ಮನೆ ದಾಂಪತ್ಯ ಸುಧಾರಣೆ ಉತ್ತಮ ಆಲೋಚನೆಗಳಿಂದ ಸಂಬಂಧವು ಹೂವಿನಂತೆ ಅರಳುತ್ತದೆ

ಉತ್ತಮ ಆಲೋಚನೆಗಳಿಂದ ಸಂಬಂಧವು ಹೂವಿನಂತೆ ಅರಳುತ್ತದೆ

0

ಕುಟುಂಬದಲ್ಲಿ ಎಲ್ಲರ ಮನಸ್ಸು ಒಂದೇ ರೀತಿಯಾಗಿರಬೇಕೆಂದೇನಿಲ್ಲ, ಆದರೆ ಆಲೋಚನೆ ಹೇಗೆ ಇರಲಿ ಕುಟುಂಬದ ಪರವಾಗಿ ಯೋಚಿಸುವ ಮನಸ್ಸಿರಬೇಕು. ಅದೇ ವಿಷಯಕಾರಿ ಸಂಬಂಧಗಳು ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ, ನಿಮ್ಮನ್ನು ನೋಯಿಸುತ್ತದೆ.

ಎಲ್ಲದಕ್ಕೂ ನಿಮ್ಮನ್ನು ದೂಷಿಸುವುದು ಯಾರೇ ತಪ್ಪು ಮಾಡಿದರೂ ನಿಮ್ಮನ್ನೇ ದೂಷಿಸುವುದು, ಏನೇ ಕೆಲಸವಾದರೂ ನೀವೇ ಮಾಡಬೇಕು ಅದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ಭಯದಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಸ್ವಇಚ್ಛೆಯಿಂದ ಏನೂ ಮಾಡಲು ಸಾಧ್ಯವಿಲ್ಲ ನಿಮ್ಮ ಸ್ವಂತ ಇಚ್ಛೆಯಿಂದ ಏನನ್ನೂ ಮಾಡಲು ಸಾಧ್ಯವಿಲ್ಲ, ಎಲ್ಲರೂ ನಿಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನಸ್ಸಿನಲ್ಲಿ ಭಯ ಕುಳಿತಿರುತ್ತದೆ, ನಿಮ್ಮ ಕನಸುಗಳು ನಾಶವಾಗುತ್ತವೆ, ದುಃಖ ಉಮ್ಮಳಿಸಿ ಬರುತ್ತದೆ, ಹತಾಶೆ ನಿಮ್ಮೊಳಗೆ ಓಡಾಡುತ್ತದೆ.

ಆತಂಕ ವಿಷಕಾರಿ ಸಂಬಂಧಗಳು ನಿಮ್ಮನ್ನು ಮಾನಸಿಕವಾಗಿ ಹಿಂಸಿಸಲು ಯಾವಾಗಲೂ ಸಮಯವನ್ನು ಕಾಯುತ್ತಿರುತ್ತದೆ, ನೀವು ಮಾಡದ ತಪ್ಪಿಗೂ ಶಿಕ್ಷೆ ಅನುಭವಿಸಬೇಕಾಗುತ್ತದೆ, ನಿಮ್ಮ ಆಲೋಚನೆಗಳನ್ನು ಹಿಡಿದಿಡಲು ಪ್ರಯತ್ನಿಸುತ್ತಿರುತ್ತಾರೆ. ಆಗ ನೀವು ಒತ್ತಡ ಮತ್ತು ಆತಂಕಕ್ಕೆ ಬಲಿಯಾಗುತ್ತೀರಿ.

ವೈವಾಹಿಕ ಜೀವನದ ಮೇಲೆ ಪರಿಣಾಮ ಕುಟುಂಬದಲ್ಲಿ ಎಲ್ಲರನ್ನೂ ನೋಡಿಕೊಳ್ಳುವ ಭರದಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಖುಷಿಯಾಗಿರಲು ಸಾಧ್ಯವಿಲ್ಲ. ಗಂಡ ಮತ್ತು ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಶುರುವಾಗುತ್ತದೆ.

ದಿನವಿಡೀ ಮನೆಕೆಲಸಗಳಲ್ಲಿ ನಿರತರಾಗಿರುವ ಕಾರಣ, ನಿಮಗಾಗಿ ಯಾವುದೇ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಸಂಗಾತಿ ಜತೆಗೆ ಹೊರಗೆ ಹೋಗಿ ಸ್ವಲ್ಪ ಸಮಯ ಕಳೆಯಿರಿ ಜತೆ ಊಟವನ್ನು ಮಾಡಿ, ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಪ್ರಯೋಜನ ನೀಡಬಹುದು.