ಮನೆ ಸುದ್ದಿ ಜಾಲ ಪಾಲಿಕೆ ಗ್ರಂಥಾಲಯಗಳ ನಿರ್ವಹಣೆ: 127.51 ಕೋಟಿ ರೂ.ಗಳ ಆಯವ್ಯಯಕ್ಕೆ ಅನುಮೋದನೆ

ಪಾಲಿಕೆ ಗ್ರಂಥಾಲಯಗಳ ನಿರ್ವಹಣೆ: 127.51 ಕೋಟಿ ರೂ.ಗಳ ಆಯವ್ಯಯಕ್ಕೆ ಅನುಮೋದನೆ

0

ಬೆಂಗಳೂರು:  ನಗರದ 5 ವಲಯಗಳ ಗ್ರಂಥಾಲಯಗಳ ನಿರ್ವಹಣೆಗಾಗಿ ಪ್ರಸಕ್ತ ಸಾಲಿನಲ್ಲಿ 127.51 ಕೋಟಿ ರೂ.ಗಳ ಆಯವ್ಯಯಕ್ಕೆ ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಪದನಿಮಿತ್ತ ಅಧ್ಯಕ್ಷ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಗ್ರಂಥಾಲಯಗಳ ನಿರ್ವಹಣೆಗಾಗಿ 600 ಗ್ರಂಥಾಲಯ ಪರಿಚಾರಕರು ಮತ್ತು ಮೇಲ್ವಿಚಾರಕರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳೂ ಆದ ರಾಕೇಶ್ ಸಿಂಗ್ ಅವರು, , ಬೇಡಿಕೆ ಇರುವ ವಾರ್ಡ್ ಗಳಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಗ್ರಂಥಾಲಯಗಳನ್ನು ಕೂಡಲೇ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು, ಈಗಾಗಲೇ ಗ್ರಂಥಾಲಯ ಕಟ್ಟಡ ಪೂರ್ಣಗೊಂಡಿರುವ ಡಿಜೆ ಹಳ್ಳಿ, ಮಡಿವಾಳ ಮತ್ತು ನಗರ ಪೋಲಿಸ್ ಕಮಿಷನರ್ ಆವರಣದ ಪಾರಂಪರಿಕ ಕಟ್ಟಡದಲ್ಲಿ ಕೂಡಲೇ ಸುಸಜ್ಜಿತ ಗ್ರಂಥಾಲಯವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಬೊಮ್ಮನಹಳ್ಳಿ ವಲಯದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಕ್ರೀಡಾಂಗಣ ಕಟ್ಟಡದಲ್ಲಿಯೂ ನೂತನವಾಗಿ ಗ್ರಂಥಾಲಯ ಸ್ಥಾಪಿಸಲಾಗುವುದು, ಬಿಟಿಎಂ ಬಡಾವಣೆಯ ಗ್ರಂಥಾಲಯ ಕಟ್ಟಡದ ಮೇಲೆ ಹೆಚ್ಚುವರಿ 3 ಮಹಡಿಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಅವಶ್ಯಕವಾಗಿರುವ 5ಕೋಟಿ ರೂ. ಗಳನ್ನು ಪಾಲಿಕೆಯ ಗ್ರಂಥಾಲಯ ಸೆಸ್ ನಿಂದ ಭರಿಸಲಾಗುವುದು ಎಂದು ರಾಕೇಶ್ ಸಿಂಗ್ ತಿಳಿಸಿದರು.

ಪಾಲಿಕೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯಗಳಿಂದ ಬಾಕಿ ಇರುವ ಆಸ್ತಿ ತೆರಿಗೆಗಳನ್ನು ಗ್ರಂಥಾಲಯ ಸೆಸ್ ನೊಂದಿಗೆ ಮರು ಹೊಂದಾಣಿಕೆ ಮಾಡಿಕೊಳ್ಳಬೇಕು ಮತ್ತು ವಾರ್ಡ್ ಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ಸೂಕ್ತ ಜಾಗಗಳಲ್ಲಿ ಸುಸಜ್ಜಿತವಾದ ಮಾದರಿ ಗ್ರಂಥಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಕೇಶ್ ಸಿಂಗ್ ಅವರು ತಿಳಿಸಿದರು.

ಈ ಮಹತ್ವದ ಸಭೆಯಲ್ಲಿ ಪಾಲಿಕೆಯ 5 ವಲಯಗಳ ಗ್ರಂಥಾಲಯ ನಿರ್ದೇಶಕರು ಮತ್ತು ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರುಗಳು ಭಾಗವಹಿಸಿದ್ದರು.

ಹಿಂದಿನ ಲೇಖನಗೊಂದಲದ ಗೂಡಾಗಿರುವ ನಾಲ್ಕು ಇಲಾಖೆಗಳಲ್ಲಿನ ಎಂಜಿನಿಯರ್ ಗಳ ಬಡ್ತಿ ವಿಚಾರ
ಮುಂದಿನ ಲೇಖನಪಶ್ಚಿಮ ಬಂಗಾಳ: ವಿಧಾನಸಭೆಯಲ್ಲಿ ಅಶಿಸ್ತಿನಿಂದ ವರ್ತಿಸಿದ ಬಿಜೆಪಿ ಶಾಸಕರ ಅಮಾನತು