ಮನೆ ದೇವಸ್ಥಾನ ಪಾತಾಳೇಶ್ವರ ದೇವಾಲಯ

ಪಾತಾಳೇಶ್ವರ ದೇವಾಲಯ

0

ಮೈಸೂರು(Mysuru): ತಲಕಾಡಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಪಾತಾಳೇಶ್ವರ ದೇವಾಲಯವು ಒಂದು.

ಮೂಲಗಳ ಪ್ರಕಾರ ಈ ದೇವಾಲಯವು ತಲಕಾಡಿನಲ್ಲಿ ಗಂಗರು ನಿರ್ಮಿಸಿದ ಮೊಟ್ಟಮೊದಲ ದೇಗುಲಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.

ಪಾತಾಳೇಶ್ವರ ದೇವಾಲಯದಲ್ಲಿ ದಿನದ ವಿವಿಧ ವೇಳೆಯಲ್ಲಿ ವಿವಿಧ ಬಣ್ಣದಿಂದ ಕಾಣುವ ಶಿವಲಿಂಗವು ತನ್ನ ಅಚ್ಚರಿಯಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಈ ಶಿವಲಿಂಗವು ಬೆಳಗಿನ ಜಾವದಲ್ಲಿ ಕೆಂಪಾಗಿ ಕಾಣುತ್ತದೆ. ಮಧ್ಯಾಹ್ನ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ರಾತ್ರಿ ಈ ಲಿಂಗ ಬಿಳಿ ಬಣ್ಣಕ್ಕೆ ತಿರುಗುತ್ತದೆ.

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪಂಚಲಿಂಗ ದರ್ಶನ ಸಮಯದಲ್ಲಿ ಇದು ಯಾತ್ರಿಗಳ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ.

ಹಿಂದಿನ ಲೇಖನರಾಣಿ 2ನೇ ಎಲಿಜಬೆತ್ ನಿಧನ: ಹಳೆಯ ವಿಡಿಯೋ ಹಂಚಿಕೊಂಡು ಸಂತಾಪ ಸೂಚಿಸಿದ ಯದುವೀರ್ ಒಡೆಯರ್
ಮುಂದಿನ ಲೇಖನಬದಲಾದ ಜೀವನ ಶೈಲಿ, ಒತ್ತಡದಿಂದ ಹೃದಯಾಘಾತ ಹೆಚ್ಚಳ: ಡಾ.ಸಿ.ಎನ್ ಮಂಜುನಾಥ್