ಮನೆ ಸುದ್ದಿ ಜಾಲ ಕೀವ್ ನಲ್ಲಿ 900 ಕ್ಕೂ ಅಧಿಕ ನಾಗರಿಕರ ಶವ ಪತ್ತೆ

ಕೀವ್ ನಲ್ಲಿ 900 ಕ್ಕೂ ಅಧಿಕ ನಾಗರಿಕರ ಶವ ಪತ್ತೆ

0

ಕೀವ್‌(Kyiv): ಉಕ್ರೇನ್‌ನ ರಾಜಧಾನಿ ಕೀವ್‌ನ ಆಸುಪಾಸಿನಲ್ಲಿ 900ಕ್ಕೂ ಅಧಿಕ ನಾಗರಿಕರ ಶವಗಳು ಪತ್ತೆ ಯಾಗಿವೆ.

ಕೀವ್‌ನಲ್ಲಿ ರಷ್ಯಾದ ಪಡೆಗಳನ್ನು ಹಿಂಪಡೆದ ಬಳಿಕ ಅಲ್ಲಿನ ಪ್ರಾದಾಶಿಕ ಪೊಲೀಸ್‌ ಪಡೆ ಕಾರ್ಯಾಚರಣೆ ನಡೆಸುತ್ತಿದ್ದು, ಬಹುತೇಕ ಶವಗಳ ಮೇಲೆ ಗುಂಡಿನೇಟಿನ ಗುರುತುಗಳಿವೆ. ಮಾಹಿತಿ ಪ್ರಕಾರ, ಶೇ 95ರಷ್ಟು ಮಂದಿ ಗುಂಡಿನೇಟಿನಿಂದಲೇ ಸತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ರಷ್ಯಾದ ಸೇನೆಯು ಅತಿಕ್ರಮಣದ ಅವಧಿಯಲ್ಲಿ ಜನರನ್ನು ಸಹಜವಾಗಿ ಹತ್ಯೆ ಮಾಡಲಾಗಿದೆ ಎಂಬಂತೆ ಕಾಣಿಸುತ್ತಿದೆ. ನಿತ್ಯ ಹೆಚ್ಚು ಶವಗಳು ಪತ್ತೆಯಾಗುತ್ತಿವೆ. ಬುಕಾದಲ್ಲಿ ಹೆಚ್ಚಿನ ಶವಗಳು ಕಂಡುಬಂದಿವೆ ಎಂದು ತಿಳಿಸಿದರು.

ಉಕ್ರೇನ್‌ ನಗರ ಕ್ರಾಮಟೋಸ್ಕ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸುಮಾರು ಏಳು ಮಂದಿ ಮೃತ ಪಟ್ಟಿದ್ದಾರೆ. ವಿವರ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದ ಸೇನೆಯ ದಾಳಿಯಿಂದ ಶುಕ್ರವಾರ ಐವರು ಮೃತ ಪಟ್ಟಿದ್ದಾರೆ. ರಷ್ಯಾ ಪಡೆಗಳು ಉಕ್ರೇನ್‌ ನಾಶಪಡಿಸುವ ಗುರಿ ಹೊಂದಿವೆ. ಡೊನ್‌ಬಾಸ್ ರಷ್ಯಾದ ಮುಖ್ಯ ಗುರಿಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಆರೋಪಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿದ್ದು, ಪೂರ್ವದ ಲುಗಾನ್ಸ್ಕ್‌ ವಲಯದಲ್ಲಿ ಇಬ್ಬರು , ಡೊನೆಟ್ಸ್ಕ್ ವಲಯದಲ್ಲಿ ಮೂವರು ಮೃತಪಟ್ಟಿದ್ದಾರೆ. ಡೊನೆಟ್ಸ್‌ ವಲಯದಲ್ಲಿ ಸಂಘರ್ಷ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ, ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್ ಮೇಲೆ ಕ್ಷಿಪಣಿ ದಾಳಿಯನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ. ರಷ್ಯಾದ ಗಡಿಯನ್ನು ಉಕ್ರೇನ್ ಪಡೆಗಳು ಅತಿಕ್ರಮಿಸುತ್ತಿವೆ. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಲಿದ್ದೇವೆ ಎಂದು ಹೇಳಿದೆ.