ಮನೆ ರಾಷ್ಟ್ರೀಯ ಚಂದ್ರಯಾನ: ಲ್ಯಾಂಡರ್ ಬೇರ್ಪಡೆ ಯಶಸ್ವಿ

ಚಂದ್ರಯಾನ: ಲ್ಯಾಂಡರ್ ಬೇರ್ಪಡೆ ಯಶಸ್ವಿ

0

Join Our Whatsapp Group

ಬೆಂಗಳೂರು: ದೇಶದ ಪ್ರತಿಷ್ಠಿತ ಚಂದ್ರಯಾನ- 3ರ ಲ್ಯಾಂಡರ್ ಪ್ರತ್ಯೇಕ ಪ್ರಕ್ರಿಯೆ ಯಶಸ್ವಿಯಾಗಿದೆ. ಈ ಮೂಲಕ ಇಸ್ರೋ ಮತ್ತೊಂದು ಮಹತ್ವದ ಘಟ್ಟ ತಲುಪಿದೆ.

ಪೆÇ್ರಪಲ್ಷನ್ ಮಾಡ್ಯೂಲ್ನಿಂದ ಪ್ರತ್ಯೇಕಗೊಂಡ ಲ್ಯಾಂಡರ್ ಚಂದ್ರನ ಅಂತಿಮ ಕಕ್ಷೆ ಪ್ರವೇಶಿಸಿದೆ. ಇದರಿಂದ ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ನಾಳೆ ಸಂಜೆ ವೇಳೆಗೆ ಡೀ ಬೂಸ್ಟಿಂಗ್ ನಡೆಯಲಿದೆ. ಲ್ಯಾಂಡರ್ನ್ನು ಹಂತ ಹಂತವಾಗಿ ಚಂದ್ರನ ಮೇಲ್ಮೈಗೆ ಇಳಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜುಲೈ 14ರಂದು ಚಂದ್ರಯಾನ- 3ನ್ನು ಉಡಾವಣೆ ಮಾಡಲಾಗಿತ್ತು. ಆಗಸ್ಟ್ 5ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಅದಾದ ಬಳಿಕ ಸತತ ಮೂರು ಕಕ್ಷೆ ಪರಿಚಲನೆ ಮೂಲಕ ಚಂದ್ರನ ಮೇಲ್ಮೈಯ ಸನಿಹಕ್ಕೆ ತಲುಪಿದೆ. ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್ ಮೂಲಕ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ಇಸ್ರೋ ಯೋಜಿಸಿದೆ.