ಮನೆ ಯೋಗಾಸನ ಶಿರಸಾಸನ ಸರ್ವಾಂಗಾಸನ ಮತ್ತು ಶವಾಸನಗಳು

ಶಿರಸಾಸನ ಸರ್ವಾಂಗಾಸನ ಮತ್ತು ಶವಾಸನಗಳು

0

1.ಶಿರಸಾಸನ: ಇದು ಕೂಡ ಅತ್ಯಂತ ಮಹತ್ವದ ಆಸನ ಮತ್ತು ಇನ್ನಷ್ಟು ಸರಿಯಾಗಿ ಹೇಳಬೇಕೆಂದರೆ ಇದು ಆಸನಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು. ಇದಕ್ಕೆ “ಆಸನಗಳ ರಾಜ” ಎಂದು ಹೇಳುತ್ತಾರೆ. ಇದರ ಪ್ರಯೋಜನಗಳು ಅಷ್ಟೇ ಅದ್ಭುತವಾಗಿವೆ ಎರಡು ಕೈಗಳ ಬೆರಳುಗಳನ್ನು ಪರಸ್ಪರ ಸೇರಿಸಿ, (ಗಟ್ಟಿಯಾಗಿ ಹಿಡಿದುಕೊಂಡು) ಮೊಳಕೈಗಳ ಸಹಿತ ಮೃದುವಾದ ನೆಲದ ಹಾಸಿನ ಮೇಲೆ ಇರಿಸಿ ಕಾಲುಗಳನ್ನು ಮಡಚುತ್ತಾ ಪಾದಗಳನ್ನು ಹತ್ತಿರ ತಂದು ಬಾಗುತ್ತ ತಲೆಯ ಅಗ್ರ ಭಾಗಕ್ಕೆ ಕೈಗಳನ್ನು ಆಧಾರವಾಗಿ ಇರಿಸಿಕೊಂಡು ನೆತ್ತಿಯನ್ನು ನೆಲಕ್ಕೆ ಹೋರಿ ಬಾಗುತ್ತ ತಟ್ಟನೆ ಆದರೆ ನಾಜೂಕಾಗಿ ನೂಕಿ ಅಥವಾ ಮೆಲ್ಲನೆ ಕೊಟ್ಟು ನಿಧಾನವಾಗಿ ತಲೆಕೆಳಗಾಗಿ ನಿಂತುಕೊಳ್ಳಬೇಕು…..

ಆಗ ಉಸಿರಾಟ ಸಹಜವಾಗಿರಲಿ ಮತ್ತು ಶರೀರದ ಭಾರವನ್ನು ಕುತ್ತಿಗೆ ಮತ್ತು ಮೊಣ ಕೈಗಳ ಮೇಲೆ ಸಮತೋಲನ ಮಾಡುತ್ತಾ ಮಂಡಿಗಳ ಮಡಚುತ್ತ ಕಾಲುಗಳ ನಿಧಾನವಾಗಿ ನೆಲದಿಂದ ಮೇಲೆ ಸಮಾನಾಂತರವಾಗಿ ನಂತರ ನೇರವಾಗಿ ಮೇಲಕ್ಕೆ ತರಬೇಕು ಹಾಗೆ ಮುಂದುವರಿಸುತ್ತಾ ಮಡಚಿದ ಮಂಡಿಗಳನ್ನು ಕ್ರಮಶಾಹ ಒಂದಾದ ಮೇಲೆ ಮತ್ತೊಂದು ಮೇಲೆತ್ತುವ ಪ್ರಯತ್ನ ಮಾಡಬೇಕು. ಈ ಕ್ರಿಯೆಯನ್ನು ಪ್ರಾರಂಭದಲ್ಲಿ ಮಾಡದೇ ನಿಧಾನವಾಗಿ ಮೆಲ್ಲ ಮೆಲ್ಲನೆ ಕಾಲುಗಳನ್ನು ಭೂಮಿಗೆ ಲಂಬವಾಗಿ ನೇರವಾಗಿ ಜೆರ್ಕ್ (jerk) ಕೊಟ್ಟು ಎತ್ತಿಕೊಳ್ಳುವ ಮೇಲೆ ಆಕೃತಿ-(ಬ) ದಲ್ಲಿರುವಂತೆ ಇಸಿಕೊಳ್ಳಬೇಕು. ಮೊದ ಮೊದಲಿಗೆ ಸ್ವಲ್ಪ ಮುಂದಕ್ಕೆ ಭಾಗಿಸಿ ಹೇಳಬೇಕು ಇಲ್ಲವಾದರೆ ಹಿಂದಕ್ಕೆ ಬೀಳುವ ಭಯವಿರುತ್ತದೆ ಕಣ್ಣುಗಳು ಮುಚ್ಚಿರಲಿ. ಈ ಸ್ಥಿತಿಯಲ್ಲಿ ಪ್ರಾರಂಭದಲ್ಲಿ ಸುಮಾರು 15-20 ಸೆಕೆಂಡುಗಳು ಇದ್ದು ನಿಧಾನವಾಗಿ ಸಮಯವನ್ನು ಹೆಚ್ಚಿಸುತ್ತಾ ಹೋಗಬೇಕು.

ಸಾಧಾರಣವಾಗಿ ಉತ್ತಮ ಆರೋಗ್ಯಕ್ಕಾಗಿ 4-5 ನಿಮಿಷಗಳ ಕಾಲ ಸಾಧಿಸಿದ್ದರು. ಸಾಕು ಮುಂದುವರಿದ ಕೆಲವು ಸಾಧಕರು ಅರ್ಧ ಗಂಟೆಯವರೆಗೂ ಇದನ್ನು ಮಾಡುತ್ತಾರೆ.

ವಿಶೇಷ ಸೂಚನೆ : ಆಸನ ಮಾಡಿದ ತಕ್ಷಣ ಅಷ್ಟೇ ಸಮಯದ ವರೆಗಿನ ಶವಾಸನ ಕಡ್ಡಾಯ ಮತ್ತು ಈ ಶವಾಸನ ಸ್ವತಃ ಪ್ರಯತ್ನಿಸುವುದಕ್ಕಿಂತ ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಪ್ರಾರಂಭಿಸುವುದು 18 ವರ್ಷ ವಯಸ್ಸಿನ ಮಕ್ಕಳಿಗೆ ಇದನ್ನು ಕಲಿಸಿ ಪ್ರತಿದಿನ ಅಭ್ಯಾಸ ಮಾಡಿಸಿದರೆ ರೂಢಿ ಆಗುವರೆಗೆ ಹಿರಿಯರ ಮಾರ್ಗದರ್ಶನದಲ್ಲಿ ಮಾಡಿಸಬೇಕು ಅವರ ಸರ್ವೋತೋಮುಖ ಏಳಿಗೆ ಯಾಗುತ್ತದೆ. ಈ ಆಸನದ ನಿಯಮಿತ ಅಭ್ಯಾಸದಿಂದ ಮೆದುಳಿಗೆ ರಕ್ತ ಸಂಚಾರ ಸರಿಯಾಗಿ ಆಗುವುದಲ್ಲದೆ, ವಿಶೇಷ ಮೆದುಳಿನ ಬೆಳವಣಿಗೆ ತನ್ಮೂಲಕ ಬುದ್ಧಿಶಕ್ತಿ ಅಪರಿಮಿತ ವಿಕಾಸ ನೆನಪಿನ ಶಕ್ತಿಯ ಬೆಳವಣಿಗೆಗಾಗಿ ಏಕಾಗ್ರತೆಯಲ್ಲಿ ಅದ್ವಿತೀಯ ಸಾಧನೆ ಮತ್ತು ಮುಖ ತೇಜಪುಂಜ ಜೊತೆಗೆ ಕಣ್ಣಿನ ಆರೋಗ್ಯವಂತ ಅದ್ಭುತವಾಗುತ್ತದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು ಇದನ್ನ ಆಸನಗಳ ರಾಜನೆಂದು ಕರೆದಿದ್ದಾರೆ.

ಪ್ರಯೋಜನಗಳು :- ಒಟ್ಟಿನಲ್ಲಿ ಮೆದುಳಿಗೆ ಶುದ್ಧ ರಕ್ತದ ಪೂರೈಕೆ ಅದರಿಂದ ಕಣ್ಣು, ಕಿವಿ, ಮೂಗುಗಳಿಗೆ ಆರೋಗ್ಯ ಮೆದುಳಿನಲ್ಲಿರುವ ಫಿನಿಶಿಯಲ್ ಮತ್ತು ಕ್ಯೂಟರಿ ಗ್ರಂಥಿಗಳು, ಸ್ವಸ್ಥ ತನ್ಮೂಲಕ ಮೆದುಳು ಮತ್ತು ಇಡಿ ಶರೀರದ ಕಾರ್ಯಕ್ಷಮತೆ ಸಕ್ರಿಯವಾಗುತ್ತದೆ. ಸ್ಮೃತಿ ಮೇದ ಮತ್ತು ಧಾರಣ ಶಕ್ತಿಗಳ ವಿಕಾಸ. ಥೈರಾಯಿಡ್ ಗ್ರಂಥಿಗಳು ಸಶಕ್ತವಾಗಿ ಅದರಿಂದ ನಿಶಕ್ತಿ ಮತ್ತು ಸ್ಥೂಲತೆ ನಿವಾರಣೆ, ಸ್ವಪ್ನ ದೋಷ, ಪ್ರಮೇಹ, ನಪುಂಸಕತೆ, ಬಂಜೆತನ, ದಾತು ವಿಕಾರಗಳು, ನಷ್ಟವಾಗುತ್ತದೆ. ಓಜೋ ತೇಜಸ್ಸು ವೃದ್ಧಿ ಹೊಂದುತ್ತದೆ ಹಿಸ್ಟೀರಿಯಾ ಹಾರ್ನಿಯಾ ಮಲಬದ್ಧತೆ ಮೈಗ್ರೇನ್ ತಲೆನೋವು ಮುಂತಾದ ರೋಗಗಳು ದೂರವಾಗುತ್ತದೆ.

ಮಹತ್ವದ ಎಚ್ಚರಿಕೆ :- ಕಿವಿ ಸೋರುವಿಕೆ, ಕಿವಿ ನೋವು, ದೃಷ್ಟಿ ದೋಷ, ಹೃದಯ ರೋಗ ಹೈಪೋಟೆನ್ಸಿ ಮತ್ತು ಸಂತಾನೋ ಇರುವವರಿಗೆ ಇದು ನಿಶಿದ್ಧ ಮತ್ತು ನೆಗಡಿ ಮತ್ತು ಶೀತ ಆಗಿರುವವರು ಶಿರಸಾಸನ ಮಾಡಕೂಡದು.

2.  ಸರ್ವಾಂಗಸನ : ಇದು ಕೂಡ ಇನ್ನೊಂದು ಮಹತ್ವದ ಆಸನ ಇದನ್ನು ಆಸನಗಳ ತಾಯಿ ಎಂದು ಹೇಳುತ್ತಾರೆ. ತುಂಬಾ ಉಪಯುಕ್ತವಾದ ಮತ್ತು ಸ್ವಲ್ಪ ಪ್ರಯತ್ನಿಸಿದರೆ ಮಾಡಲು ಸುಲಭ ಮತ್ತು ಸರಳವಾದ ಎಲ್ಲರೂ ಇದನ್ನು ಮಾಡಬಹುದು. ಅಂಗಾತ ಮಳೆಗೆ ಕೊಂದು ಎರಡು ಬದಿಗಳಲ್ಲಿ ಅಂಗೈಮೇಲೆ ಮಾಡಿ ಕೈಗಳನ್ನು ಸೊಂಟದ ಹತ್ತಿರ ನೇರವಾಗಿ ಚಾಚಿ ಪಾದಗಳನ್ನು ಜೋಡಿಸಿ ಕಾಲುಗಳು ಮುಂದೆ ಮಡಚುತ್ತಾ ಉಸಿರನ್ನು ಒಳಗೆ ಎಳೆದುಕೊಳ್ಳುತ ಮೆಲ್ಲಗೆ ಮೇಲಕ್ಕೆ ಎತುತ್ತ 90 ಡಿಗ್ರಿವರೆಗೆ ಅಂದರೆ ಭೂಮಿಯು ಲಂಬವಾಗಿ ನಿಲ್ಲಬೇಕು ಎತ್ತುವಾಗ ಕೈಗಳನ್ನು ಆಸರೆಯಾಗಿ ಬಳಸುತ್ತಾ, ಬೆನ್ನ ಹಿಂದೆ ಮೊಣ ಕೈಉರಿ, ಬೆನ್ನು ಆಸರೆ ಮಾಡಿ ಹಿಡಿದುಕೊಂಡಿರಬೇಕು 90 ಡಿಗ್ರಿಗೆ ಆಗದಿದ್ದರೆ 120° ಗೆ ವೈಯಬಹುದು.

ಕಾಲುಗಳು ನೇರವಾಗಿ ಇರಲು ಕಣ್ಣು ಮುಚ್ಚಿಡಲಿ ಅಥವಾ ಕಾಲು ಹೆಬ್ಬೆರಳು ಮೇಲೆ ದೃಷ್ಟಿ ನಿಟ್ಟಿರಲಿ ಇದೇ ಸ್ಥಿತಿಯಲ್ಲಿ ನಿಧಾನವಾಗಿ ಉಸಿರಾಡುತ್ತ ಕನಿಷ್ಠ ಎರಡು ನಿಮಿಷಗಳಿಂದ ಪ್ರಾರಂಭಿಸಿ ನಿಮಗೆ ಸಾಧ್ಯವಾದಷ್ಟು ಹೊತ್ತು ಇದ್ದು (ಸಾಮಾನ್ಯವಾಗಿ 4, 5 ನಿಮಿಷಗಳ ಕಾಲ ಸಾಕು) ಅದೇ ಕ್ರಮದಲ್ಲಿ ವಾಪಸ್ ಆಗಬೇಕು.

 ವಿ , ಸೂ. :- ಇದಕ್ಕೂ ಅಷ್ಟೇ ಈ ಆಸನ ಮಾಡಿದ ತಕ್ಷಣ ಅಷ್ಟೇ ಸಮಯದವರೆಗಿನ ಶವಾಸನ ಕಡ್ಡಾಯ.

ಪ್ರಯೋಜನಗಳು : ಥೈರಾಯ್ಢ್ ಸಕ್ರಿಯ ಮತ್ತು ಸ್ವಸ್ಥ ಆದ್ದರಿಂದ ಸ್ತೂಲತೆ ದೌರ್ಬಲ್ಯ ಸೊಂಟದ ವೃದ್ದಿಗಳು ಕಡಿಮೆಯಾಗುತ್ತವೆ. ಉಬ್ಬಸ ರೋಗಕ್ಕೆ ಉತ್ತಮ. ಆಯಾಸ ದೂರ, ಪಿಟ್ಯುಟರಿ, ಅಡ್ರಿನಲ್, ಶುಕ್ರಗ್ರಂಥಿಗಳು ಶಶಕ್ತವಾಗುತ್ತವೆ. ಉಳಿದೆಲ್ಲ ಪ್ರಯೋಜನಗಳು ಶೀರ್ಷಾ ಸನದಂತರಯೆ. (ಇದು ಶೀರ್ಷಾಸನಕ್ಕೆ ಪರ್ಯಾಯ ವೆನ್ನಬಹುದು) ವಿಶೇಷವೆಂದರೆ ಶೀರ್ಷಾಸನ ಮಾಡಲು ನಿಷಿದ್ಧ ವಿದ್ದವರು ಮತ್ತು ಸಾಧ್ಯವಾಗದಿದ್ದರೂ ಇದನ್ನು ಮಾಡಬಹುದು ಥೈರಾಯ್ಡ್ ಮತ್ತು ಪಿಟ್ಯುಟರಿ ಗ್ರಂಥಿಗಳು ಕ್ರಿಯಾಶೀಲವಾಗುವುದರಿಂದ ಮಕ್ಕಳಿಗೆ ಎತ್ತರ ಬೆಳೆಯಲು ವಿಶೇಷವಾಗಿ ಪ್ರಯೋಜನಕಾರಿ ಮಲಬದ್ಧತೆಯ. ಮೂಲವ್ಯಾಧಿ. ತಲೆನೋವು ವಾಸಿಯಾಗುತ್ತದೆ ಮತ್ತು ವೀರ್ಯ ವೃದ್ಧಿಯಾಗುತ್ತದೆ. ಯೌವನ, ಗರ್ಭಶಯ ಮತ್ತು ಮುಟ್ಟು ದೋಷದ ತೊಂದರೆಗಳು ದೂರವಾಗುತ್ತವೆ.

 3. ಯೋಗ ನಿದ್ರಾ ಅಥವಾ ಶವಾಸನ : (ಮನಸ್ಸಿನ ಪಯಣ /ಅದ್ಭುತ ವಿಶ್ರಾಂತಿಯ ಸ್ಥಿತಿ) ಆಸನಗಳಲ್ಲೆಲ್ಲಾ ಪ್ರವಾಸನ ಕಷ್ಟದ್ದು ಎಂದರೆ ನಿಮಗೆಲ್ಲ ಆಶ್ಚರ್ಯವಾಗಬಹುದು ಆದರೆ ಇದು ಸತ್ಯ ಇದು ತುಂಬಾ ಚೆತೋಹಾರಿ ಮತ್ತು ಅಷ್ಟೇ ಪ್ರಯೋಜನಕಾರಿ ಆಸನವಾಗಿದೆ. ಪ್ರತಿ ಸಲ ಹಲವು ವಿಶಿಷ್ಟ ಆಸನಗಳನ್ನು ಮಾಡಿದಾಗಲೆಲ್ಲ ಶವಾಸನವನ್ನು ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಕೆಲ ಸಮಯ ಅಥವಾ ಕೆಲ ನಿಮಿಷಗಳವರೆಗೆ ಶವದಂತೆ ಹೇಗೋ ವಿಶ್ರಮಿಸುವುದು ಸುಲಭವೆನಿಸಿದರು ಶರೀರವನ್ನು ಅಲ್ಲಾಡಿಸದೆ ಬುದ್ದಿ ಮತ್ತು ಚಿತ್ರವನ್ನು ವಿಚಲಿತಗೊಳಿಸದೆ ಬಹಳಷ್ಟು ಸಮಯ ಇರುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಹೆಚ್ಚಿನ ಪರಿಶ್ರಮ ಕಠಿಣ ಸಾಧನೆ ಶಿಕ್ಷಣ ಅಥವಾ ತರಬೇತಿ ಮತ್ತು ಅಭ್ಯಾಸ ಅತ್ಯವಶ್ಯಕವಾಗಿವೆ. ಇದನ್ನು ಆರಂಭದಲ್ಲಿಯೇ ಹೆಚ್ಚು ಹೊತ್ತು ಮಾಡುವುದು ಮೆದುಳಿಗೆ ತ್ರಾಸದಾಯಕ ದೇಹ ಹಾಗು ಮನಸ್ಸುಗಳು ಹಸನುಗೊಂಡು. ಮನಸು ಪ್ರಪುಲಿತವಾಗಿ ಮೆದುಳು ನಿರಾತಂಕವಾಗಿ ಸಾಧಕನು “ಸಮಹಿತ ಚಿತ್ತ”ದ ಅಂದರೆ ಮನ, ಬುದ್ಧಿ,ಆತ್ಮಗಳ ಏಕತೆ ಅನುಭವವನ್ನು ಪಡೆಯಲು ಕ್ಷಣ ದೇಹ ಉಸಿರು ಮನಸ್ಸು ಬುದ್ಧಿಗಳು ಒಗ್ಗೂಡಿನಿಂತು ಆತ್ಮನ ಆಜ್ಞೆಗೆ ತಲೆಬಾಗುತ್ತಿರುವಾಗಲೇ, ಶವಾಸನದ ಸಿದ್ದಿ ಚಿತ್ತವು ಅಂದರೆ ಮನಸ್ಸು ಬುದ್ಧಿ ಅಹಂಕಾರಗಳು ಸೇರಿ ಅಹಂಕಾರ ಅಂದರೆ ಯಾವುದು ನನಗೆಲ್ಲವೂ ಗೊತ್ತು ಎನ್ನುತ್ತದೋ ಅದು ಆಗ ಸಮೇತ ಚಿತ್ತವಾಗುತ್ತದೆ ಅಂದರೆ ಆ ಸ್ಥಿತಿಯಲ್ಲಿ ಅವೆಲ್ಲವೂ ಸಮಾನಥಿತಿಯಲ್ಲಿ ಇರುತ್ತವೆ. ಇದನ್ನೇ “ಸ್ಥಿರ ಸ್ಥಿತಿ” ಎನ್ನುತ್ತಾರೆ

ಸೆಳೆತಗಳಿಂದ ಮುಕ್ತಿ (ಒಂದೊಂದಾಗಿ ದೇಹದ ಎಲ್ಲಾ ಅಂಗಾಂಗಗಳ ಮೇಲಿನ ನಿಯಂತ್ರಣವನ್ನು ಸಲ್ಲಿಸುತ್ತಾ ವಿಶ್ರಾಮಿಸುವುದು) ಸಂಪೂರ್ಣ ವಿಶ್ರಾಂತಿಯ ಸ್ಥಿತಿ, ಶಾಂತ ಸ್ಥಿತಿ, ನಿರ್ಮಲ ಸ್ಥಿತಿ, ಸ್ವಾಭಾವಿಕ ಪೂರಕಗಳು, ಶಾಂತ ದೀರ್ಘ ರೇಚಕಗಳು, ದೇಹ ಮೆದುಳಿನ ಕೆಲಸಗಳು ‘ ಮತ್ತು ಒತ್ತಡಗಳನ್ನೆಲ್ಲ ಕಿತ್ತುಬಿಸಿಟ್ಟು ಸಾಧಕನು ತನ್ನ ಸರ್ವಸ್ವವನ್ನು ಸೃಷ್ಟಿಕರ್ತನಿಗೆ ಸಮರ್ಪಿಸುವುದರ ಸಂಕೇತವೇ ರೇಚಕ ಕ್ರಿಯೆ ಒಂದು ಅರ್ಥದಲ್ಲಿ ಇದನ್ನು ಧ್ಯಾನದ ಇನ್ನೊಂದು ರೂಪವೆಲ್ಲಬಹುದು ವಿಶೇಷವಾಗಿ ನರ ರೋಗ ಪೀಡಿತರು ಮತ್ತು ಧೈರ್ಯ ಹೀನರು ಹೂಗಳ ಮಧ್ಯೆ ದೃಷ್ಟಿ ನಿಟ್ಟು (ತ್ರಾಟಕ ಮಾಡುತ್ತಾ) ಕಣ್ಣು ಮುಚ್ಚಿ ಒಳಗೆ ದೃಷ್ಟಿಹರಿಸುತ್ತಾ ಇದು ಸಂಪೂರ್ಣ ವಿಶ್ರಾಂತಿಯ ಸಂಪೂರ್ಣ ಜಾಗೃತ ಸ್ಥಿತಿ ವಿಶೇಷವಾಗಿ ರೋಗಿಗಳು ಮತ್ತು ವಯೋವೃದ್ಧರು ಈ ಆಸನವನ್ನು ತಪ್ಪದೆ ಮಾಡಬೇಕು. ಇದು ಅತ್ಯಂತ ಉಪಯುಕ್ತವಾದ ಆಸನವಾಗಿದೆ ಇದನ್ನು ಎಷ್ಟು ಸಲ, ಎಷ್ಟು ಹೊತ್ತು, ಮಾಡಿದರೂ ಸರಿಯೇ ಸಾಧನೆ ಮಾಡಿದಷ್ಟು ಒಳ್ಳೆಯದೇ ಅದರಲ್ಲೂ ಹೃದಯದ ಸಮಸ್ಯೆಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಪರಿಣಾಮಗಳು : ಶಕ್ತಿ ಸಂಚಯ, ದೇಹ ಹಗುರ, ಮರಣಭಯ ದೂರ, ಪ್ರಶಾಂತತೆ, ಅಂತರ್ಯದ ಐಕ್ಯತೆಯ ಅನುಭವ, ಸಂಪೂರ್ಣ ವಿಶ್ರಾಂತಿ, ಸರಿಯಾಗಿ 5 ನಿಮಿಷ ಮಾಡಿದರೆ ಅದು ಒಂದು ಗಂಟೆ ನಿದ್ರೆಗೆ ಸಮ ಅಂತಲೂ ಹೇಳುತ್ತಾರೆ ವಿಧಾನ ಈ ಕೆಳಗೆ ತೋರಿಸಿದಂತೆ ದೇಹದ ಎಲ್ಲಾ ಅಂಗಾಂಗಗಳನ್ನು ಸಂಪೂರ್ಣವಾಗಿ ಸಡಿಲಬಿಟ್ಟು, ಕಣ್ಣು ಮುಚ್ಚಿ, ಅಂಗಾಂತ ಮಲಗಿಕೊಳ್ಳಬೇಕು ಮತ್ತು ಈ ಮುಂದೆ ವಿವರಿಸಿದಂತೆ ಮೌನವಾಗಿ ಅಂದರೆ ಮನಸ್ಸು ಬುದ್ಧಿ ಮತ್ತು ದೇಹಗಳನ್ನು ಮೌನಗೊಳಿಸುತ್ತಾ ಆರ್ಥಾತ್ ಜ್ಞಾನ ಮಾಡುತ್ತಾ ಇದನ್ನು ಆಚರಿಸಬೇಕು,

 ಈಗ ಅಂಗಾಲುಗಳನ್ನು ಗಮನಿಸುತ್ತಾ, ಅವುಗಳನ್ನು ಪೂರ್ತಿಯಾಗಿ ಭೂಮಿಗೆ ಸಡಿಲು ಬಿಡೋಣ, ಇಮ್ಮಡಿ, ಕಣಕಾಲು ಮತ್ತು ಮೀನಗಂಡಡಗಳನ್ನು ಗಮನಿಸುತ್ತಾ ಅವುಗಳನ್ನು ಪೂರ್ತಿಯಾಗಿ ಭೂಮಿಗೆ ಸಡಿಲಬಿಡೋಣ ಮೊಣಕಾಲು ತೊಡೆಗಳನ್ನು ಗಮನಿಸುತ್ತಾ ಅವುಗಳನ್ನು ಪೂರ್ತಿಯಾಗಿ ಭೂಮಿಗೆ ಸಡಿಲಬಿಡೋಣ ಈಗ ಸ್ವಂತ ಮತ್ತು ಅಲ್ಲಿರುವ ಅಂಗಾಂಗಗಳನ್ನು ಗಮನಿಸುತ್ತಾ ಅವುಗಳನ್ನು ಪೂರ್ತಿಯಾಗಿ ಭೂಮಿಗೆ ಸೇರಿದ ಬಿಡೋಣ ಹಾಗೆಯೇ ನಮ್ಮ ಗಮನ ಮೇಲೆ ಸರಿಯುತ್ತಾ ಕಿಬ್ಬುಹೊಟ್ಟೆ, ಹೊಟ್ಟೆ, ನಾಭಿ, ವಪೆ ಮತ್ತು ಅಲ್ಲಿರುವ ಎಲ್ಲಾ ಅಂಗಾಂಗಗಳನ್ನು ಗಮನಿಸುತ್ತ ಅವುಗಳನ್ನು ಪೂರ್ತಿಯಾಗಿ ಭೂಮಿಗೆ ಸಡಿಲು ಬಿಡೋಣ ಈಗ ಮತ್ತೆ ಗಮನ ಮೇಲೆ ಸರಿಯುತ್ತಾ ಕ್ರಮವಾಗಿ ಶ್ವಾಸಕೋಶಗಳನ್ನು ಹೃದಯ ಎದೆ ಗಂಟಲು ಮತ್ತು ಕುತ್ತಿಗೆಗಳ ಮೇಲೆ ಬರಲಿ ಅವುಗಳನ್ನು ಗಮನಿಸುತ್ತಾ ಪೂರ್ತಿಯಾಗಿ ಭೂಮಿಗೆ ಸದಿಲು ಬಿಡೋಣ ಹಾಗೆ ಎರಡು ಭುಜಗಳು ರಟ್ಟೆಗಳು ಮೊಣಕೈ, ಮುಂಗೈ, ಅಂಗೈ ಮತ್ತು ಬೆರಳುಗಳನ್ನು ಗಮನಿಸುತ್ತಾ ಅವುಗಳನ್ನು ಪೂರ್ತಿಯಾಗಿ ಭೂಮಿಗೆ ಸಡಿಲುಬಿಡೋಣ. ಮೇಲೆ ಸರಿಯುತ್ತಾ ನಮ್ಮಗಮನ ಮುಖದ ಮೇಲೆ ಬರಲಿ ಗದ್ದ, ಬಾಯಿ, ಮೂಗು, ಹಣೆ, ಉಬ್ಬು, ಕಪೋಲ, ಕಿವಿಗಳು, ಕಣ್ಣುಗಳು ಇತ್ಯಾದಿ ಎಲ್ಲಾ ಅಂಗಗಳನ್ನು ಗಮನಿಸುತ್ತಾ ಅವುಗಳನ್ನು ಪೂರ್ತಿಯಾಗಿ ಭೂಮಿಗೆ ಸಡಿಲ ಬಿಡೋಣ ಹಾಗೆ ಗಮನ ತಲೆಯ ಭಾಗಕ್ಕೆ ಬರಲಿ ಮೆದುಳು ಸಮೇತವಾಗಿ ತಲೆ ಎಲ್ಲಾ ಭಾಗಗಳನ್ನು ಒಮ್ಮೆ ಗಮನಿಸಿ ತಲೆಯ ಮುಂಭಾಗ, ಹಿಂಭಾಗ, ಬಲಭಾಗ, ಎಡ ಭಾಗ ಮತ್ತು ತಲೆಯ ಮೇಲಿನ ಕೇಂದ್ರ ಭಾಗಗಳನ್ನು ಒಂದೊಂದಾಗಿ ಗಮನಿಸುತ್ತಾ ಅವುಗಳನ್ನು ಪೂರ್ತಿಯಾಗಿ ಭೂಮಿಗೆ ಸೇರಿಸಲು ಬಿಡೋಣ ಉಸಿರಾಟ ತನ್ನ ಪಾಡಿಗೆ ತಾನು ನಡೆಯುತ್ತಿರಲಿ ಅದರ ಮೇಲೆ ನಿಮ್ಮ ನಿಯಂತ್ರಣವಿಲ್ಲದಿರಲಿ ಈಗ ನೀವು ವಿಶ್ರಾಂತ ಸ್ಥಿತಿಯಲ್ಲಿರುವ ನಿಮ್ಮ ದೇಹವನ್ನು ಮೇಲಿನಿಂದ ಅಂದರೆ ಕಲ್ಪನೆ ಮಾಡುತ್ತಾ ಅಥವಾ ಭಾವಿಸುತ ಸ್ವಲ್ಪ ಎತ್ತರದಲ್ಲಿ.

ನಿಂತುಕೊಂಡು ಗಮನಿಸಿದರೆ, ಅದೊಂದು ಶವದ ರೀತಿಯಲ್ಲಿ ಭೂಮಿಯ ಮೇಲೆ ಹೊರಡಿಸಿರುವುದು ನಿಮಗೆ ಗೋಚರಿಸುವುದು ಈಗ ಅದನ್ನು ಅದರ ಪಾಡಿಗೆ ಬಿಟ್ಟು ನೀವು ನಿಮ್ಮ ಭಾವನೆ ಅಥವಾ ಕಲ್ಪನೆಯಲ್ಲಿಯೂ ಅಥವಾ ಇನ್ನು ಸರಿಯಾಗಿ ಹೇಳುವುದಾದರೆ ದೃಷ್ಟಿಗೋಚರವಾಗಿ ದೃಗ್ಗೋಚರವಾಗಿ (Visualize ವಿಜುವಲೈಜ್) ಮೇಲಕ್ಕೆ ಹಾರುತ್ತಾ ಆಕಾಶದಲ್ಲಿ ಹಾರುತ್ತಿರುವ ಅಕ್ಕಿ ಪಕ್ಷಿಗಳ ಕಲರವವನ್ನು ಕೇಳಿಸಿಕೊಳ್ಳಬಹುದು ದೂರದಲ್ಲಿ ಅರಿಯುತ್ತಿರುವ ನೀರಿನ ಜುಳು-ಜುಳು ಶಬ್ದವನ್ನು ಆಲಿಸಿ  ಹಕ್ಕಿಗಳೊಂದಿಗೆ ಹಕ್ಕಿಗಳಾಗಿ ನೀವು ಹಾರುತಿರಬಹುದು. ಹಾಗೆಯೇ ಸ್ವಲ್ಪ ಹೊತ್ತು ಇದ್ದು ಈಗ ನಿಮ್ಮ ಎರಡು ಗುಂಪುಗಳ ನಡುವಿನ ಹಣೆಯಲ್ಲಿ ತಿಲಕ ಇಡುವ ಸ್ಥಳ ಅಥವಾ ಭ್ರೂಮಧ್ಯದಲ್ಲಿ ಆಜ್ಙಾಚಕ್ರದ ಮೇಲೆ ಗಮನವರಿಸಿ ಇಷ್ಟ ದೈವವನ್ನು ನೆನೆಯಬಹುದು.

ಒಂದೆರಡು ನಿಮಿಷಗಳ ಕಾಲ ಅದೇ ಸ್ಥಿತಿಯಲ್ಲಿದ್ದು ಮುಕ್ತಾಯಗೊಳಿಸಿ ನಿಧಾನವಾಗಿ ಮೊದಲು ಬೆರಳುಗಳನ್ನು ನಂತರ ಮುಂಗೈಗಳನ್ನು ಅಲ್ಲಾಡಿಸುತ್ತಾ ಚಲಿಸಿ ಆಗಿಯೇ ಎಡಮೊಗ್ಗಲು ಹೊರಳಿ ಬಲಗೈಯನ್ನು ನೆಲಕ್ಕೆ ಉರುತ ನಿಧಾನವಾಗಿ ಎದ್ದು ಕುಳಿತುಕೊಳ್ಳಿ ಇದುವೇ ಸುಮಾರು 5 ನಿಮಿಷಗಳ “ಯೋಗ ನಿದ್ರೆ” ಅಥವಾ “ಮನಸ್ಸಿನ ಪಯಣ” ಅಥವಾ “ಶವಾಸನವಾಗಿದೆ”.

 ವಿ. ಸೂ, :- ಅಭ್ಯಾಸದ ಅವಧಿಯನ್ನು ತುಂಬಾ ನಿಧಾನವಾಗಿ ಮತ್ತು ಅಷ್ಟೇ ಎಚ್ಚರಿಕೆಯಿಂದ ಹೆಚ್ಚಿಸುತ್ತಾ ಹೋಗಬಹುದು.