ಮನೆ ವ್ಯಕ್ತಿತ್ವ ವಿಕಸನ ಸಂಯೋಜನಾ ದಕ್ಷತೆ

ಸಂಯೋಜನಾ ದಕ್ಷತೆ

0

ಪಠ್ಯದಲ್ಲಿ ನಿಮಗೆ ಆಲಿಪ್ತ ನೀತಿ ಎಂಬ ಒಂದು ನೀತಿಯ ವಿವರಣೆ ಬರುತ್ತದೆ. ಇದನ್ನು ಸಾಕಷ್ಟು ಮಂದಿ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿ ಶೀತಲ ಯುದ್ಧವು ನಡೆಯುತ್ತಿದ್ದಾಗ, ಒಂದು ರಷ್ಯಾದ ಬಣ ಇನ್ನೊಂದು ಅಮೇರಿಕದ ಬಣ ಇತ್ತು ಇವೆರಡಕ್ಕೂ ಸೇರಿದ ರಾಷ್ಟ್ರಗಳೇ ಅಲಿಪ್ತ ರಾಷ್ಟ್ರಗಳು ಅಂದರೆ ಅಲಿಪ್ತ ನೀತಿಯ ರಾಷ್ಟ್ರಗಳು ಜಗತ್ತಿನ ಹಾಗೂ ಹೋಗುಗಳ ವಿಚಾರದಲ್ಲಿ ತಟಸ್ಥವಾಗಿರುತ್ತದೆ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳುವವರು ಇದ್ದಾರೆ. ಆದರೆ ಅಲಿಪ್ತ ರಾಷ್ಟ್ರಗಳ ಧೋರಣೆ ಇದಲ್ಲ ಜಾಗತಿಕ ವಿಚಾರಗಳಲ್ಲಿ ಅವು ತಟಸ್ಥವಾಗಿರುವುದಿಲ್ಲ ಕ್ರಿಯಾಶೀಲವಾಗಿರುತ್ತವೆ. ಆದರೆ ರಷ್ಯಾದ ಪರವಾಗಿಯೂ ವಿವರಿಸುವುದಿಲ್ಲ, ಅಮೇರಿಕದ ಪರವಾಗಿಯೂ ವಿವರಿಸುವುದಿಲ್ಲ, ಬದಲು ಸ್ವತಂತ್ರವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತವೆ.

ಇದೇ ರೀತಿ ನಿತ್ಯ ಜೀವನದಲ್ಲಿ ಹೊಂದಾಣಿಕೆ ಎಂಬ ಪರಿಕಲ್ಪನೆಯು ತಪ್ಪಾಗಿ ಅರ್ಥೈಸಲ್ಪಟ್ಟಿದೆ ಯಾವುದೇ ಸನ್ನಿವೇಶದಲ್ಲಿ ಎಲ್ಲದಕ್ಕೂ ಹೌದು ಎನ್ನುವುದನ್ನೇ ಹೊಂದಾಣಿಕೆ ಎಂದು ಭಾವಿಸುವುದು ತಪ್ಪು. ಎಲ್ಲ ಸನ್ನಿವೇಶದಲ್ಲಿಯೂ ತನಗೆ ಲಾಭ ಸಿಗುವಂತೆ ವರ್ತಿಸುವ ಅನುಕೂಲ ಸಿಂಧು ಪ್ರವೃತ್ತಿಯಾಗಲಿ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಪಾಲಾಯನವಾದವಾಗಲಿ ಹೊಂದಾಣಿಕೆ ಎನಿಸಿಕೊಳ್ಳುವುದಿಲ್ಲ. ಹೊಂದಾಣಿಕೆ ಎಂದರೆ ಸನ್ನಿವೇಶದೊಂದಿಗಿನ ಸಂಯೋಜನೆಯಾಗಿದೆ.

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದು ವ್ಯಕ್ತಿತ್ವ ಇರುತ್ತದೆ. ಅದು ಒಳ್ಳೆಯ  ವ್ಯಕ್ತಿತ್ವವಿರಬಹುದು, ಕೆಟ್ಟ ವ್ಯಕ್ತಿತ್ವವಿರಬಹುದು, ವಿಕಾಸಗೊಂಡಿರದೇ ಇರುವ ವ್ಯಕ್ತಿತ್ವವು ಇರಬಹುದು ಆದರೆ ವ್ಯಕ್ತಿತ್ವವನ್ನು ಇದ್ದೇ ಇರುತ್ತದೆ. ಯಾವುದೇ ಸನ್ನಿವೇಶದಲ್ಲಿ ತನ್ನ ವ್ಯಕ್ತಿತ್ವದ ತೊಡಗಿಸಿ ಕೊಳ್ಳುವಿಕೆಯ ಸ್ವರೂಪವೇ ಸಂಯೋಜನೆ ವ್ಯಕ್ತಿಯು ಸಂಯೋಜಿಸುವ ಕ್ರಮದಲ್ಲಿ ಸಮರ್ಪಕತೆಯನ್ನು ಉಂಟುಮಾಡಿದರೆ ಆಗ ವ್ಯಕ್ತಿತ್ವದ ವಿಕಾಸವಾಗುತ್ತದೆ.

ವ್ಯಕ್ತಿತ್ವದ ಸಂಯೋಜನೆಯು ಮಾನಸಿಕವಾಗಿ ದೈಹಿಕವಾಗಿ ಭಾವನಾತ್ಮಕವಾಗಿ ನಡೆಯುತ್ತದೆ. ಸಮರ್ಪಕ ಸಂಯೋಜನೆ ಉಂಟಾಗಬೇಕಾದರೆ, ವ್ಯಕ್ತಿಯ ಅಗತ್ಯಗಳ ಪೂರೈಕೆ ಆಗಬೇಕು. ಅಂತಹ ಅಗತ್ಯಗಳು ಎರಡು ರೂಪದಲ್ಲಿರುತ್ತವೆ ಮೊದಲನೆಯದು ಬೌತಿಕ ಅಗತ್ಯಗಳು ಆಹಾರ ನೀರು ಭದ್ರತೆಗಳೆಲ್ಲ ಭೌತಿಕ ಅಗತ್ಯಗಳಾಗಿವೆ. ಎರಡನೆಯದು ಸಾಮಾಜಿಕ ಅಗತ್ಯಗಳು ಪ್ರೀತಿ ಕರುಣೆ ಸ್ವಾತಂತ್ರ್ಯ ಮುಂತಾದ ತಾತ್ವಿಕ ಅಂಶಗಳು ಜೀವನ ಮೌಲ್ಯಗಳು ಸಾಮಾಜಿಕ ಅಗತ್ಯಗಳಾಗಿವೆ. ವ್ಯಕ್ತಿತ್ವದ ವಿಕಾಸ ನಡೆಯುವುದು ಸಾಮಾಜಿಕ ಅಗತ್ಯಗಳಿಂದ ಆದ್ದರಿಂದ ನಮ್ಮ ಸಾಮಾಜಿಕ ಅಗತ್ಯಗಳ ಗುರುತಿಸುವಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ವಿಮರ್ಶನಾತ್ಮಕತೆ, ಅರ್ಪಣಾ ಮನೋಭಾವ, ಸ್ನೇಹ, ಉತ್ಸಾಹ, ಹಾಸ್ಯ ಪ್ರವೃತ್ತಿ, ಮಾನಸಿಕ ಸಮತೋಲನ, ತಾಳ್ಮೆ ಮತ್ತು ಧೈರ್ಯ ಸಮಾಜ ಸೇವೆ ಆಲೋಚನಾ ಪ್ರವೃತ್ತಿ ಇವೆಲ್ಲ ಸಮರ್ಪಕ ಸಂಯೋಜನೆ ಏರ್ಪಡಿಸಿಕೊಳ್ಳಲು ಬೇಕಾದ ಗುಣ ಸ್ವಭಾವಗಳಾಗಿವೆ. ನಿಮ್ಮಲ್ಲಿ ಒಳ್ಳೆಯ ಗುಣ ಸ್ವಭಾವಗಳನ್ನು ಬೆಳೆಸಿಕೊಂಡು ಸಂಯೋಜನಾ ದಕ್ಷತೆಯನ್ನು ಹೆಚ್ಚಿಸಿಕೊಳ್ಳಿ.