ಮನೆ ಆರೋಗ್ಯ (ಮನೆ ಮದ್ದು) :ಕಾಳು ಮೆಣಸಿನ ಚೂರ್ಣ

(ಮನೆ ಮದ್ದು) :ಕಾಳು ಮೆಣಸಿನ ಚೂರ್ಣ

0

Join Our Whatsapp Group

ಸಂಧಿವಾತ ಒಂದು ಚಮಚದಷ್ಟು ಕಾಳುಮೆಣಸಿನ ಚೂರ್ಣವನ್ನು ಸ್ವಲ್ಪ ಎಣ್ಣೆಯಲ್ಲಿ ಸೇರಿಸಿ ಬಿಸಿ ಮಾಡಬೇಕು ಅದು ಬೆಂದು ಕರಕಲಾದಾಗ ಸಂಧಿವಾತ ಕಾಲು ನೋವು ಇವೆರಡು ಲೇಪಿಸಬೇಕು.

* ಒಂದು ಚಮಚದಷ್ಟು ಕಾಳಮೆಣಸಿನ ಚೂರ್ಣವನ್ನು ಅರ್ಧ ಬಟ್ಟಲು ಎಣ್ಣೆಯಲ್ಲಿ ಸೇರಿಸಿ ಕುದಿಸಬೇಕು. ನಂತರ ಎಣ್ಣೆಯನ್ನು ತಣಿಸಿ ಸಂಧಿವಾತ ಮೂಳೆ ನೋವು ಇರುವ ಕಡೆ ಹೆಚ್ಚಿಸಿಕೊಂಡರೆ ನೋವು ಕಡಿಮೆಯಾಗುತ್ತದೆ

*ಶುಂಠಿ ಚೂರ್ಣ, ಕಾಳು ಮೆಣಸು ಚೂರ್ಣ, ಮೆಂತ್ಯ ಚೂರ್ಣ, ಅಶ್ವಗಂಧ ಚೂರ್ಣ, ತಲ 50 ಗ್ರಾಂ ನಂತೆ ತೆಗೆದುಕೊಂಡು. ಮಿಶ್ರ ಮಾಡಬೇಕು ಈ ಮಿಶ್ರಣವನ್ನು ಒಂದು ಚಮಚದಷ್ಟು ತೆಗೆದುಕೊಂಡು ಎರಡು ಲೋಟ ನೀರಿಗೆ ಸೇರಿಸಿ ಕುದಿಸಬೇಕು. ನೀರು ಅರ್ಧ ಲೋಟದಷ್ಟು ಆದಾಗ ಕಲ್ಲು ಸಕ್ಕರೆ ಪುಡಿ ಮಾಡಿ ಸೇರಿಸಿ ಕುಡಿಯಬೇಕು ಇದನ್ನು ದಿನಕ್ಕೆರಡು ಸಲ ಮಾಡಬೇಕು ಇದರಿಂದ ಕಾಲು ನೋವು, ಮಂಡಿ ನೋವು, ಸಂಧಿವಾತ ನಿಯಂತ್ರಣಕ್ಕೆ ಬರುತ್ತದೆ. ಈ ಸಮಸ್ಯೆಗಳೊಂದಿಗೆ ಮಧುಮೇಹ ಕಷಾಯವನ್ನು ಕುಡಿಯಬೇಕು

ಕೂದಲಿನ ಆರೋಗ್ಯ :-

*ಅರ್ಧ ಬಟ್ಟಲು ಮೊಸರಿಗೆ ಅರ್ಧ ಚಮಚದಷ್ಟು ಕಾಳುಮೆಣಸು ಚೂರ್ಣವನ್ನು ಕಲಸಬೇಕು ಇದನ್ನು ತಲೆಕೂದಲಿಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ತೊಳೆಯಬೇಕು. ಇದರಿಂದ, ತಲೆ ಕೂದಲು ಸಮಸ್ಯೆಗಳು ದೂರವಾಗಿ ಹೊಳಪಿನಿಂದ ಇರುತ್ತದೆ

ಹಲ್ಲು ನೋವು :-

*ಕಾಳು ಮೆಣಸಿನ ಚೂರ್ಣದಿಂದ ಪ್ರತಿದಿನ ಹಲ್ಲು ತಿಕ್ಕುವುದರಿಂದ, ಹಲ್ಲು ನೋವಿನ ಸಮಸ್ಯೆಯಿಂದ ಮುಕ್ತರಾಗುತ್ತಾರೆ. ತೆಂಗಿನ ಚಿಪ್ಪನ್ನು ಸುಟ್ಟು ಇದ್ದಿಲು ಮಾಡಿ ಅದನ್ನು ಕುಟ್ಟಿ ನುಣ್ಣಗೆ ಪುಡಿ ಮಾಡಿ, ಇದಕ್ಕೆ ಕಾಳುಮೆಣಸು ಚೂರ್ಣ ಮತ್ತು ಉಪ್ಪು ಸೇರಿಸಿದರೆ ಒಳ್ಳೆಯ ದಂತಮಂಜನ ಸಿದ್ಧವಾಗುತ್ತದೆ. ಈ ಪುಡಿಯಿಂದ ಹಲ್ಲು ಉಜ್ಜಿದರೆ ಹಲ್ಲಿನ ಮತ್ತು ವಸಡಿನ ಸಮಸ್ಯೆ ದೂರವಾಗುತ್ತದೆ.

 ಗಂಟಲು ನೋವು :-

ಸ್ವರಭಾರಂಗವಾಗಿದ್ದರೆ, ಅರ್ಧ ಚಮಚದಷ್ಟು ಕಾಳುಮೆಣಸಿನ ಚೂರ್ಣಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಬೇಕು.

ಮಾನಸಿಕ ಸಮಸ್ಯೆಗಳು :-

*ನೆನಪಿನ ಶಕ್ತಿ ಕಡಿಮೆಯಾಗುವುದು, ಬುದ್ಧಿಶಕ್ತಿ ಕಡಿಮೆಯಾಗುವುದು, ಕೆಲಸ ಮತ್ತು ಓದಿನಲ್ಲಿ ಚುರುಕುತನ ಇಲ್ಲದಿರುವುದು ಇಂತಹ ಸಮಸ್ಯೆಗಳಿಗೆ ಕಾಳುಮೆಣಸಿನ ಚೂರ್ಣ ಒಂದು ಚಿಟಿಕೆಯಷ್ಟು ತೆಗೆದುಕೊಂಡು, ಜೇನು ತುಪ್ಪದಲ್ಲಿ ಸೇರಿಸಿ ನೆಕ್ಕುತ್ತಿರಬೇಕು.

*ಅರ್ಧ ಚಮಚ ಕಾಳು ಮೆಣಸಿನ ಚೂರ್ಣವನ್ನು ಕಲ್ಲು ಸಕ್ಕರೆ ಜೊತೆ ಸೇರಿಸಿ ನುಣ್ಣಗೆ ಪುಡಿ ಮಾಡಿ ಸ್ವಲ್ಪ ಬೆಣ್ಣೆಯನ್ನು ಸೇರಿಸಿ, ಕಲಸಬೇಕು ಇದನ್ನು ಒಂದು ತಿಂಗಳ ಕಾಲ ಬೆಳಗಿನ ಸಮಯದಲ್ಲಿ ಸೇವಿಸುತ್ತಿದ್ದರೆ ಮಾನಸಿಕ ಅಶಕ್ತತೆ, ದಣಿವು ನಿವಾರಣೆಯಾಗುತ್ತದೆ

* ಬಾದಾಮಿ ಸಿಪ್ಪೆಯನ್ನು ತೆಗೆಯಬೇಕು ಒಂದು ಬಾದಾಮಿಯನ್ನು ಅರ್ಧಚಮಚಯಷ್ಟು ಕಾಳುಮೆಣಸಿನ ಚೂರ್ಣದ ಜೊತೆಗೆ ನುಣ್ಣಗೆ ಕುಟ್ಟಿ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ದಿನದಲ್ಲಿ ಮೂರು ಸಲ ಸೇವಿಸಿದ್ದರೆ ಉಗ್ಗುವಿಕೆ (ತೊದಲುವುದು) ನಿಲ್ಲುತ್ತದೆ.

ಪುರುಷರ ಸಮಸ್ಯೆ :-

*ಪ್ರತಿದಿನ ಕಾಲು ಚಮಚ ಕಾಳು ಮೆಣಸಿನ ವನ್ನು ನಾಲ್ಕು ಬಾದಾಮಿಯೊಂದಿಗೆ ಸೇರಿಸಿ ಹಾಲಿನೊಡನೆ ಸೇವಿಸುತ್ತಿದ್ದರೆ ನಪುಂಸಕತೆ ನಿವಾರಣೆಯಾಗುತ್ತದೆ. ಪೌರುಷ ಹೆಚ್ಚುತ್ತದೆ ಮೆದುಳಿನ ಕಾರ್ಯಕ್ಷಮತೆಯು ಹೆಚ್ಚಾಗುತ್ತದೆ

*ಒಂದು ಲೋಟ ಹಾಲಿಗೆ ಅರ್ಧ ಚಮಚ ಕಾಳು ಮೆಣಸು ಚೂರ್ಣ ಹಾಕಿ ಕುದಿಸಿ ಬೆಳಗ್ಗೆ ಮತ್ತು ಸಂಜೆ ಕುಡಿಯುದರಿಂದ ವೀರ್ಯ ವೃದ್ದಿಯಾಗುತ್ತದೆ.

ನೆಗಡಿ, ಶೀತ, ಕೆಮ್ಮು, ಅಸ್ತಮ :-

ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚದಷ್ಟು ಕಾಳು ಮೆಣಸಿನ ಚೂರ್ಣ ಮತ್ತು ಸ್ವಲ್ಪ ಕಲ್ಲು ಸಕ್ಕರೆ ಸೇರಿಸಿ ಕುಡಿಯುತ್ತಿದ್ದರೆ ನೆಗಡಿಯ ಪ್ರಕೋಪ ಕಡಿಮೆಯಾಗುತ್ತದೆ

*ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚದಷ್ಟು ಕಾಳಿನ ಚೂರ್ಣ ಮತ್ತು ಸ್ವಲ್ಪ ಕಲ್ಲು ಸಕ್ಕರೆ ಸೇರಿಸಿ ಕುಡಿಯುತ್ತಿದ್ದರೆ ನೆಗಡಿಯ ಪ್ರಕೋಪ ಕಡಿಮೆಯಾಗುತ್ತದೆ.

*ಒಣಶುಂಠಿ ಚೂರ್ಣ ಕಾಳಮೆಣಸು ಚೂರಣ ಹಿಪ್ಪಲಿ ಹುಡಿ ಹೋಮ ಹುಡುಗಿ ಜೀರಿಗೆ ಹುಡಿ, ಲವಂಗ ಹುಲಿ ಇವನು ತಲ ಅರ್ಧ ಚಮಚಗಳಂತೆ ತೆಗೆದುಕೊಳ್ಳಬೇಕು ತುಳಸಿ ಚೂರ್ಣ ಅಡುಗೆ ಸೋಗೆ ಚೂರ್ಣ ಮತ್ತು ನೆಲಗುಳ್ಳ ಚೂರ್ಣ ಇವನು ಸಹ ತಲಾ ಅರ್ಧ ಚಮಚ ತೆಗೆದುಕೊಳ್ಳಬೇಕು ಇವೆಲ್ಲವನ್ನು ಎರಡು ಲೋಟ ನೀರಿಗೆ ಹಾಕಿ ಕುದಿಸಿ ಅದನ್ನು ಒಂದು ಲೋಟದಷ್ಟು ಆದಾಗ ಶೋಧಿಸಿ ಇಡಬೇಕು.

ಈ ಕಷಾಯವನ್ನು ದಿನಕ್ಕೆ ಮೂರು ಸಲ ಒಂದೊಂದು ಚಮಚಯಂತೆ ಜೇನುತುಪ್ಪದೊಡನೆ ಸೇವಿಸಿದರೆ ಅಸ್ತಮಾ ಅಲರ್ಜಿ ಮೊದಲಾದ ಹಳೆಯ ಕಾಯಿಲೆಗಳು ಉಪಶಮನವಾಗುತ್ತದೆ

*ಅರ್ಧ ಬಟ್ಟಲಿನಷ್ಟು ಮೊಸರಿಗೆ ಅರ್ಧ ಚಮಚ ಕಾಳು ಮೆಣಸು ಚೂರ್ಣವನ್ನು ಸೇರಿಸಬೇಕು ಇದಕ್ಕೆ ಸ್ವಲ್ಪ ಬೆಲ್ಲದ ಹುಳಿ ಸೇರಿಸಿ ಮಿಶ್ರಣ ಮಾಡಿ ಸೇವಿಸಬೇಕು ಇದನ್ನು ದಿನಕ್ಕೆ ಎರಡು ಸಲದಂತೆ ಮೂರು ನಾಲ್ಕು ದಿನಗಳ ಕಾಲ ಮಾಡಿದರೆ ಶೀತ ನೆಗಡಿ ನಿವಾರಣೆ ಆಗುತ್ತದೆ.

ಹೊಟ್ಟೆಯ ಸಮಸ್ಯೆಗಳು :-

*ಅನೇಕರಿಗೆ ಊಟದಲ್ಲಿ ತುಪ್ಪವನ್ನು ಬಳಸುವ ಅಭ್ಯಾಸ ಇರುತ್ತದೆ. ತುಪ್ಪ ಆಯುರ್ವೇದ ದೃಷ್ಟಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದನ್ನು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ ತುಪ್ಪವನ್ನು ಬಳಸಿ ಮಾಡುವ ಅಡುಗೆಯಲ್ಲಿ ಕಾಳು ಮೆಣಸಿನ ಚೂರ್ಣವನ್ನು ಸೇವಿಸುವುದರಿಂದ ತುಪ್ಪದ ಅಡುಗೆ ಜೀರ್ಣವಾಗುತ್ತದೆ

*ನಾಲ್ಕು ಚಮಚ ಈರುಳ್ಳಿ ರಸಕ್ಕೆ ಅರ್ಧ ಚಮಚದಷ್ಟು ಕಾಳುಮೆಣಸು ಚೂರ್ಣ ಸೇರಿಸಿ ಸೇವಿಸುವುದರಿಂದ ವಾಕರಿಕೆ ಮತ್ತು ವಾಂತಿಯಾಗುವ ಸಮಸ್ಯೆ ನಿವಾರಣೆಯಾಗುತ್ತದೆ

*ಎರಡು ಚಿಟಿಕೆಯಷ್ಟು ಕಾಳಿ ಮೆಣಸಿನ ಚೂರ್ಣಕ್ಕೆ ಮೂರು-ನಾಲ್ಕು ಹನಿ ಜೇನುತುಪ್ಪ ಮತ್ತು ಸ್ವಲ್ಪ ತುಪ್ಪ ಸೇರಿಸಿ ಕಲಸಿ ನಾಲ್ಕೈದು ವಾರಗಳ ಕಾಲ ದಿನಕ್ಕೆರಡು ಬಾರಿ ಅಂತ ಸೇವಿಸುತ್ತಿದ್ದರೆ ಹೊಟ್ಟೆಯ ಆಮ್ಲಿಯತೆ ಸಮಸ್ಯೆ ಗುಣವಾಗುತ್ತದೆ

*ಅನ್ನಕ್ಕೆ ಸ್ವಲ್ಪ ಕಾಳುಮೆಣಸು ಚೂರ್ಣ ಉಪ್ಪು ಮತ್ತು ತುಪ್ಪವನ್ನು ಸೇರಿಸಿ ಸೇವಿಸಿದರೆ ಅ ಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.

* ಮಜ್ಜಿಗೆ ಸ್ವಲ್ಪ ಕಾಳುಮೆಣಸಿನ ಚೂರ್ಣ ಮತ್ತು ಸೈಂಧವ ಲವಣ ಸೇರಿಸಿ ಕುಡಿಯುತ್ತಿದ್ದರೆ ಹೊಟ್ಟೆನೋವು ನಿವಾರಣೆಯಾಗುತ್ತದೆ.

ಮಕ್ಕಳ ಸಮಸ್ಯೆಗಳು :-

*ಅರ್ಧಬಟ್ಟಲು ಬಿಸಿ ಹಾಲಿಗೆ ಅರ್ಧ ಚಮಚದಷ್ಟು ಕಾಳುಮೆಣಸು ಚೂರ್ಣವನ್ನು ಸೇರಿಸಬೇಕು. ಒಂದು ತುಂಡು ಕಲ್ಲು ಸಕ್ಕರೆ ಕುಟ್ಟಿ ಪುಡಿ ಮಾಡಿ ಇದಕ್ಕೆ ಸೇರಿಸಿ ಕುಡಿಯಲು ಕೊಡಬೇಕು.

ಇದನ್ನು ಪ್ರತಿದಿನ ಮಾಡುವುದರಿಂದ ಚಿಕ್ಕ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಅವರ ಬೆಳವಣಿಗೆಗೆ ನೆರವಾಗುತ್ತದೆ.

ಚಳಿಗಾಲ ಮಳೆಗಳ ಆರಂಭವಾಗುವ ಮುನ್ನ 3-4 ವಾರಗಳ ಕಾಲ ಇದನ್ನು ಕೊಡುವುದರಿಂದ ಮಕ್ಕಳ ರೋಗ ಮುಕ್ತರಾಗಿ ಬೆಳೆಯುತ್ತಾರೆ.

ಪಶು ವೈದ್ಯದಲ್ಲಿ :-

*ಪಶುಗಳಿಗೆ ಬರುವ ಹುಳುಗಳ ಕಾಟವನ್ನು ನಿವಾರಿಸಲು ಕಾಳುಮೆಣಸು ಬಳಸಬಹುದು ತೆಂಗಿನಕಾಯಿಯನ್ನು ತುರಿದು ಅದರ ಹಾಲನ್ನು ಹಿಂಡಿಕೊಳ್ಳಬೇಕು ಅದಕ್ಕೆ ಕಾಳುಮೆಣಸಿನ ಚೂರ್ಣವನ್ನು ಸೇರಿಸಿ, ಅದರ ಮುಲಾಮಿನಂತೆ ಮಾಡಿಕೊಳ್ಳಬೇಕು. ಇದನ್ನು ಹುಳುಗಳ ನಿವಾರಣೆಗೆ ಪ್ರಾಣಿಗಳಿಗೆ ಲೇಪಿಸಬಹುದು.

*ಪಶುಗಳ ಮೊಲ ಮತ್ತು ಮೂತ್ರವು ಬಾರದೇ ಇರುವ ಪರಿಸ್ಥಿತಿಯಲ್ಲಿ ಕಾಳುಮೆಣಸು ಚೂರ್ಣವನ್ನು ನಿಂಬೆ ಗಾತ್ರದ ಬೆಣ್ಣೆಯಲ್ಲಿ ಚೆನ್ನಾಗಿ ಕಲಸಿ ಪಶುಗಳ ಎರಡು ಕಣ್ಣುಗಳ ರೆಪ್ಪೆಯೊಳಗೆ ಲೇಪಿಸಬೇಕು ಇದನ್ನು ಒಂದು ಸಲ ಮಾತ್ರ ಮಾಡಬೇಕು.