಣ ನೇರಳೆ ಯಾಗಿರದಿದ್ದರೆ ಕಾರಣವನ್ನು ಪರಿಶೀಲಿಸಬೇಕು.

ಆಗ ತಾನೆ ಹುಟ್ಟಿದ ಮಗು ನಿಮಿಷಕ್ಕೆ ಸುಮಾರು 60 ಬಾರಿ ಉಸಿರಾಡುತ್ತದೆ. ಅದಕ್ಕಿಂತಲೂ ಹೆಚ್ಚು ಸಾರಿ ಉಸಿರಾಡುತ್ತಿದ್ದರೆ ಕೆಲವು ಸ್ನಾಯುಗಳು ಒಳಕ್ಕೆಎಳೆದುಕೊಂಡಂತೆ ಕಂಡು ಬಂದರೆ, ಮಗು ಮುಕ್ಕುತಿದ್ದರೆ ಶ್ವಾಸಕೋಶದ ಕಾರ್ಯದಲ್ಲಿ ಲೋಪವಿದೆಯೇ ತಿಳಿಯಬೇಕು ಆದ್ದರಿಂದ ಮಗು ಹುಟ್ಟಿದ ತಕ್ಷಣ ಅದರ ಉಸಿರಾಟವನ್ನು ಗಮನಿಸಬೇಕು.

ಆಗ ತಾನೆ ಹುಟ್ಟಿದ ಮಗುವಿನ ಹೃದಯ 100 ರಿಂದ 160 ಸಾರಿ ಬಡೆದುಕೊಳ್ಳುತ್ತದೆ. ಇದಕ್ಕಿಂತಲೂ ಹೆಚ್ಚು ಬಾರಿ ಬಡಿತವಿದ್ದರೆ ಹೃದಯದ ಕಾರ್ಯದಲ್ಲಿ ದೋಷವಿದೆ ಎಂದು ಭಾವಿಸಬೇಕು.

ಮಗುವಿನ ಶರೀರ ಅತ್ಯಂತ ಸಂಚಾರ ಸೂಕ್ತವಾಗಿದೆಯೇ ಇಲ್ಲವೋ ಎಂಬುದನ್ನು ಒಂದು ಸರಳ ಪರೀಕ್ಷೆ ಮೂಲಕ ತಿಳಿದುಕೊಳ್ಳಬಹುದು ಮಗುವಿನ ಎದೆಯ ಮಧ್ಯದಲ್ಲಿ, ಪಾದದ ಮಧ್ಯದಲ್ಲಾಗಲಿ ಹೆಬ್ಬಟ್ಟಿನಿಂದ ಸೆಕೆಂಡ್ ಒತ್ತಿ ಹಿಡಿದು ತೆಗೆಯಬೇಕು ಆಗ ಒತ್ತಿದ ಭಾಗ ಬತ್ತಿದಂತಾಗುತ್ತದೆ. ಮಗುವಿನ ಶಾಕ್ ಆ ಮಗುವಿಗೆ ಶಾಕ್ ಆಗಿದ್ದರೆ ರಕ್ತಸಂಚರ ಸರಿಯಾಗಿಲ್ಲದಿದ್ದರೆ ಶರೀರದ ಉಷ್ಣಾಂಶ ಸೂಕ್ತವಾಗಿರದಿದ್ದರೆ ಮೇಲೆ ವಿವರಿಸಿ ದಂತೆ ನಡೆಯುವುದಿಲ್ಲ.

ಮಗು ಹುಟ್ಟಿದ ಐದು ನಿಮಿಷದೊಳಗೆ ಸಹಜವಾಗಿ ಅಳದಿದ್ದರೆ ಅಥವಾ ಉಸಿರಾಡದಿದ್ದರೆ ತಕ್ಷಣ ವಿಶೇಷ ಕಾಳಜಿ ವಹಿಸಬೇಕು ಮಗು ಮುಕ್ಕುತ್ತಿದ್ದರೆ ಅದು ಸಹಜ ಲಕ್ಷಣವಲ್ಲ

ಕೆಲವು ಮಕ್ಕಳಿಗೆ ಹುಟ್ಟುತ್ತಲೇ ಹಲವು ಅಂಗವೈಕಲ್ಯಗಳಿರುತ್ತದೆ.  ಹೃದಯದ ಶ್ವಾಸಕೋಶದ, ಜೀರ್ಣಾಂಗದ ದೋಷಗಳಿದ್ದರೆ ಅವುಗಳ ಕಡೆ ಗಮನ ಹರಿಸಬೇಕು.

ಹುಟ್ಟಿದ ಮಗು ಕಪ್ಪು, ಇಲ್ಲವೇ ಎಲೆ ಹಸಿರು ಬಣ್ಣದ ಮಲವಿಸರ್ಜನೆ ಮಾಡುತ್ತಿದ್ದರೆ ಮೂರು ನಾಲ್ಕು ದಿನದೊಳಗೆ ಎಲೆ ಹಸಿರು ಅರಿಶಿಣಕ್ಕೆ ಬಣ್ಣಕ್ಕೆ ಬದಲಾಗುತ್ತದೆ.

ಐದರಿಂದ ಏಳು ದಿನಗಳವರೆಗೆ ದಿನಕ್ಕೆ 10-15 ಸಾರಿ ಮಲವಿಸರ್ಜನೆ ಮಾಡುತ್ತದೆ. ಆದ್ದರಿಂದ ಸಾಮಾನ್ಯವಾದ ಈ ಕ್ರಿಯೆಯನ್ನು ಯಾವುದೇ ತೊಂದರೆ ಎಂದು ತಿಳಿದು ಗಾಬರಿಯಾಗಬಾರದು. ಆಗತಾನೇ ಹುಟ್ಟಿದ ಮಗು ಒಂದೆರಡು ಸಾರಿ ವಾಂತಿ ಮಾಡಿಕೊಳ್ಳುತ್ತದೆ ಅದು ಯಾವುದೋ ತೊಂದರೆಯಿಂದ ಒಂದು ವೇಳೆ ವಾಂತಿಯಲ್ಲಿ ರಕ್ತವಿದ್ದರೆ, ಎಲೆ ಹೆಸರು ಬಣ್ಣಕ್ಕಿದ್ದರೆ ಮತ್ತು ಅಗಾಗ ವಾಂತಿಯಾಗುತ್ತಿದ್ದರೆ ಕರಳು ಮುಚ್ಚಿ ಹೋಗಿದೆ ಎಂದು ಭಾವಿಸಬೇಕು.

ಸಾಮಾನ್ಯವಾಗಿ ಮಗು ಹುಟ್ಟುತ್ತಿದ್ದಂತೆ ಮೂತ್ರ ವಿಸರ್ಜನೆ ಮಾಡುತ್ತದೆ ಎಷ್ಟೇ ತಡವಾಯಿತೆಂದರು 24 ಗಂಟೆ ಒಳಗೆ ಮೂತ್ರ ವಿಸರ್ಜಿಸುತ್ತದೆ ಎರಡು ದಿನವಾದರೂ, ಮೂತ್ರ ವಿಸರ್ಜಿಸದಿದ್ದರೆ ಮೂತ್ರ ಪಿಂಡಗಳಲ್ಲಾಗಲಿ, ಮೂತ್ರನಾಳಗಳಲ್ಲಿ ದೋಷವಿದೆ ಎಂದು ತಿಳಿಯಬೇಕು.

 ಹೆಣ್ಣು ಅಥವಾ ಗಂಡು ಮಗು ಯಾವುದೇ ಆಗಿದರೂ ಹುಟ್ಟಿದ 3-4 ದಿನಕ್ಕೆ ಎದೆಯ ಭಾಗ ಸ್ವಲ್ಪ ದಪ್ಪವಾಗುತ್ತದೆ ಹಾಗೆ ದಪ್ಪ ಗಾದ ಎದೆ ಕೆಲವು ದಿನದೊಳಗೆ ಇಲ್ಲವೇ ಕೆಲವು ವಾರಗಳೊಳಗೆ ಕಡಿಮೆಯಾಗುತ್ತದೆ ಎದೆಯ ಭಾಗ ದಪ್ಪಗಾಗಿದೆ ಎಂದು ಅವುಗಳನ್ನು ಹಿಂಡುವುದಾಗಲಿ, ಬಿಸಿಯಾ ಕಾವು ಕೊಡುವುದಾಗಲಿ ಮಾಡಬಾರದು. ಮಗು ಗರ್ಭದಲ್ಲಿದ್ದಾಗ ತಾಯಿಯ ಹಾರ್ಮೋನ್ ಗಳ ಪ್ರಭಾವ ಮಗುವಿನ ಮೇಲಾಗಿರುತ್ತ ಆದ್ದರಿಂದ ಹಾಗಾಗುತ್ತದೆ.

ಹೆಣ್ಣು ಮಗು ಹುಟ್ಟಿದ 3-4 ದಿನದೊಳಗೆ ಜನನೇಂದ್ರಿಯದಿಂದ ಎರಡು ಮೂರು ದಿನ ರಕ್ತ ಕಂಡು ಬರುತ್ತದೆ. ಇದಕ್ಕೆ ಹೆಣ್ಣು ಮಗುವಿನ ತಾಯಿಯಿಂದ ಬಂದ ಈಸ್ಟ್ರೋಜನ್ ಹಾರ್ಮೋನ್ ಗಳ ಪ್ರಭಾವ ಕರಣವಾಗಿರುತ್ತದೆ 4 ದಿನ ಕಳೆದ ನಂತರ ರಕ್ತಸ್ರಾವ ಆಗುತ್ತಿದ್ದರೆ ಆ ಮಗುವಿನ ರಕ್ತಸ್ರಾವಕ್ಕೆ ಸಂಬಂಧಿಸಿದ ತೊಂದರೆ ಇದೆ ಎಂದು ಗಮನಿಸಬೇಕು.

ತಾಯಿಯ ಹೆಚ್ಚು ಸಮಯ ಹೆರಿಗೆ ನೋವಿನಿಂದ ತೊಂದರೆಪಟ್ಟಿದ್ದರೆ ಮಗುವಿನ ತಲೆ ಒಂದು ಕಡೆ ಉಬ್ಬಿರುತ್ತದೆ. ಇದನ್ನು ʼಕೇಪಟ್ʼ ಎನ್ನುತ್ತಾರೆ ಹೀಗೆ ಒಂದು ಕಡೆ ಉಬ್ಬಿರುವ ತಲೆ ಎರಡು ಮೂರು ದಿನದೊಳಗೆ ಸರಿಯಾಗುತ್ತದೆ. ಅದನ್ನು ಒತ್ತುವುದಾಗಲಿ ಸೂಜಿಹಾಕಿ ನೀರನ್ನು ಹೊರೆಯುವ ಪ್ರಯತ್ನಗಳನ್ನಾಗಲಿ ಮಾಡಬಾರದು.

ಮಗು ಹುಟ್ಟಿದಾಗಿನಿಂದ ನಾಲ್ಕು ಆರು ತಿಂಗಳವರೆಗೆ ತಾಯಿಯ ಹಾಲು ಹೊರೆತುಪಡಿಸಿ ಬೇರೇನು ಕೊಡು ಅಗತ್ಯವಿಲ್ಲ. ನೀರು ಕೂಡ ಕುಡಿಸುವ ಹಾಗಿಲ್ಲ ತಾಯಿಯ ಹಾಲಿನಲ್ಲಿಯೇ ಮಗುವಿಗೆ ಅಗತ್ಯವಾದಷ್ಟು ನೀರಿರುತ್ತದೆ.

ಬೇಸಿಗೆಯಲ್ಲಿ ಅತಿ ಉಷ್ಣಾಂಶವಿದ್ದಾಗ ಶರೀರದಲ್ಲಿ ನೀರಿನ ಕೊರತೆಯಾಗಿ ಡಿ ಹೈಡ್ರೇಶನ್ ಆಗುತ್ತಿದೆ ಎನಿಸಿದಾಗ ಎಲೆಕ್ಟ್ರೋಲೈಟ್ ದ್ರಾವಣವನ್ನು ಸೂಕ್ತ ಪ್ರಮಾಣದಲ್ಲಿ ತಾತ್ಕಾಲಿಕವಾಗಿ ಕೊಡಬಹುದು ಸಾಮಾನ್ಯವಾಗಿ ಡಿ ಹೈಡ್ರೇಶನ್ ಇದ್ದರೂ ತಾಯಿ ಹಾಲೆ ಸಾಕಾಗುತ್ತದೆ

ಮಗು ಹುಟ್ಟಿದ ಎರಡು ಮೂರು ದಿನಗಳಲ್ಲಿ ಸ್ವಲ್ಪಮಟ್ಟಿಗೆ ಅರಿಶಿಣ ಕಾಮಾಲೆ ಕಂಡು ಬಂದರೆ ತಕ್ಷಣ ಸೂಕ್ತ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು.

ಮಗು ಹುಟ್ಟಿದ ನಾಲ್ಕು ದಿನಗಳಲ್ಲಿ ಶೇ. 10 ರಷ್ಟು ತೂಕ ಕಳೆದುಕೊಳ್ಳುತ್ತದೆ. ಮತ್ತೆ 7-10 ದಿನಗಳಲ್ಲಿ ತೂಕ ತುಂಬಿಕೊಳ್ಳುತ್ತದೆ.

ಕೆಲವು ಎಳೆ ಮಕ್ಕಳಿಗೆ ಬ್ಯಾಕ್ಟೀರಿಯ ಮತ್ತು ವೈರಸ್ ಸೋಂಕು ತಗಲುತ್ತದೆ. ಮುಖ್ಯವಾಗಿ ಬ್ಯಾಕ್ಟಿರಿಯ ಸೋಂಕು ಉಂಟಾಗುತ್ತದೆ. ಹೀಗೆ ಸೋಂಕು ಉಂಟಾದಾಗ ಕೆಲವು ಮಕ್ಕಳು ಮೈ ಬಿಸಿಯಾದರೆ ಮತ್ತೆ ಕೆಲವು ಮಕ್ಕಳ ಮೈ ಬಿಸಿ ಕಳೆದುಕೊಂಡು ತಣ್ಣಗಾಗುತ್ತದೆ. ಸೋಂಕು ತಗಲಿದ ಮಕ್ಕಳು ಮಂಕಾಗುತ್ತಾರೆ ಮುಖದಲ್ಲಿ ರೋಗದ ಲಕ್ಷಣಗಳು ಕಾಣುತ್ತವೆ ಹಾಲು ಕುಡಿಯುವುದಿ,ಲ್ಲ ಕುಡಿದರು ಕಕ್ಕಿಬಿಡುತ್ತಾರೆ. ಉಸಿರಾಡಲು ತೊಂದರೆ ಪಡುತ್ತಾರೆ. ಹೊಟ್ಟೆ ಉಬ್ಬುತ್ತದೆ ಮತ್ತು ಮೂರ್ಛೆಯ ರೋಗ ಕಂಡುಬರುತ್ತದೆ. ಇಂತಹ ಮಕ್ಕಳಿಗೆ ಅಗತ್ಯವಾದರೆ ಬ್ಲಡ್ ಕಲ್ಚರ್ ಗ್ಯಾಸ್ಟಿಕ್ ಫ್ಲೂಯೆಡ್ ಸೈಕಾಲಜಿ,  ಸಿಎಸ್ ಎಫ್ ಎಕ್ಸಾಮಿನೇಷನ್, ಯೂರಿನ್ ಕಲರ್ಸ್, ಎಕ್ಸರೇ ಮತ್ತು ರಕ್ತ ಪರೀಕ್ಷೆಗಳನ್ನು ಮಾಡಬೇಕು.

ತಂದೆ ತಾಯಿಗಳಿಗೆ ಮಕ್ಕಳ ಆರೋಗ್ಯದ ಬಗ್ಗೆ ಕನಿಷ್ಠ ಜ್ಞಾನವಿದ್ದರೆ ಮಕ್ಕಳನ್ನು ಜಾಗುರತೆಯಿಂದ ನೋಡಿಕೊಳ್ಳುತ್ತಾರೆ.