ಮನೆ ರಾಜಕೀಯ ಪಂಜಾಬ್ ನಲ್ಲಿ ಗೃಹ ಬಳಕೆಗೆ 300 ಯೂನಿಟ್  ಉಚಿತ ವಿದ್ಯುತ್

ಪಂಜಾಬ್ ನಲ್ಲಿ ಗೃಹ ಬಳಕೆಗೆ 300 ಯೂನಿಟ್  ಉಚಿತ ವಿದ್ಯುತ್

0

ನವದೆಹಲಿ(New Delhi): ಆಮ್ ಆದ್ಮಿ ಪಕ್ಷದ ಆಶ್ವಾಸನೆ ನೀಡಿದಂತೆ ಜುಲೈ 1 ರಿಂದ ಪಂಜಾಬ್ ನಲ್ಲಿ ಗೃಹಬಳಕೆಗೆ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಘೋಷಿಸಿದೆ.

ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದು 30 ದಿನ ಪೂರೈಸಿರುವ ಭಗವಂತ ಮಾನ್‌ ನೇತೃತ್ವದ ಎಎಪಿ ಸರ್ಕಾರ ಇಂದು ಮಹತ್ವದ ಘೋಷಣೆ ಮಾಡಿದೆ.ಚುನಾವಣೆಯಲ್ಲಿ ಎಎಪಿ ನೀಡಿದ್ದ ಪ್ರಮುಖ ಆಶ್ವಾಸನೆಗಳಲ್ಲಿ ಉಚಿತ ವಿದ್ಯುತ್‌ ಕೂಡ ಒಂದಾಗಿತ್ತು.

ಬಹುತೇಕ ಎಲ್ಲಾ ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲಿ ಎಎಪಿ ಸರ್ಕಾರ ಜಾಹೀರಾತು ನೀಡಿದ್ದು, ಉಚಿತ ವಿದ್ಯುತ್ ಘೋಷಿಸಲಾಗಿದೆ.  ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನೂ ಜಾಹೀರಾತಿನಲ್ಲಿ ಎತ್ತಿತೋರಿಸಲಾಗಿದೆ.

ಹಿಂದಿನ ಲೇಖನಹನುಮ ಜಯಂತಿ: ಗಣ್ಯರಿಂದ ಶುಭಾಶಯ
ಮುಂದಿನ ಲೇಖನಕೀವ್ ನಲ್ಲಿ 900 ಕ್ಕೂ ಅಧಿಕ ನಾಗರಿಕರ ಶವ ಪತ್ತೆ