ಗದಗ: ದೋಬಿ ಘಾಟ್ ಬಳಿ ಕಾರಿಗೆ ಬೈಕ್ ಡಿಕ್ಕಿಯಾಗಿದ್ದು, ಕಾರಿನ ವೇಗ ಮತ್ತು ಬೈಕ್ ವೇಗ ನಿಧಾನವಾಗಿ ಇದ್ದಿದ್ದರಿಂದ ಅನಾಹುತ ತಪ್ಪಿದೆ.
ಪಾರ್ವತಿ ಪೆಟ್ರೋಲ್ ಬಂಕ್ ನಿಂದ ಕಾರು ಹೊರ ಬರುತ್ತಿದ್ದಾಗ ಕಾರ್ ಗೆ ಬೈಕ್ ಡಿಕ್ಕಿಯಾಗಿದೆ. ಬೈಕ್ ಡಿಕ್ಕಿ ಹೊಡೆದ ನಂತರ ಕಾರಿನ ಚಾಲಕನ ನಿಯಂತ್ರಣ ತಪ್ಪಿದ್ದು, ಡಿವೈಡರ್ ಮೇಲೆ ಕಾರ್ ಹತ್ತಿಸಿ ಪುನಃ ಪೆಟ್ರೋಲ್ ಬಂಕ್ ಒಳಗಡೆ ಕಾರು ಸಾಗಿದೆ
ಈ ದೃಶ್ಯ ಪೆಟ್ರೋಲ್ ಬಂಕ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.