ಮನೆ ಅಪರಾಧ ವಿದ್ಯುತ್ ಅವಘಡ: ಒಂದೇ ಕುಟುಂಬದ ಮೂವರು ಸಾವು

ವಿದ್ಯುತ್ ಅವಘಡ: ಒಂದೇ ಕುಟುಂಬದ ಮೂವರು ಸಾವು

0

ಬೆಳಗಾವಿ: ‌ಆಕಸ್ಮಿಕ ವಿದ್ಯುತ್ ಅವಘಡದಿಂದ ಒಂದೇ ಕುಟುಂಬದ ಮೂವರು ಸದಸ್ಯರು ಮೃತಪಟ್ಟ ದಾರುಣ ಘಟನೆ ಬೆಳಗಾವಿ ನಗರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಮೃತ ದುರ್ದೈವಿಗಳನ್ನು ಈರಪ್ಪ ರಾಠೋಡ (53) ಪತ್ನಿ ಶಾಂತವ್ವ (45) ಹಾಗೂ ಮೊಮ್ಮಗಳು ಅನ್ನಪೂರ್ಣ (13) ಎಂದು ಗುರುತಿಸಲಾಗಿದೆ‌‌.

ಮೃತರು ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದವರು ಎನ್ನಲಾಗಿದೆ.

ಈರಪ್ಪ ಅವರು ನಿರ್ಮಾಣ ಹಂತದ ಮನೆಗೆ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಕಟ್ಟಡಕ್ಕೆ ನೀರು ಹೊಡೆಯಲು ಹೋದಾಗ ಆಕಸ್ಮಿಕ ವಿದ್ಯುತ್ ತಗುಲಿ ಈ ದುರಂತ ಸಂಭವಿಸಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.