ಮನೆ ಪೌರಾಣಿಕ ಸೃಷ್ಟಿಯ ಕ್ರಮ ವರ್ಣನೆ

ಸೃಷ್ಟಿಯ ಕ್ರಮ ವರ್ಣನೆ

0

ಪೃಥ್ವಿ (ನೆಲ) ನಾರಾ(ನೀರು), ತೇಜಸ್ಸು(ಬೆಳಕು), ವಾಯು(ಗಾಳಿ), ಆಕಾಶ, ಇಂದ್ರಿಯಗಳಿಗೆ ಗೋಚರವಾದ ಚೈತನ್ಯಶಕ್ತಿ ಎಂಬ ಆರು ಧಾತುವರ ಸಂಯೋಗದಿಂದ ಬ್ರಹ್ಮಾಂಡವು ಏರ್ಪಡುತ್ತಿದೆ.

ಈ ಆರರಲ್ಲೂ ಮೊದಲನೆಯದಾದ ಪೃಥ್ವಿ ಎಲ್ಲಕ್ಕಿಂತ ಸ್ಥೂಲವಾದುದು. ಆಕಾಶವು ಚೈತನ್ಯ ಶಕ್ತಿಯು ಸರ್ವವ್ಯಾಪಕವಾದುದು. ಶಬ್ದವು ಆಕಾಶಕ್ಕೆ ವ್ಯಕ್ತವಾದ ಗುಣ. ಅದು ಬ್ರಹ್ಮವೆಂದು ವ್ಯವಹಾರಿಸಲ್ಪಡುತ್ತಿದೆ. ಶಬ್ದದಲ್ಲಿ ಅನಾಹತ, ಅಹತಗಳೆಂದು ಎರಡು ವಿಧಗಳಿವೆ.

ಅನಾಹತವಾದಂತಹ ಮೂಲ ನಾದವನು ಅಹತವಾದಾಗ ಶಬ್ದ ಪರಮಾಣುಗಳಾಗಿ ಸಂಯೋಗವನ್ನು ಹೊಂದುತ್ತದೆ. ಗಾಳಿಯಿಲ್ಲದೆ ನಿಶ್ಚಲವಾಗಿರುವ ಸಮಯದಲ್ಲಿ ಸಮುದ್ರದ ನೀರು ಆರು ಗಡದೆ ಇದ್ದು ಅಲುಗಾಡದೇಯಿದ್ದು ಗಾಳಿ ಬಂದಾಗ ಅಲೆಗಳು ಹುಟ್ಟುವಂತೆಯೇ ನಿಶ್ಚಲವಾದ ಅನಾಹುತದಲ್ಲಿ ಈಶ್ವರ ಕರ್ಮವೆಂಬ ನಿಯತ್ತ ಕಾರಣದಿಂದ ಸೂಕ್ಷ್ಮವಾದ ತರಂಗಗಳು ಹುಟ್ಟಿ ಶಬ್ದವು ಅಹತವಾಗಿ ಬದಲಾಗುತ್ತದೆ. ಆಗ ಆಕಾಶ ಪರಮಾಣುಗಳು ಸಂಯೋಗ ಹೊಂದಿ ಶಬ್ದ ಪರಮಾಣುಗಳು ಏರ್ಪಡುತ್ತದೆ ಆಕಾಶ ತತ್ವದಲ್ಲಿ ಶಬ್ದ ಸ್ವರೂಪವ…