ಮನೆ ಯೋಗಾಸನ ಪೂರಕ ರೇಚಕ ಮತ್ತು ಕುಂಭಕಗಳು

ಪೂರಕ ರೇಚಕ ಮತ್ತು ಕುಂಭಕಗಳು

0

Join Our Whatsapp Group

ಪ್ರಾಣಾಯಮದಲ್ಲಿ ಉಸಿರಾಟದ ಕ್ರಿಯೆಯಲ್ಲಿ ಪೂರಕ ರೇಚಕ ಮತ್ತು ಕುಂಭಕಗಳೆಂದು ಮೂರು ವಿಭಾಗಗಳಿವೆ. ಅಲ್ಲದೆ ಮತ್ತೆ ಕುಂಭಕದಲ್ಲಿ ಅಂತರ್ ಕುಂಭಕ ಮತ್ತು ಬಾಹ್ಯ ಕುಂಭಕಗಳೆಂದು ಎರಡು ವಿಭಾಗಗಳಿವೆ. ಅವುಗಳನ್ನು ವಿವರವಾಗಿ ತಿಳಿದುಕೊಳ್ಳೋಣ….

ಉಸಿರನ್ನು ಒಳಗೆ ತೆಗೆದುಕೊಳ್ಳುವುದಕ್ಕೆ “ಪೂರಕ”ವೆಂದು, ಹೊರಗೆ ಬಿಡುವುದಕ್ಕೆ “ರೇಚಕ”

 ವಿವೇಚನಯಿಂದ ಹೇಳುತ್ತಾರೆ ಎಂತಲೂ ಹೆಸರು ಮತ್ತು ಎರಡು ಕ್ರಿಯೆಗಳನ್ನು ಮಾಡದೆ ಹಾಗೆ ಇರುವುದಕ್ಕೆ ಅಂದರೆ ಉಸಿರನ್ನು ತಡೆ ಹಿಡಿಯುವುದಕ್ಕೆ ಕುಂಭಕ ಎನ್ನುತ್ತಾರೆ. ಅದನ್ನೇ ಇನ್ನಷ್ಟು ಬಿಡಿಸಿ ಸ್ಪಷ್ಟವಾಗಿ ವಿವರವಾಗಿ ಹೇಳುವುದಾದರೆ ಉಸಿರನ್ನು ಒಳಗೆ ಇಟ್ಟುಕೊಂಡಿರುವುದಕ್ಕೆ ಅಂತರ್ ಕುಂಭಕ ಎನ್ನುತ್ತಾರೆ. ಮತ್ತು ಆ ಉಸಿರು ಹೊರ ಬಿಟ್ಟು ಸ್ಥಿತಿಯಲ್ಲೇ ಅಂದರೆ ಉಸಿರು ತೆಗೆದುಕೊಳ್ಳದೆ ಇರುವುದಕ್ಕೆ ಬಾಹ್ಯ ಕುಂಭಕ ಎನ್ನುತ್ತಾರೆ. ಅಂತರ ಕುಂಭಕವನ್ನು ಸರಿಯಾಗಿ ಮಾಡುವುದನ್ನು ಸಾಧಿಸಿ ನಂತರವೇ ಬಾಹ್ಯ ಕುಂಭಕವನ್ನು ಪ್ರಾರಂಭಿಸಬೇಕು ಅಲ್ಲಿಯವರೆಗೆ ಅದನ್ನು ಮಾಡುವಂತಿಲ್ಲ.

ಅಂತರ ಕುಟುಂಬಗಳಲ್ಲಿ ಪರಮಾತ್ಮ ಸ್ವರೂಪಿ ಪ್ರಕೃತಿದತ್ತ ಚೈತನ್ಯವನ್ನು ವೈಯಕ್ತಿಕ ಚೈತನ್ಯದೊಡನೆ ಬೆರೆಸಿಕೊಂಡು ತನ್ನೊಳಗೆ ಹಿಡಿದಿಟ್ಟು ಕೊಳ್ಳಬೇಕಾಗುತ್ತದೆ. ಆ ಕ್ಷಣದಲ್ಲಿ ಸರ್ವಶಕ್ತನಾದ ಪರಮಾತ್ಮನು ವೈಯುಕ್ತಿಕ ಆತ್ಮ (ಜೀವಾತ್ಮ)ನೋಡನೇ ಒಗ್ಗೂಡಿರುತ್ತಾನೆ. ಇನ್ನು ಉಸಿರು ರೂಪದಲ್ಲಿ ತನ್ನ ಆತ್ಮವನ್ನೇ ಪರಮಾತ್ಮನಲ್ಲಿ ಸಮರ್ಪಿಸಿಕೊಂಡು, ವಿಶ್ವಾತ್ಮದ ಉಸಿರಿನಲ್ಲಿ ಯೋಗಿಯು ಒಂದಾಗುವ ಸ್ಥಿತಿ ಬಾಹ್ಯ ಕುಂಬಕ ಯೋಗಿಯ ವ್ಯಕ್ತಿತ್ವವೇ ಪರಮಾತ್ಮ ನೋಡನೇ ಒಂದಾಗುತ್ತಿರುವ ಈ ಸ್ಥಿತಿಯನ್ನು ಪರಮೋಚ್ಚ ಶರಣಾಗತಿ. ಇನ್ನು ಅಂತರ್ ಕುಂಭಕವನ್ನು ಶಕ್ತಿ ಮೀರಿ ಮಾಡಬಾರದು, ನರಮಂಡಲ ಘಾಸಿಕೊಳ್ಳುತ್ತದೆ. ಅಂದರೆ ಕುಂಭಕವು ಮೆದುಳು ನರಮಂಡಲ ಹಾಗೂ ದೇಹದ ಅಂಗಾಂಗಗಳ ಮೇಲೆ ಒತ್ತಡ ಹಾಕಿ ಮಾಡುವ ಕ್ರಿಯೆಯಲ್ಲ ಹಾಗೆ ಮಾಡಿದರೆ ಹೈಪರ್ ಟೆನ್ಶನ್ ಗೆ ಅವಕಾಶ ನೀಡಿದ ಸ್ಥಿತಿಯಲ್ಲಿ ನರಮಂಡಲಗಳಿಗೆ ಚೈತನ್ಯವನ್ನು ತುಂಬಿಕೊಳ್ಳಲು ಕುಂಭಕ ಕ್ರಿಯೆ ನಡೆಸಬೇಕು. ದೇಹ ಮತ್ತು ಮೆದುಳಿನಲ್ಲಿ ಉದ್ವೇಗ ಕಂಡುಬಂದಲ್ಲಿ ಆ ಸ್ಥಿತಿಯಲ್ಲಿ ಚಿತ್ತವು ಪ್ರಾಣವನ್ನು ನಿಯಂತ್ರಿಸಲಾರದು ಎಂಬುದರ ಸೂಚಕ. ಜೊತೆಗೆ ಒಳಗಿರಿಗಳು ಪೆಡುಸಾದಲ್ಲಿ ಕಣ್ಣುಗಳು ಕೆಂಪಾಗಿ ಭಾರವಾಗಿ ಚುಚ್ಚಿದಂತೆ ಯಾತನೆಯಾದರೆ ಮುಂದುವರಿಕೆ ಬೇಡ ಎಚ್ಚರ ತಪ್ಪಿದರೆ ಅನಾಹುತ ಶಕ್ತಿ ಮೀರಿದಂತೆ ನಿಧಾನವಾಗಿ ಅವಧಿ ಹೆಚ್ಚಿಸುತ್ತಾ ಹೋಗಬೇಕು. ಉಸಿರನ್ನು ಅಂಕೆಯಲ್ಲಿ ಇಡುವುದೇ ಕುಂಭಕದ ಉದ್ದೇಶ ಅದರಿಂದ ಮಾತು ಭಾವನೆ ಆಲಿಸುವಿಕೆಗಳು ಹತೋಟಿಯಲ್ಲಿದ್ದು ಚಿತ್ತವು ಆ ಸ್ಥಿತಿಯಲ್ಲಿ ದುರ್ಗುಣಗಳಿಂದ (ಆಸೆ, ದ್ವೇಷ, ಮತ್ಸರ, ಅಹಂಕಾರಗಳಿಂದ) ಮುಕ್ತವಾಗಿ ಪ್ರಾಣದೊಡನೆ ಬೆರೆತು ಹೋಗುತ್ತದೆ.

ಮೆದುಳಿಗೆ ವಿಶ್ರಾಂತಿ ನೀಡಿದ ಸ್ಥಿತಿಯಲ್ಲಿ ನರಮಂಡಲಕ್ಕೆ ಚೈತನ್ಯ ತುಂಬಿಕೊಡಲು ಅತ್ಯಂತ ಸಹಜವಾಗಿ ಒತ್ತಡ ರೈತವಾಗಿ ಕುಂಭಕ ಕ್ರಿಯೆ ನಡೆಸಬೇಕು. ಕುಂಭಕದಲ್ಲಿ ಉಸಿರು ಹಿಡಿದಿಟ್ಟಾಗ ಇಂದ್ರಿಯಗಳು ಹಿಡಿದಿಟ್ಟಕ್ಕೆ ಬಂದು ಮನಸು ಶಾಂತವಾಗುತ್ತದೆ. ಏಕೆಂದರೆ ದೇಹ ಮನಸ್ಸು ಇಂದ್ರಿಯಗಳ ನಡುವೆ ಉಸಿರೇ ಸೇತುವೆ ಕುಂಭಕವನ್ನು ಹೆಚ್ಚು,ಹೆಚ್ಚು ನಿಧಾನವಾಗಿ ದೇಹಕ್ಕೆ ಆಯಾಸ ದಣಿವು ಮತ್ತು ಒತ್ತಡಗಳ ಆದಷ್ಟು ಇಷ್ಟಿಷ್ಟೇ ಸಾಧನೆ ಮಾಡುತ್ತಾ ಹೋಗಬೇಕು ಹಠಕ್ಕೆ ಬಿದ್ದು ಇನ್ನೊಬ್ಬರ ಜೊತೆ ಹೋಲಿಸಿಕೊಂಡು “ನಾನೇನು ಕಮ್ಮಿ” ಎಂದು ಮುಂದುವರೆಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದಿಗೂ ಯಾವುದೇ ಕಾರಣಕ್ಕೂ ಆ ರೀತಿ ಮಾಡಕೂಡದು.

ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವಿದೆ. ಅದು ಸಮಯ ಬದ್ಧ ಅಂದರೆ ಮುಂಜಾನೆಯ ಸಮಯ ಹೆಚ್ಚು ಪ್ರಶಸ್ತವಾದುದ್ದು ಅದನ್ನೇ ಮತ್ತೆ ಸಂಜೆ ಸಮಯ ಮಾಡಲು ಪ್ರಯತ್ನಿಸಿದಾಗ ಬೆಳಗಿನ ಸ್ವಲ್ಪ ದೇಹ ದಣಿದಿರುತ್ತದೆ ಮುಂಜಾನೆ ಹಾಗೆ, ಫ್ರೆಶ್ ಇರುವುದಿಲ್ಲ ಅಷ್ಟೇ.