ಮನೆ ಮನರಂಜನೆ ಮತ್ತೆ ನಿರ್ದೇಶಕರಾಗಿ ದುನಿಯಾ ವಿಜಯ್

ಮತ್ತೆ ನಿರ್ದೇಶಕರಾಗಿ ದುನಿಯಾ ವಿಜಯ್

0

ಸಲಗ ಚಿತ್ರದ ಯಶಸ್ಸಿನ ನಂತರ ದುನಿಯಾ ವಿಜಯ್ ನಿರ್ದೇಶಕರಾಗಿ ಗೆದ್ದಿದ್ದಾರೆ.

ನಟ ದುನಿಯಾ ವಿಜಯ್ ನಟಿಸಿ ಮೊದಲ ಬಾರಿಗೆ ನಿರ್ದೇಶನ ಮಾಡಿದ ‘ಸಲಗ’ ಸಿನಿಮಾ ಕಳೆದ ಅಕ್ಟೋಬರ್ 14ಕ್ಕೆ ಬಿಡುಗಡೆ ಆಗಿ ಹಿಟ್ ಚಿತ್ರ ಎನಿಸಿಕೊಂಡಿದೆ.  ಆದರೆ ಈಗ ಮತ್ತೆ ಸಲಗ ತಂಡದೊಂದಿಗೆ ದುನಿಯಾ ವಿಜಯ್ ಸಿನಿಮಾ ಮಾಡುತ್ತಿದ್ದಾರೆ. ಅದರ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.

ವಿಕೆ 28 ಎಂಬ ಟೈಟಲ್ ಇರುವ ಫೋಟೋವನ್ನು ದುನಿಯಾ ವಿಜಯ್ ಶೇರ್ ಮಾಡಿಕೊಂಡಿದ್ದಾರೆ. ಆರ್ಎಕ್ಸ್ ಬೈಕ್ನಲ್ಲಿ ವ್ಯಕ್ತಿಯೊಬ್ಬ ಕೂತಿರುವ ಚಿತ್ರ ಈ ಫೋಟೋದಲ್ಲಿದೆ. ಇದನ್ನು ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸದ್ಯಕ್ಕೆ ದುನಿಯಾ ವಿಜಯ್ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಶಿವರಾತ್ರಿಗೆ ಈ ಸಿನಿಮಾ ಟೈಟಲ್ ಲಾಂಚ್ ಆಗುವ ಸಾಧ್ಯತೆ ಇದೆ.

ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೊಸ ಪೋಸ್ಟರ್ನಲ್ಲಿ ಕೈ ಹಾಗೂ ಯಮಹಾ ಆರ್ಎಕ್ಸ್ 100 ಬೈಕ್ ತೋರಿಸಲಾಗಿದೆ. ಪೋಸ್ಟರ್ನಲ್ಲಿರುವ ಕೈ ರಕ್ತಸಿಕ್ತವಾಗಿದೆ. ಇದರಿಂದ ಇದು ಕೂಡ ರೌಡಿಸಂ ಕಥೆ ಎಂಬುದು ಸ್ಪಷ್ಟವಾಗಿದೆ.