ಮನೆ ಸುದ್ದಿ ಜಾಲ ಬುರ್ಖಾ ಅನಾರೋಗ್ಯಕರ ಪದ್ದತಿ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ಗ್ರಹಿಸಿದ್ದರು: ವಾದಿರಾಜ್

ಬುರ್ಖಾ ಅನಾರೋಗ್ಯಕರ ಪದ್ದತಿ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ಗ್ರಹಿಸಿದ್ದರು: ವಾದಿರಾಜ್

0

ಬೆಂಗಳೂರು(Bengaluru): ’ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾ ಒಂದು ಅನಾರೋಗ್ಯಕರ ಪದ್ಧತಿ ಎಂಬುದನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ (Dr.B.R.Ambedkar) ಗ್ರಹಿಸಿದ್ದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ವಕ್ತಾರ ವಾದಿರಾಜ್ (Vadiraj)ತಿಳಿಸಿದರು.

ಅಂಬೇಡ್ಕರ್ ಜಯಂತಿ ಅಂಗವಾಗಿ ಗಂಗಾನಗರದ ಐಇಟಿಇ ಕಟ್ಟಡದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶ್ರಯದಲ್ಲಿ ಗುರುವಾರ ನಡೆದ ವೈಚಾರಿಕ ಸಂವಾದದಲ್ಲಿ ವಾದಿರಾಜ್‌ ’ಅಂಬೇಡ್ಕರ್ ಅವರ ಸಾಮಾಜಿಕ ಸಾಮರಸ್ಯ‘ ಎಂಬ ವಿಷಯದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಬೇಡ್ಕರ್ ಸಮಾಜದ ಪರಿವರ್ತನೆಗೆ ಬದ್ಧವಾಗಿದ್ದ ಒಬ್ಬ ತೀಕ್ಷ್ಣಮತಿಯ ಮಹಾನ್ ರಾಷ್ಟ್ರವಾದಿಯಾಗಿದ್ದರು ಮತ್ತು ಹಿಜಾಬ್‌ಗಾಗಿ ನಡೆಯುತ್ತಿರುವ ಇಂದಿನ ಸಂಘರ್ಷದ ವಾತಾವಾರಣದಲ್ಲಿ ನಾವು ಅವರ ಈ ಚಿಂತನೆಯನ್ನು ಗಂಭೀರವಾಗಿ ಅವಲೋಕಿಸಬೇಕಿದೆ ಅಭಿಪ್ರಾಯಪಟ್ಟರು.

 ‘ದೇಶ ವಿಭಜನೆ ಆಗಬಾರದು ಎಂದು ಬಲವಾಗಿ ಪ್ರತಿಪಾದಿಸಿದ್ದ ಅಂಬೇಡ್ಕರ್, ಒಂದು ವೇಳೆ ವಿಭಜನೆ ಆಗಿದ್ದೇ ಆದಲ್ಲಿ, ಇಲ್ಲಿರುವ ಎಲ್ಲ ಮುಸ್ಲಿಮರೂ ಇಲ್ಲಿಂದ ಹೋಗಬೇಕು ಮತ್ತು ಉದಯವಾಗುವ ಹೊಸ ದೇಶದಲ್ಲಿನ ಹಿಂದೂಗಳು ಭಾರತಕ್ಕೆ ಬರಬೇಕು ಎಂದಿದ್ದರು. ಇಲ್ಲವಾದಲ್ಲಿ ಈ ಭಾರತ ಮುಸಲ್ಮಾನರ ಸಮಸ್ಯೆ ಬಗೆಹರಿಸಿಕೊಳ್ಳುವುದರಲ್ಲೇ ವ್ಯಸ್ತವಾಗಿ ಹಿಂದೂ ಸಮಾಜದೊಳಗಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವೇ ಆಗದಂತಹ ಪರಿಸ್ಥಿತಿಗೆ ಒಳಗಾಗುತ್ತದೆ ಎಂಬುದನ್ನು ಚೆನ್ನಾಗಿ ಮನಗಂಡಿದ್ದರು‘ ಎಂದು ವಿವರಿಸಿದರು.

ಆರ್‌ಎಸ್‌ಎಸ್‌ ಕ್ಷೇತ್ರೀಯ ಸಂಚಾಲಕ ವಿ‌.ನಾಗರಾಜ್, ‘ಸ್ವಾತಂತ್ಯಾನಂತರ ದೇಶ ವ್ಯಕ್ತಿಪೂಜೆಗೆ ಪಕ್ಕಾಯಿತು. ಅದರ ಪರಿಣಾಮ ಮತ್ತು ಮೇಲಾಟಗಳನ್ನು ನಾವಿಂದು ಅನುಭವಿಸುವಂತಾಗಿದೆ‘ ಎಂದು ವಿಷಾದಿಸಿದರು.